ನನ್ನ ಚಿಂತೆ
ನಾನು ಸಂಪದ ಅಂತರ್ ಜಾಲ ತಾಣವ ವೀಕ್ಷಿಸಲು ಒಂದು ತಿಂಗಳಿನಿಂದ ಸಾಧ್ಯವಾಗಲಿಲ್ಲ. ಅನೇಕ ವಿಚಾರಗಳಿಂದ ನಾನು ನನ್ನ ಓದುವ ಹಾಗೂ ಬರೆಯುವ ಹವ್ಯಾಸದಿಂದ ದೂರ ಊಳಿದೆ. ಏಕೆಂದರೆ ನನ್ನ ಆರೋಗ್ಯವು ಹದಗೆಟ್ಟಿತ್ತು. ನನಗೆ ಅಪೆಂಡಿಕ್ಸ್ ಆದ ಕಾರಣ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ ಮಾಡಿಸಿಕೊಂಡೆ. ನನ್ನ ಆರೋಗ್ಯ ಸುಧಾರಿಸಿಕೊಳ್ಳಲು ಒಂದು ತಿಂಗಳು ಬೇಕಾಗಿತು ಹಾಗೆಯೇ ನಾನು ಅಂತರ್ ಜಾಲ ತಾಣಕ್ಕೆ ಬೇಟೆ ನೀಡಬೇಕಾದರೆ ಪಟ್ಟಣಕ್ಕೆ ಬರಬೇಕು. ನಮ್ಮ ಹಳ್ಳಿಗಳಲ್ಲಿ ಅಂತರ್ ಜಾಲ ತಾಣದ ವ್ಯವಸ್ಥೆಯಿಲ್ಲ ಆದ್ದರಿಂದ ಈ ಎಲ್ಲಾ ಕಾರಣಗಳಿಂದ ನನ್ನ ಮನದಾನಳದಲ್ಲಿ ಒಂದು ಚಿಂತೆ ಕಾಡುತ್ತಿತ್ತು ಅದು ನನ್ನ ಚಿಂತೆ ನಾನು ಇನ್ನು ಮುಂದೆ ಸಂಪದ ಅಂತರ್ ಜಾಲ ಸಂಪರ್ಕ ಹೊಂದಲು ಸಾಧ್ಯವಾಗುವುದೇ ಏನು ಇಲ್ಲವೆ ಅಂತ ಏಕೆಂದರೆ ನನ್ನ ಆರೋಗ್ಯ ಸುಧಾರಣೆ ಆಗಿ ನಾನು ಜೀವಂತವಾಗಿ ಇರುವುದು ಖಚಿತವೋ ಅಖಚಿತವೋ ಎಂಬ ಮತ್ತೋಂದು ಬಗೆಯ ನನ್ನ ಚಿಂತೆ ಒಂದು ತಿಂಗಳ ದಿನವಿಡಿ ಹಗಲು ಇರುಳು ಎನ್ನದೆ ನನ್ನ ಚಿಂತೆ ನನ್ನ ಮನದಾಳದೊಳಗೆ ಕಾಡುತ್ತಿತ್ತು. ಆ ಚಿಂತೆಯಿಂದ ಮುಕ್ತನಾಗಲು ನಾನಿಂದು ನನ್ನ ಅಚ್ಚು ಮೆಚ್ಚಿನ ಅಂತರ್ ಜಾಲ ತಾಣವಾದ ಸಂಪದದಲ್ಲಿ ನನ್ನ ಅಂತರಾಳದ ಮನದ ಚಿಂತನೆಯನ್ನು ಹಂಚಿಕೊಂಡು ನನ್ನ ಚಿಂತೆಯಿಂದ ಹೊರ ಬರಲು ಪ್ರಯತ್ನ ಅಷ್ಟೆ.
ಹೆಚ್. ವಿರುಪಾಕ್ಷಪ್ಪ ತಾವರಗೊಂದಿ.
Comments
ಉ: ನನ್ನ ಚಿಂತೆ
ಉ: ನನ್ನ ಚಿಂತೆ
ಉ: ನನ್ನ ಚಿಂತೆ