ಪೀಟರ್ ನ ಮಗ : ಅಪ್ಪ ನಂಬಿಕೆ ಹಾಗೂ ರಹಸ್ಯದ ವ್ಯತ್ಯಾಸ ಏನು?
ಪೀಟರ್ : ನೀನು ನನ್ನ ಮಗ, ಅದು ನಂಬಿಕೆ - ನಿನ್ನ ಸ್ನೇಹಿತನೂ ನನ್ನ ಮಗ, ಅದು ರಹಸ್ಯ
_____________________________________________________________
ಕೆಲಸದಾಕೆ : ಅಮ್ಮಾವ್ರೇ ನಿಮ್ಮ ಹಳೆಯ ಸೀರೆಗಳನ್ನು ನನಗೆ ಕೊಡಬೇಡಿ
ಮನೆಯಾಕೆ : ಯಾಕೆ ಏನಾಯ್ತು?
ಕೆಲಸದಾಕೆ : ಆ ಸೀರೆಗಳನ್ನು ಉಟ್ಟರೆ ನಿಮ್ಮೆಜಮಾನರು ನೀವೆಂದು ತಿಳಿದು ನನ್ನ ಬಳಿಯೂ ಬರುವುದಿಲ್ಲ
________________________________________________________________
ಜಾನ್ : ಡೆಟಾಲ್ ಸೋಪ್ ಇದ್ಯಾ
ಪೀಟರ್ : ಹಾ ಇದೆ
ಜಾನ್ : ಚೆನ್ನಾಗಿದ್ಯ?
ಪೀಟರ್ : ಹಾ ಚೆನ್ನಾಗಿದೆ
ಜಾನ್ : ಒಳ್ಳೆ ಕ್ವಾಲಿಟಿ ತಾನೇ?
ಪೀಟರ್ : ಹೌದಪ್ಪ ಒಳ್ಳೆ ಕ್ವಾಲಿಟಿನೆ ಯಾಕೆ
ಜಾನ್ : ಹಾಗಿದ್ರೆ ಅದ್ರಲ್ಲಿ ಚೆನ್ನಾಗಿ ಕೈ ತೊಳೆದು ಒಂದು ಕಿಲೋ ಅಕ್ಕಿ ಕೊಡು
________________________________________________________________
ಪೀಟರ್ : ಡಾಕ್ಟರ ನೀವು ಹೇಳಿದ್ರಿ ಬೆಳಗ್ಗಿನ ಹೊತ್ತು ಚೆನ್ನಾಗಿ ಆಟ ಆಡಿದರೆ ದೇಹ ಆರೋಗ್ಯವಾಗಿರುತ್ತೆ ಅಂತ, ಆದರೆ ಏನೂ ಪ್ರಯೋಜನವಾಗಲಿಲ್ಲ..
ಡಾಕ್ಟರ : ಯಾವ ಆಟ ಆಡಿದಿರಿ?
ಪೀಟರ್ : ಡಾಕ್ಟರ, ಮೊಬೈಲ್ ನಲ್ಲಿ Snake ಆಟ ಆಡಿದೆ !!!
_________________________________________________________________
ಪೀಟರ್ ಸಿಗರೇಟಿಗೆ ಹತ್ತಿಂಚು ಉದ್ದದ ಪೈಪ್ ಸೇರಿಸಿ ಸೇದುತ್ತಿದ್ದ. ಅದನ್ನು ನೋಡಿದ ಜಾನ್ ಕೇಳಿದ
ಜಾನ್ : ಏನೋ ಪೀಟರ್ ಇಷ್ಟುದ್ದ ಪೈಪ್ ಸೇರಿಸಿ ಸಿಗರೆಟ್ ಸೇದುತ್ತಿದ್ದಿಯ ಯಾಕೆ?
ಪೀಟರ್ : ಡಾಕ್ಟರ ಹೇಳಿದ್ದಾರೆ ಬೀದಿ ಸಿಗರೆಟ್ ಇಂದ ದೂರವಿರು ಎಂದು ಅದಕ್ಕೆ...
___________________________________________________________________
ಜಾನ್ : ಯಾಕೋ ಬೇಜಾರಾಗಿದ್ದೀಯ?
ಪೀಟರ್ : ನಾನು ಅಪ್ಪ ಆಗುತ್ತಿದ್ದೀನಿ
ಜಾನ್ : ಅದಕ್ಕೆ ಯಾಕೆ ಬೇಜಾರು?
ಪೀಟರ್ : ಈ ವಿಷಯ ನನ್ನ ಹೆಂಡತಿಗೆ ಗೊತ್ತಿಲ್ಲ....
___________________________________________________________________
ಪೀಟರ್ ಟ್ಯೂಬ್ ಲೈಟ್ ಕೆಳಗೆ ಬಾಯಿ ತೆರೆದು ನಿಂತಿದ್ದಾನೆ ಏಕೆ ಹೇಳಿ?
ಅವನಿಗೆ ಡಾಕ್ಟರ ಹೇಳಿದ್ದಾರೆ ರಾತ್ರಿ ಊಟ "ಲೈಟ್" ಆಗಿರಬೇಕೆಂದು.
_______________________________________________
ಒಂದು ಬೀದಿ ನಾಯಿ ಪೀಟರ್ ನನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು, ಆದರೂ ಪೀಟರ್ ನಗುತ್ತಿದ್ದ
ಪಕ್ಕದಲ್ಲಿದ್ದ ಜಾನ್ ಕೇಳಿದ ಯಾಕೆ ನಗುತ್ತಿದ್ದೀಯ?
ಪೀಟರ್ ಹೇಳಿದ ನನ್ನ ಬಳಿ ಇರುವುದು ಏರ್ಟೆಲ್ ಫೋನ್ ಆದರೂ ಹಚ್ ನಾಯಿ ನನ್ನನ್ನು ಹಿಂಬಾಲಿಸುತ್ತಿದೆ
__________________________________________________
ಪೀಟರ್ ಗೆ ರಾತ್ರಿ ತಾನು ಕೊಲೆ ಆದ ಹಾಗೆ ಕನಸು ಬಿಟ್ಟು. ಮರುದಿನವೇ ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿಬಿಟ್ಟ ಏಕೆ ಗೊತ್ತೇ?
ಆ ಬ್ಯಾಂಕಿನ ಅಡಿಬರಹ ಹೀಗಿತ್ತು. "ನಿಮ್ಮ ಕನಸುಗಳನ್ನು ನಾವು ಸಾಕಾರಗೊಳಿಸುತ್ತೇವೆ"
______________________________________________________
ಪೀಟರ್ ನ ಹೆಂಡತಿ : ರೀ ನಮ್ಮ ಅಡುಗೆ ಮನೆಗೆ ಕಳ್ಳ ನುಗ್ಗಿದಾನೆ, ಅವನು ನಾನು ಮಾಡಿದ್ದ ಕೇಕ್ ತಿನ್ನುತ್ತಿದ್ದಾನೆ
ಪೀಟರ್ : ಹಾಗಿದ್ದರೆ ನಾನು ಯಾರಿಗೆ ಫೋನ್ ಮಾಡಲಿ, ಪೋಲಿಸ್ ಗೋ ಅಥವಾ ಆಂಬುಲೆನ್ಸ್ ಗೋ?
_________________________________________________________
ಪೀಟರ್ ಒಮ್ಮೆ ತನ್ನ ಹೆಂಡತಿಯನ್ನು ಭೇಟಿ ಮಾಡಲು ಆಕೆಯ ಆಫಿಸಿಗೆ ಹೋದಾಗ ಅಲ್ಲಿ ಆತನ ಹೆಂಡತಿ ಅವನ ಬಾಸ್ ನ ತೊಡೆಯ ಮೇಲೆ ಕುಳಿತು ಏನೋ ಬರೆಯುತ್ತಿದ್ದಳು
ಅಂದನ್ನು ಕಂಡ ಪೀಟರ್ ತನ್ನ ಹೆಂಡತಿಗೆ
ಪೀಟರ್ : ನಡಿ ಸ್ಟೆಲ್ಲಾ ಇಂಥಹ ಆಫಿಸಿನಲ್ಲಿ ನೀನು ಕೆಲಸ ಮಾಡುವುದು ಬೇಡ. "ಇಲ್ಲಿ ಕೆಲಸಗಾರರು ಕುಳಿತುಕೊಳ್ಳಲು ಒಂದು ಕುರ್ಚಿ ಸಹ ಇಲ್ಲ" ಎಂದನು
_______________________________________________________________
ಪೀಟರ್ ಒಮ್ಮೆ ಆಸ್ಪತ್ರೆಗೆ ಯಾರನ್ನೋ ಭೇಟಿ ಮಾಡಲು ಹೋದಾಗ ಪಕ್ಕದ ಹಾಸಿಗೆಯಲ್ಲಿದ್ದ "ಚೀನೀ" ವ್ಯಕ್ತಿಯೊಬ್ಬ ಪೀಟರ್ ನ ನೋಡಿ
ಚೀನಿ : ಚಿಂಗ್ ಚಾಂಗ್ ಮೊ ಚು ಚಾ , ಎಂದು ಹೇಳಿ ಸತ್ತು ಹೋದ
ಪೀಟರ್ ಗೆ ಕುತೂಹಲ ತಾಳಲಾಗದೆ ಅದೇನೆಂದು ತಿಳಿದುಕೊಳ್ಳಲು ಚೀನಾ ಗೆ ಹೋದ ಅಲ್ಲಿ ಅವನಿಗೆ ಅದರ ಅರ್ಥ ತಿಳಿಯಿತು ಅದರ ಅರ್ಥ
"ಎ ನಾಯಿ ನನ್ನ Oxygen ಪೈಪ್ ಮೇಲೆ ಕಾಲಿಟ್ಟಿದ್ದೀಯ ತೆಗಿ" ಎಂದು.
__________________________________________________________________________
ಜಾನ್ : ಪೀಟರ್ ಏನು ಮಾಡುತ್ತಿದ್ದೀಯ?
ಪೀಟರ್: ನನ್ನ ಮಗುವಿನ ಧ್ವನಿ ರೆಕಾರ್ಡ್ ಮಾಡ್ತಿದೀನಿ
ಜಾನ್ : ಯಾಕೆ?
ಪೀಟರ್ : ನಾಳೆ ಅವನು ದೊಡ್ಡವನಾದ್ಮೇಲೆ ಅವನನ್ನು ಇದರ ಅರ್ಥ ಕೇಳಬೇಕು ಅದಕ್ಕೆ
______________________________________________________________________________
ಪೀಟರ್ : ಡಾಕ್ಟರ ದಿನ ರಾತ್ರಿ ನನ್ನ ಕನಸಿನಲ್ಲಿ ಇಲಿಗಳು ಬಂದು ಫೂಟ್ಬಾಲ್ ಆಡುತ್ತವೆ
ಡಾಕ್ಟರ : ತಗೋಳಿ ಈ ಮಾತ್ರೆ ಹಾಕಿಕೊಳ್ಳಿ, ಒಳ್ಳೆ ನಿದ್ರೆ ಬರುತ್ತೆ
ಪೀಟರ್ : ಡಾಕ್ಟರ, ನಾಳೆ ಹಾಕಿ ಕೊಳ್ಳಬಹುದ ಈ ಮಾತ್ರೆ?
ಡಾಕ್ಟರ : ಯಾಕೆ?
ಪೀಟರ್ : ಇಂದು ಫೈನಲ್ ಪಂದ್ಯ ಇದೆ ಅದಕ್ಕೆ
_________________________________________________________________________________
ಪೋಲಿಸ್ ಅಧಿಕಾರಿ ಪೀಟರ್ ಗೆ
ಪೋಲಿಸ್ : ಗಲ್ಲಿಗೇರಿಸುವ ಮುಂಚೆ ನಿನ್ನ ಕೊನೆ ಆಸೆ ಏನು?
ಪೀಟರ್ : ನನ್ನನ್ನು ತಲೆ ಕೆಳಗೆ ಕಾಲು ಮೇಲೆ ಮಾಡಿ ಗಲ್ಲಿಗೆ ಹಾಕಿ ಎಂದ
__________________________________________________________________________________
ಪೀಟರ್ ತನ್ನ ಮಗನಿಗೆ : ಈ ಬಾರಿಯ ಪರೀಕ್ಷೆಯಲ್ಲಿ ನೀನು ಫೈಲ್ ಆದರೆ ನನ್ನ ಅಪ್ಪ ಎಂದು ಕರೀಬೇಡ
ಸ್ವಲ್ಪ ದಿನದ ನಂತರ
ಪೀಟರ್ : ಏನಾಯ್ತು ಪರೀಕ್ಷೆ ಫಲಿತಾಂಶ?
ಮಗ : ಸುಮ್ಮನೆ ನನ್ನ ತಲೆ ಕೆಡಿಸಬೇಡ "ಪೀಟರ್"
___________________________________________________________________________________
ಭಿಕ್ಷುಕ - ಸ್ವಾಮಿ ದಯವಿಟ್ಟು ಏನಾದರೂ ಧರ್ಮ ಮಾಡಿ
ಪೀಟರ್ - ನೂರರ ನೋಟು ತೆಗೆದು ಎರಡು ಐವತ್ತು ಇದೆಯಾ ಎಂದ?
ಭಿಕ್ಷುಕ - ಒಂದು ಐವತ್ತು ತನಗೆಂದು ಭಾವಿಸಿ ಖುಷಿಯಿಂದ ಇದೆ ಎಂದ
ಪೀಟರ್ - ಹಾಗಿದ್ದರೆ ಮೊದಲು ಅದನ್ನು ಖರ್ಚು ಮಾಡು ಆಮೇಲೆ ಭಿಕ್ಷೆ ಬೇಡು ಎಂದ
____________________________________________________________________________________
ಪೀಟರ್ : ನನ್ನ ಗೆಳತಿಗೆ ಅವಳ ಹುಟ್ಟು ಹಬ್ಬಕ್ಕೆ ಎಂದು ಉಡುಗೊರೆ ಕೊಡಲಿ?
ಜಾನ್ : ನೋಡಲು ಹೇಗಿದ್ದಾಳೆ?
ಪೀಟರ್ : ಬಹಳ ಸುಂದರವಾಗಿದ್ದಾಳೆ
ಜಾನ್ : ಹಾಗಿದ್ದಲ್ಲಿ ನನ್ನ ಮೊಬೈಲ್ ನಂಬರ್ ಕೊಟ್ಟುಬಿಡು
_____________________________________________________________________________________
Comments
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by partha1059
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by partha1059
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by prasannakulkarni
ಉ: ನಗೋ ಹಾಗಿದ್ರೆ ನಗ್ರಿ...
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by Chikku123
ಉ: ನಗೋ ಹಾಗಿದ್ರೆ ನಗ್ರಿ...
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by vani shetty
ಉ: ನಗೋ ಹಾಗಿದ್ರೆ ನಗ್ರಿ...
ಉ: ನಗೋ ಹಾಗಿದ್ರೆ ನಗ್ರಿ...
In reply to ಉ: ನಗೋ ಹಾಗಿದ್ರೆ ನಗ್ರಿ... by kavinagaraj
ಉ: ನಗೋ ಹಾಗಿದ್ರೆ ನಗ್ರಿ...