ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ರಾಮನ ಬರುವಿಕೆಗೆ ಶಬರಿ ಕಾದ ಹಾಗೆ
ಮನದ ತುಂಬಾ ನೂರಾರು ಆಸೆಯ ಹೊತ್ತು
ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ದಿನರಾತ್ರಿ ಕನಸಲ್ಲಿ ನೀ ಬಂದು ಕಾಡುತಿರುವೆ
ನಿನ್ನ ಎತ್ತರ ನಿನ್ನ ಸದೃಢ ದೇಹಕಾಯ
ಮುಖದಲ್ಲಿ ತುಂಬಿರುವ ಆ ದಿವ್ಯ ತೇಜಸ್ಸು
ಎಲ್ಲವೂ ಸೇರಿ ಮಂತ್ರಮುಗ್ಧಳನ್ನಾಗಿಸಿದೆ ನನ್ನನು
ನೀ ಯಾವ ದೇಶದ ಯುವರಾಜನೋ ನಾ ಕಾಣೆ
ರೆಕ್ಕೆಯ ಕುದುರೆಯ ಏರಿ ಆಗಸದಿಂದ ಇಳಿದು
ನನ್ನ ಹೊತ್ತೊಯ್ಯುವೆಯೆಂದು ಮಾಯಾಲೋಕಕೆ
ಕಾದಿರುವೆ ಗೆಳೆಯ ನಿನಗಾಗಿ ನಾನಿಂದು....
Rating
Comments
ಉ: ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ಉ: ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ಉ: ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
In reply to ಉ: ಕಾದಿರುವೆ ಗೆಳೆಯ ನಿನಗಾಗಿ ನಾನಿಂದು by Chikku123
ಉ: ಕಾದಿರುವೆ ಗೆಳೆಯ ನಿನಗಾಗಿ ನಾನಿಂದು