ಸಂಭ್ರಮ
ಕವನ
ಮುದ್ದಿನ ಪಾರಿವಾಳ ಎಂದು ಎಂದಿಗೂ
ಬಂಧಿಸಲಿಲ್ಲ ಪ್ರೀತಿಯ ಪಂಜರದಲ್ಲಿ
ಹಾರಬಿಟ್ಟೆ, ಸ್ವತಂತ್ರ್ಯವಾಗಿ ನನ್ನಷ್ಟಕ್ಕೆ ನಾ
ತಿಳಿಯಲಿ ನೀಲಿ ಆಗಸವ ಎಂದು...
ನಿನ್ನ ನಾಲ್ಕು ಗೋಡೆಯೊಳಗಿನ ಪ್ರಪಂಚವ ಮೀರಿ
ಹಾರುವುದ ಕಲಿಸಿದೆ, ಹಾರಿಸಿದೆ ಬಾನಂಗಳಕ್ಕೆ
ನಾ ಹಾರಿದೆ ನೂರಾರು ಮೈಲಿಗಳ ಎತ್ತರ
ನೀ ಕಾಣದ್ದನೆಲ್ಲ ಕಂಡೆ, ಸಮುದ್ರ, ಶಿಖರ, ಮರುಭೂಮಿ ಎಲ್ಲವನ್ನೂ...
ಬರಿಗಾಲು, ಬೆವರು. ಬಿಸಿಲುಗಳ ಲೆಕ್ಕಿಸದೆ ನೀ ನಿಂತೆ,
ನನ್ನ ಸಂತಸ ನೋಡುತ, ಹೆಮ್ಮೆಪಟ್ಟೆ ಒಳಗೊಳಗೇ.
ಹಾರುತ್ತಲೇಯಿರುವೆ, ನಾ ಇನ್ನೂ ಎತ್ತರೆತ್ತರ ನನ್ನ ದಣಿವ ನುಂಗಿ
ನಿನ್ನ ಕಣ್ಣಂಚಿನ ಒಂದೇ ಒಂದು ಸಂಭ್ರಮಕ್ಕಾಗಿ...
ಹಾಗಂತ ಎಷ್ಟು ದಿನ ನಿಂತೀಯೇ ನೀನು...???
ಬಿಸಿಲಿಗೆ ಮೈಬಣ್ಣ ಕಪ್ಪಾಗಿದೆ, ಬರಿಗಾಲು ರಕ್ತ ಒಸರುತ್ತಿದೆ
ಬೆವರು ಹರಿಯುತ್ತಿದೆ...
ಆದರೆ ನಿನಗಿನ್ನೂ ಹಂಬಲ ನನ್ನ ಹಾರಾಟ ನೋಡಲು
ಕೇವಲ ನಿನ್ನ ಒಂದು ಚಪ್ಪಾಳೆ ಸದ್ದು ಸಾಕು ಯಾವತ್ತಿಗೂ ...
ಬಂದೇ ಬಿಡುವೆ ನಾ ಎಲ್ಲ ತೊರೆದು ನಿನ್ನೆಡೆಗೆ, ನಿನ್ನ ಅಗಾಧ ವಾತ್ಸಲ್ಯದೆಡೆಗೆ...
Comments
ಉ: ಸಂಭ್ರಮ
In reply to ಉ: ಸಂಭ್ರಮ by RENUKA BIRADAR
ಉ: ಸಂಭ್ರಮ
ಉ: ಸಂಭ್ರಮ
In reply to ಉ: ಸಂಭ್ರಮ by asuhegde
ಉ: ಸಂಭ್ರಮ
ಉ: ಸಂಭ್ರಮ
In reply to ಉ: ಸಂಭ್ರಮ by partha1059
ಉ: ಸಂಭ್ರಮ
ಉ: ಸಂಭ್ರಮ
In reply to ಉ: ಸಂಭ್ರಮ by ಉಮೇಶ ಮುಂಡಳ್ಳಿ …
ಉ: ಸಂಭ್ರಮ