ಪಿಕಳಾರನ ಸಂಸಾರ
ಪಿಕಳಾರನ ಸಂಸಾರ
ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ ನೆರವು ನೀಡಿದರು. ಈ ಕುರಿತು ಶಿವಮೊಗ್ಗದ 'ಜನಹೋರಾಟ' ಪತ್ರಿಕೆಯಲ್ಲಿ ನನ್ನ ತಮ್ಮ ಬರೆದ ಸಚಿತ್ರ ಲೇಖನ ಆಧರಿಸಿ ಈ ಚಿತ್ರಕವನ ರಚಿಸಿದೆ. ಫೋಟೋಗಳನ್ನು ಕ್ಲಿಕ್ಕಿಸಿದವನು ತಮ್ಮನ ಮಗ ಡಾ. ಬಿ.ಎಸ್.ಆರ್. ದೀಪಕ್.
ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||
ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು||
ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||
ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ|
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||
****************
-ಕ.ವೆಂ. ನಾಗರಾಜ್.
Comments
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by vani shetty
ಉ: ಪಿಕಳಾರನ ಸಂಸಾರ
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by Jayanth Ramachar
ಉ: ಪಿಕಳಾರನ ಸಂಸಾರ
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by Chikku123
ಉ: ಪಿಕಳಾರನ ಸಂಸಾರ
ಉ: ಪಿಕಳಾರನ ಸಂಸಾರ
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by partha1059
ಉ: ಪಿಕಳಾರನ ಸಂಸಾರ
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by siddharam
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by siddharam
ಉ: ಪಿಕಳಾರನ ಸಂಸಾರ
In reply to ಉ: ಪಿಕಳಾರನ ಸಂಸಾರ by prasannakulkarni
ಉ: ಪಿಕಳಾರನ ಸಂಸಾರ