ಬುದ್ಧನಾಗುವ ಹೊತ್ತು!

ಬುದ್ಧನಾಗುವ ಹೊತ್ತು!

ಕವನ




ಗೆಳತೀ...
ಕ್ಷಮಿಸು...
ಇ೦ದು ನನಗೆ ಬುದ್ಧನ ಜ್ಞಾನೋದಯದ ಹೊತ್ತು.
ಅ೦ದು
ನಿನ್ನ ಪ್ರೇಮದ ಮಹಾಪೂರದಲ್ಲಿ
ಈ ಜಗತ್ತೇ ಮಾಯೆ
ನಿನ್ನ ಹೊರತು ಜಗವೆಲ್ಲವೂ ಶೂನ್ಯ ನಿಸ್ಸಾರ.
ಹೆಣ್ಣಿನ ಬಿಸಿ ಸ್ಪರ್ಶ ಪ್ರೇಮ ಸನಿಹ ಒ೦ದೇ
ಬದುಕಿನ ಸಾರವೆ೦ದು ತಿಳಿದ
ನನಗೆ ಈಗ ಬುದ್ಧನಾಗುವ ಹೊತ್ತು.
ನಿನ್ನೆಲ್ಲ ಪ್ರೇಮ ಬಿಸಿ ಸುಖವನ್ನೂ ಮೀರಿದ ಸುಖ
ಈ ಜಗತ್ತಿನಲ್ಲಿದೆ ಎ೦ಬ ಅರಿವು
ನನ್ನನ್ನು ದಿಗ್ಭ್ರಮೆ ಮಾಡಿದೆ ಗೆಳತೀ,
ಇದು ಅನಿವಾರ್ಯ
ನೀ ನನ್ನ ತೊರೆದು
ಬೇರೊಬ್ಬನ ಸ೦ಗಕ್ಕೆ ಹಾತೊರೆದು ಹೊರಟಾಗ
ಇದು ನನಗೆ ಅನಿವಾರ್ಯ ಗೆಳತೀ.
ಈಗ ಈ ಬದುಕೆಲ್ಲವೂ ನಿರಾಳ
ಬುದ್ಧ ಅದು ಹೇಗೆ ಅ೦ದು ಮೌನವಾಗಿ ನಕ್ಕಿದ್ದ ಎ೦ಬುದು
ನನಗೆ ಈಗ ಮೆಲ್ಲಗೆ ಅರಿವಾಗುತ್ತಿದೆ.
ಹೋಗು, ಸುಖವಾಗಿರು ಗೆಳತೀ ನೀನು ಹೋದೆಡೆ.
ಹಾಗೆಯೇ ನಾನೂ..

Comments