Spring,summer,fall,winter .. and spring ಹೆಸರಿನ ಒಂದು ಸುಂದರ ಸಿನಿಮಾ
NDTV Lumiere movies ಅಂತ ಒಂದು ಟಿವಿ ಚಾನೆಲ್ಲಿನಲ್ಲಿ Spring,summer,fall,winter .. and spring ಹೆಸರಿನ ಒಂದು ಕೊರಿಯ ದೇಶದ ಸಿನಿಮಾ ಆಗಾಗ ಬರುತ್ತಿರುತ್ತದೆ. ಇದರ DVD ಕೂಡ ಪೇಟೆಯಲ್ಲಿ ನೋಡಿದ್ದೇನೆ. ಸಿನಿಮ ದೃಶ್ಯವೈಭವ, ಒಳ್ಳೆಯ ಸಂಗೀತ, ಸುಂದರ ಕತೆ ಹೊಂದಿದ್ದು ತುಂಬ ಚೆನ್ನಾಗಿದೆ.
ಹಸಿರಿನ ಬೆಟ್ಟಗಳ ನಡುವೆ ಒಂದು ಸರೋವರ. ಬೇಸಿಗೆಯಲ್ಲಿ ದೋಣಿಯ ಮೂಲಕ ದಂಡೆಗೆ ಓಡಾಡಬೇಕು. ಚಳಿಗಾಲದಲ್ಲಿ ಸರೋವರ ಹೆಪ್ಪುಗಟ್ಟಿ ಅದರ ಮೇಲೆ ನಡೆಯಬಹುದು. ಬೇರೆ ಬೇರೆ ಋತುಗಳ ಬದಲಾವಣೆಗಳ ಹಿನ್ನೆಲೆಯಲ್ಲಿ ಒಂದು ಜೀವನ ಚಕ್ರದ ಕತೆ ಇದೆ. ಆ ಸರೋವರದ ನಡುವೆ ಒಂದು ಬೌದ್ಧ ಮಠ. ಅಲ್ಲೊಬ್ಬ ಸನ್ಯಾಸಿ. ಅವನ ಬಳಿ ಒಂದು ಮಗು. ಮಗು ಬಾಲ್ಯ ಸಹಜ ಸ್ವಭಾವದಿಂದ ಮೀನು,ಕಪ್ಪೆ , ಹಾವುಗಳಿಗೆ ಕಲ್ಲು ಕಟ್ಟುತ್ತದೆ. ಅದು ತಪ್ಪು ಎಂದು ಅದಕ್ಕೆ ಮನವರಿಕೆ ಮಾಡಿಕೊಡುತ್ತಾನೆ ಒಂದು ಘಟನೆಯಲ್ಲಿ. ಆ ಮಗು ದೊಡ್ಡವನಾಗಿ ವಯಸ್ಸಿಗೆ ಬಂದಾಗ ಒಬ್ಬಳು ಹೆಂಗಸು ತನ್ನ ಹರೆಯದ ಮಗಳನ್ನು ಇಲ್ಲಿ ಮನಶ್ಶಾಂತಿ ಪಡೆಯುವುದಕ್ಕಾಗಿ ಬಿಟ್ಟು ಹೋಗುತ್ತಾಳೆ. ವಯೋಸಹಜ ಗುಣದಿಂದಾಗಿ ಈ ಯುವಕನಿಗೆ ಅವಳ ಮೇಲೆ ಆಕರ್ಷಣೆ ಉಂಟಾಗುತ್ತದೆ. ಅವಳ ಜತೆ ಸಂಬಂಧ ಹೊಂದುತ್ತಾನೆ. ಅವಳು ಈಗ ಮನಶ್ಶಾಂತಿ ಹೊಂದಿದ್ದಾಳೆ. ಇದೆಲ್ಲವನ್ನು ಗಮನಿಸಿದ ಹಿರಿಯ ಸನ್ಯಾಸಿ ಅವಳನ್ನು ಕಳಿಸಿಬಿಡುತ್ತಾನೆ. ಯುವಕನ ಅಪರಾಧಿ ಪ್ರಜ್ಞೆಯನ್ನು ಆದದ್ದು ನಿಸರ್ಗ ಸಹಜ ಘಟನೆ ಅದಕ್ಕಾಗಿ ಅಪರಾಧಿ ಭಾವನೆ ಹೊಂದಬೇಕಿಲ್ಲ ಎಂದು ಹಿರಿಯನ ನಿಲುವು. ಅವಳನ್ನು ಕಳಿಸಿದ್ದಕ್ಕಾಗಿ ಯುವಕ ಸಿಟ್ಟಿಗೆದ್ದಿದ್ದಾನೆ. ಮೋಹವು ಪೊಸೆಸ್ಸಿವ್ ಭಾವನೆಗೆ ಎಡೆಕೊಡುತ್ತದೆ. ನಂತರ ಹಿಂಸೆಗೂ ಎಡೆ ಮಾಡಿಕೊಡುತ್ತದೆ ಎಂದು ಹಿರಿಯ ತಿಳಿ ಹೇಳಲು ಪ್ರಯತ್ನಿಸುತ್ತಾನೆ. ಯುವಕ ಅದನ್ನೊಪ್ಪದೆ ಮಠವನ್ನು ತೊರೆದು ಹೋಗುತ್ತಾನೆ. ಕೆಲ ಕಾಲದ ನಂತರ ಒಂದು ಕೊಲೆಯನ್ನು ಮಾಡಿ ತಪ್ಪಿಸಿಕೊಂಡಿರುವುದು ಹಿರಿಯ ಸಂನ್ಯಾಸಿಗೆ ತಿಳಿದುಬರುತ್ತದೆ. ಪ್ರಕ್ಷುಬ್ಧ ಮನಸ್ಸ್ಸಿನ ಸ್ಥಿತಿಯಲ್ಲಿ ಅವನು ಈಗ ಮನಶ್ಶಾಂತಿಗಾಗಿ ಇಲ್ಲಿಗೇ ಬರುತ್ತಾನೆ. ನಂತರ ಪೋಲೀಸರು ಅವನನ್ನು ಹುಡುಕಿಕೊಂಡು ಬರುತ್ತಾರೆ. ಆಗ ಅವನು ಬೌದ್ಧ ಸೂತ್ರವೊಂದನ್ನು ಕಟ್ಟಿಗೆಯ ನೆಲದ ಮೇಲೆ ಕೆತ್ತುವುದರಲ್ಲಿದ್ದಾನೆ. ಪೋಲೀಸರು ಅದು ಮುಗಿಯುವವರೆಗೆ ದಿನವಿಡೀ ಕಾಯುತ್ತಾರೆ. ರಾತ್ರಿಯಲ್ಲಿ ಅವನು ಆ ಕೆಲಸ ಮುಗಿಸಿ ದಣಿದು ನಿದ್ದೆಗೆ ಜಾರಿದಾಗ ಅವನಿಗೆ ಚಳಿಯಾಗದಿರಲೆಂದು ಆ ಪೋಲೀಸರು ತಮ್ಮ ಕೋಟನ್ನು ಅವನಿಗೆ ಹೊದಿಸುತ್ತಾರೆ! ಅವನ ಕೆತ್ತನೆಗೆ ಬಣ್ಣವನ್ನೂ ಹಚ್ಚುತ್ತಾರೆ!! ನಂತರ ಅವನನ್ನು ಕರೆದುಕೊಂಡು ಹೋಗುತ್ತಾರೆ.
ಇತ್ತ ಕೆಲ ಕಾಲದ ನಂತರ ಸ್ವ ಇಚ್ಛೆಯಿಂದ ಹಿರಿಯ ಸನ್ಯಾಸಿ ಮರಣ ಹೊಂದುತ್ತಾನೆ. ಕೆಲ ಕಾಲದ ನಂತರ , ಬಹುಶ: ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಆ ಯುವಕನು ಮರಳಿ ಇಲ್ಲಿಗೆ ಬಂದು ಮಠದಲ್ಲಿ ವಾಸವಾಗಿ ಬೌದ್ಧಧರ್ಮಾನುಸಾರ ಸಾಧನೆಯಲ್ಲಿ ತೊಡಗುತ್ತಾನೆ. ಇನ್ನೂ ಕೆಲಕಾಲದ ನಂತರ ಆ ಹೆಣ್ಣುಮಗಳು ಒಂದು ಮಗುವಿನೊಂದಿಗೆ ಇಲ್ಲಿಗೆ ಮರಳಿ ಮಗುವನ್ನ್ನು ಬಿಟ್ಟು ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿ ಸಾಯುತ್ತಾಳೆ. ಆ ಮಗುವು ಈಗ ಈ ಹೊಸ ಸನ್ಯಾಸಿಯ ಜತೆಗೆ ಬೆಳೆಯತೊಡಗುತ್ತದೆ! ಇಲ್ಲಿಗೆ ಒಂದು ಸುತ್ತು ಮುಗಿದಂತಾಗುತ್ತದೆ.
ಈ ಸಿನಿಮಾ ನನಗೆ ತುಂಬ ಸೇರಿತು. ನಿಮಗೆ ಸಿಕ್ಕರೆ ನೀವೂ ನೋಡಿ.
Comments
ಉ: Spring,summer,fall,winter and summer ಹೆಸರಿನ ಒಂದು ಸುಂದರ ...
In reply to ಉ: Spring,summer,fall,winter and summer ಹೆಸರಿನ ಒಂದು ಸುಂದರ ... by ಸುಮ ನಾಡಿಗ್
ಉ: Spring,summer,fall,winter and summer ಹೆಸರಿನ ಒಂದು ಸುಂದರ ...
ಉ: Spring,summer,fall,winter and summer ಹೆಸರಿನ ಒಂದು ಸುಂದರ ...
ಉ: Spring,summer,fall,winter and summer ಹೆಸರಿನ ಒಂದು ಸುಂದರ ...
In reply to ಉ: Spring,summer,fall,winter and summer ಹೆಸರಿನ ಒಂದು ಸುಂದರ ... by pramodc84
ಉ: Spring,summer,fall,winter and summer ಹೆಸರಿನ ಒಂದು ಸುಂದರ ...