ಸಖಿ ನಿನಗಿದು ಸರಿಯೇ..

ಸಖಿ ನಿನಗಿದು ಸರಿಯೇ..

ಕವನ

ಸಖಿ ನಿನಗಿದು ಸರಿಯೇ..

ನನ್ನಿಲ್ಲಿ ಒಬ್ಬಂಟಿಯಾಗಿ ಬಿಟ್ಟು ನೀ ಹೊರಟೆಯೆಲ್ಲ

ನಾನನುಭವಿಸುತ್ತಿರುವ ವೇದನೆಯ ಅರಿವಿದೆಯೇ ನಿನಗೆ

ಯಾರಲ್ಲಿ ಹೇಳಿಕೊಳ್ಳಲಿ ನನ್ನೀ ವೇದನೆಯ...

 

ಸಖಿ ನಿನಗಿದು ಸರಿಯೇ..

ಕ್ಷಣಗಳ ಕಳೆಯುತ್ತಿರುವೆ ಯುಗಗಳಂತೆ

ಹೂ ಮತ್ತು ದುಂಬಿಯಂತಿದ್ದ  ನಾವಿಬ್ಬರೂ..

ನಾನೊಂದು ತೀರ ನೀನೊಂದು ತೀರ ಹಾಡಿನಂತಾಗಿದ್ದೇವೆ...

 

ಸಖಿ ನಿನಗಿದು ಸರಿಯೇ..

ನನ್ನಂತೆಯೇ ನಿನಗೂ ಆಗುತ್ತಿದೆಯೋ ಇಲ್ಲವೋ ನಾನರಿಯೆ

ನಮ್ಮಿಬ್ಬರ ದೂರ ಇನ್ನೆಷ್ಟು ದಿವಸ

ತಡ ಮಾಡದೆ ಬಂದುಬಿಡು ಗೆಳತಿ...

Comments