ಆಮಂತ್ರಣ

ಆಮಂತ್ರಣ

ಕವನ
ಧರೆಯ ಆಮಂತ್ರಣ ವರ್ಷದ ಆಗಮನ ನಿನ್ನೀ ಆಮಂತ್ರಣ ನನ್ನಲ್ಲಿ ಹೂಕಂಪನ ಹನಿಗಳ ಸಿಂಚನ ಹಸಿರಾಯ್ತು ಕಾನನ ನಿನ್ನೀ ಆಲಿಂಗನ ನನ್ನಲ್ಲೇನೋ ರೋಮಾಂಚನ ಎಲೆಗಳ ಕಂಪನ ಬಿಂದುಗಳ ನರ್ತನ ನಿನ್ನೀ ಬಂಧನ ನನ್ನಲ್ಲೇನೋ ಹೊಸತನ ಋತುಗಳ ಸಂಚಲನ ಬಾನು ಬುವಿಯ ಸಮ್ಮಿಲನ ನೀ ನೀಡಿದ ಆಹ್ವಾನ ತಣಿಸಿದೆ ನನ್ನೀ ಮೈಮನ

Comments