"ಆರೋಗ್ಯ ವರ್ಧಕ ನೇರಳೆ"

"ಆರೋಗ್ಯ ವರ್ಧಕ ನೇರಳೆ"

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.

ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಮಾಯವಾಗುತ್ತದೆ ಅಲ್ಲದೆ ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.ಇದರಿಂದ ಗಂಟಲು ನೋವು, ಗೊರಲು, ಉಬ್ಬಸ ಮುಂತಾದ ನೋವುಗಳು ನಿವಾರಣೆಯಾಗುತ್ತವೆ. ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಿಹಿಮೂತ್ರ ಕಾಯಿಲೆ ಕಡಿಮೆಯಾಗುತ್ತದೆ. ನೇರಳೆ ಹಣ್ಣಿನ ರಸ ಒಂದು ಮಧುರ ಮತ್ತು ಶುಧ್ದವಾದ ತಂಪು ಪಾನೀಯ. ಇದರ ಬಳಕೆಯಿಂದ ಮುಖದ ಕಾಂತಿಮತ್ತು ಮೈ ಅಂದ ಹೆಚ್ಚುತ್ತದೆ. ಜೇನು ತುಪ್ಪ ಮತ್ತು ನೇರಳೆ ರಸ ಸೇವನೆಯಿಂದ ಮೂಲವ್ಯಾದಿ ಮಾಯವಾಗುತ್ತದೆ. ಎಲೆಗಳನ್ನು ಜಿಗಿವುದರಿಂದ ಹಲ್ಲುಗಳು ಹೊಳೆಯುತ್ತವೆ. ಆದರ ಹಣ್ಣನ್ನು ಹೆಚ್ಚು ತಿನ್ನುವಂತಿಲ್ಲ. ಏಕೆಂದರೆ ಇದ್ಲೀಸ್ (ಅಪಾಯಕಾರಿಯಲ್ಲದ ಹೊಟ್ಟೆ ನೋವು)ಬರುತ್ತದೆ. ಅಲ್ಲದೆ ಔಷಧಿಯಾಗಿ ಬಳಸುವಾಗ ತಜ್ಞ ನಾಟಿ ವೈಧ್ಯರ ಸಲಹೆ ಅಗತ್ಯ.

Comments