ನಿರ್ಧಾರಗಳು
ತುಂಬ ದಿನ ಆಯಿತು ಬ್ಲಾಗ್ ಮಾಡಿ....ಯಾವ ವಿಷಯದ ಬಗ್ಗೆ ಬರೀಲಿ ಅಂತ ಯೋಚನೆ ಮಾಡ್ತಾ ಇದ್ದೆ.... ಸರಿ ನನ್ನ ನೆನಪಿನಲ್ಲಿ ಉಳಿದ ಒಂದು ಮೈಲ್ನೇ ಬರೀತ್ತೀನಿ.....
ಹುಡುಗರ ಗುಂಪೊಂದು ರೈಲು ಹಳಿಗಳ ಮೇಲೆ ಆಟ ಆಡುತ್ತಿರುತ್ತಾರೆ. ಒಂದು ಹಳಿ ಉಪಯೋಗದಲ್ಲಿರೋದು, ಇನ್ನೊಂದು ಉಪಯೋಗದಲ್ಲಿರದ್ದು. ಉಪಯೋಗದಲ್ಲಿರೋ ಹಳಿ ಮೇಲೆ ಹತ್ತಾರು ಮಕ್ಕಳು ಆಟ ಆಡ್ತಿರ್ತಾರೆ,ಸರಿಯಿರದ ಹಳಿ ಮೇಲೆ ಒಬ್ಬ ಮಾತ್ರ ಆಡ್ತಿರ್ತಾನೆ.
ನೀವು ಆ ಹಳಿಯ ಬಳಿ ಇದ್ದೀರೆಂದುಕೊಳ್ಳಿ, ರೈಲು ಬರ್ತಾ ಇದೆ....ಯಾವುದನ್ನು ಆಯ್ಕೆ ಮಾಡ್ಕೊತ್ತೀರ? ರೈಲಿನ ಹಳಿ ಬದಲಿಸಿ ಹತ್ತಾರು ಮಕ್ಕಳನ್ನು ಉಳಿಸಬಹುದು, ನೆನಪಿರಲಿ ನೀವು ಆ ಒಂಟಿ ಹುಡುಗನ ಪ್ರಾಣಕ್ಕೆ ಕುತ್ತು ತರ್ತೀರ :-(
ಈಗ ನಿಧಾನವಾಗಿ ಯೋಚಿಸೋಣ...
ಬಹಳಷ್ಟು ಮಂದಿ ಹಳಿ ಬದಲಿಸಿ ಹತ್ತಾರು ಪ್ರಾಣಕ್ಕಾಗಿ ಒಂದು ಜೀವನಾ ಬಲಿ ಕೋಡೋದು ಸರಿ ಎನ್ನಬಹುದು. ಸ್ವಾಭಾವಿಕ ಕೂಡ...(ಉಪಯೋಗಿಸದ ಹಳಿಗೆ ರೈಲಿನ ದಿಕ್ಕನ್ನು ಬದಲಿಸಿದರೆ, ಆ ಹುಡುಗ ಸೈರೆನ್ ಕೇಳಿ ಓಡಬಹುದು, ಆದರೆ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ಕೂಡ ಬರಬಹುದು.)
ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ- ಆ ಹುಡುಗ ಆ ಉಪಯೋಗಿಸದ ಹಳಿಯನ್ನ ಆರಿಸಿಕೊಲ್ಲೋದ್ರಲ್ಲಿ ಸರಿಯಾದ ನಿರ್ಧಾರ ಮಾಡಿದ್ದಾನೆ.ಹೀಗಿರೊವಾಗ ಅವನ ಸ್ನೇಹಿತರ ಅಲಕ್ಶ್ಯಕ್ಕೆ ಇವನ ಬಲಿ ಯಾವ ನ್ಯಾಯ?
ಹೀಗೆಯೇ ನಮ್ಮ ದಿನನಿತ್ಯ ಜೀವನದಲ್ಲಿ- ಮನೆಯಲ್ಲಿ,ಕಛೇರಿಯಲ್ಲಿ,ರಾಜಕಾರಣದಲ್ಲಿ.... ಎದುರಾಗೋ ಸವಾಲುಗಳು. ಯರದೋ ತಪ್ಪಿಗೆ ಯಾರದೋ ಬಲಿ....
ಇಲ್ಲಿ ಉಪಯೋಗದಲ್ಲಿರೋ ಹಳಿಯಲ್ಲಿ ಆ ಮಕ್ಕಳು ಆಟವಾಡಬಾರದಾಗಿತ್ತು. ಆದರೆ ನಮ್ಮಗೆ, ಆ ಮಗು ಸರಿಯಾದ ನಿರ್ಧಾರ ಮಾಡಿದ್ದರೂ, ನಾವು ಅದರ ಬಲಿಯನ್ನೇ ಸಮರ್ಥಿಸುತ್ತೇವೆ.....safe placeಅಂತ ಇದ್ದರೂ ಕೆಲವೊಮ್ಮೆ ಇತರರ/ನಮ್ಮ ನಿರ್ಧಾರಗಳು ಎಲ್ಲಾ ತಲೆಕೆಳಗೆ ಮಾಡಬಹುದು....ಯಾರಿಗೋ ಒಳ್ಳೆಯದನ್ನು ಮಾಡಲು ಹೋಗಿ ತಪ್ಪಿಲ್ಲದಿದ್ದರೂ, ಅದರ ಪರಿಣಾಮವನ್ನು ಇತರರು ಅನುಭವಿಸುತ್ತಾರೆ...
"What's right isn't always popular and whats popular isn't always right"
Comments
ಉ: ನಿರ್ಧಾರಗಳು
In reply to ಉ: ನಿರ್ಧಾರಗಳು by geethapradeep
ಉ: ನಿರ್ಧಾರಗಳು
ಉ: ನಿರ್ಧಾರಗಳು