ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!
ಧೂಮಪಾನಿಗಳಲ್ಲಿ ಅರಿವು ಮೂಡಿಸಿದರೆ
ಧೂಮಪಾನಕ್ಕೆ ಹಾಕಬಹುದು ಕಡಿವಾಣ
ವಾಹನಗಳ ಬಳಕೆಯನ್ನು ಕಡಿತಗೊಳಿಸಿ
ನಿಯಂತ್ರಿಸಲೂಬಹುದು ವಾಯುಮಾಲಿನ್ಯ
ಪ್ರಕೃತಿಗೆ ತಾನೆಷ್ಟು ಸಹಕಾರಿ ಎಂಬುದನು
ತೋರಿಸಿಕೊಳ್ಳುತ್ತಿದ್ದರೂ ಈಗ ಈ ಮನುಜ
ಪ್ರಕೃತಿ ತನ್ನ ವಿಕೋಪವನು ತೋರಿಸದೇ
ಬಿಡುವುದಿಲ್ಲ ಅನ್ನುವ ಮಾತೂ ಈಗ ನಿಜ
ಕೆಡಿಸಿದ ವಾತಾವರಣವನು ಸರಿಪಡಿಸಿ ಈಗ
ನೆಮ್ಮದಿಯ ಹೊಂದಲು ಬಿಡೆನೆಂದು ನಗುತಿದೆ
ಧೂಮಪಾನಿಯಂತೆ ತಾನೇ ಹೊಗೆಯುಗುಳಿ
ಲಕ್ಷಾಂತರ ಜನರ ಮನಶಾಂತಿಯ ಕೆಡಿಸಿದೆ
ಮನುಜ ಏನ ಸಾಧಿಸಿದರೂ ಪ್ರಕೃತಿಯ ಮುಂದೆ
ಸದಾಕಾಲ ನಿಸ್ಸಹಾಯಕನಾಗಿಯೇ ಇರುವ ನಿಜದಿ
ಗಾಳಿ ಮಳೆಗೆ ಧರೆಗುರುಳುವ ಮರಗಳ ಲೆಕ್ಕವಿಲ್ಲಿಲ್ಲ
ಉದ್ಯಾನವನದ ಮರ ಉಳಿಸಿದರೂ ನಮ್ಮ ಮಂದಿ
**********
ಆತ್ರಾಡಿ ಸುರೇಶ ಹೆಗ್ಡೆ
(ಐಸ್‍ಲ್ಯಾಂಡಿನ ಜ್ವಾಲಾಮುಖಿ ಹೊರಗುಗುಳಿದ ಹೊಗೆಯಿಂದ ವಿಮಾನಯಾನ ಸ್ಥಬ್ಧವಾಗಿ
ಲಕ್ಷಾಂತರ ಜನರು ಪಟ್ಟ ಬವಣೆಯ ಬಗ್ಗೆ ಓದಿ, ಕೇಳಿದಾಗ ಅನಿಸಿದ್ದು)
Rating
Comments
ಉ: ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!
In reply to ಉ: ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ! by partha1059
ಉ: ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!