ಸದಾ ನನಗಿರಲಿ

Submitted by shekarsss on Fri, 01/11/2008 - 16:31

ದಿನವು ಹೊಸತು ಹೊಸತು ಬರಲಿ
ಹಳೆಯ ನೆನಪುಗಳ ಸುಳಿವಿರದಿರಲಿ
ಉಲ್ಲಾಸ, ಉತ್ಸಾಹ ಕುಂದದಿರಲಿ
ಹುಡುಕಾಟ ಕೊನೆವರೆಗು ನಿಲ್ಲದಿರಲಿ

ಕಲ್ಪನಾ ಲಹರಿ ಕೊನೆಯಾಗದಿರಲಿ
ಸೃಜನಶೀಲ ಮನ ಮಟುಕಾಗದಿರಲಿ
ಕಂಡ ಕನಸುಗಳು ಕಾಣದಾಗದಿರಲಿ
ಅವತರಿಪ ಆಸೆಗಳಿಗೆ ಕಡಿವಾಣವಿರಲಿ

ಅರಿವಿನ ಹಸಿವು ಹುಚ್ಚೆದ್ದು ಕುಣಿಯಲಿ
ಒಲ್ಲದ ವಿಷಯಗಳು ತಲೆ ಕೆಡಸದಿರಲಿ
ಬಲ್ಲವರ ಬಳಿಗೆ ಬಾಗಿಲು ತೆರೆದಿರಲಿ
ಕೇಡುಗರ ಕಣ್ಣೋಟ ಇತ್ತ ಬೀರದಿರಲಿ

ಅಧಿಕ ಐಶ್ವರ್ಯ ಎನಗೆ ಸಿಗದಿರಲಿ
ಮಾನವೀಯತೆ ಎಂದೂ ಬೆಳಗುತಿರಲಿ
ಸರಳತೆಯ ಬೇರುಗಳು ಸಡಿಲವಾಗದಿರಲಿ
ಆರೋಗ್ಯದೈಶ್ವರ್ಯ ಸದಾ ನನಗಿರಲಿ
****

( ವಕ್ರ ವ್ಯಾಕರಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

ಬ್ಲಾಗ್ ವರ್ಗಗಳು

Comments