ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ
ಕವನ
ಗೆಳತಿ ನೀ ಜೊತೆಯಲ್ಲಿದ್ದರೆ ಪದಗಳು
ತಾನಾಗೆ ಹುಟ್ಟಿ ಕವನವಾಗುವುದು ಸರಾಗದಲಿ
ನೀನಿಲ್ಲದೆ ಉಂಟಾಗಿದೆ ವಿರಹ ವೇದನೆ
ಪದಗಳೇ ಸಿಗುತ್ತಿಲ್ಲ ಗೀಚಲು ಖಾಲಿ ಹಾಳೆಯಲಿ...
ನಿನ್ನಂದವ ನೋಡುತ ಪೋಣಿಸುತ್ತಿದ್ದೆ
ಕವನಗಳ ಸರಮಾಲೆ ನಾನಂದು
ಖಾಲಿಯಾಗಿದೆ ಮನವು ನೀನಿರದೆ
ಎಣಿಸುತಿರುವೆ ದಿನಗಳ ನಾನಿಂದು ..
ಗೆಳೆಯರೆಂದರು ವಿರಹದಿ ಹೊಮ್ಮುವುದು
ಕವನಗಳು ಎಂದಿಗಿಂತ ಹೆಚ್ಚಾಗಿ
ಸತ್ಯವದು ಎಂದು ನಂಬಿದ್ದೆ ನಾನಂದು
ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ
Comments
ಉ: ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ
In reply to ಉ: ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ by partha1059
ಉ: ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ