ದೇವದಾಸ್
ದೇವದಾಸ್ ಎಂಬ ಒಬ್ಬ ವ್ಯಕ್ತಿ, ತನ್ನ ಹೆಸರಿಗೆ ತಕ್ಕ ಕುಡಿಯೋದು ಅವನ ಜನ್ಮ ಸಿದ್ದ ಹಕ್ಕು,ಕುಡಿಯೋದು ಒಂದು ಬಿಟ್ಟರೆ ಬೇರೆ ಎಲ್ಲ ವಿಷಯದಲ್ಲೂ ತುಂಬಾ ಒಳ್ಳೆಯವನು,ನಾಟಕ ರಂಗದಲ್ಲಿ ತುಂಬಾ ಆಸಕ್ತಿ ತನ್ನ ಜೀವನವನ್ನೇ ನಾಟಕದಲ್ಲಿ ತೊಡಗಿಸಿಕೊಂಡಿದ್ದ, ಹೀಗೆ ಸಾಗುತ್ತಿದ್ದ ಅವನ ಬದುಕ್ಕಲ್ಲಿ ಒಂದು ಮಧುವೆ ಎಂಬ ಸನ್ನಿವೇಶ ಬಂತು ಮದ್ವೆ ಏನೋ ಆಯ್ತು, ಮದ್ವೆಯಾದ್ಮೇಲೆ ಕುಡಿತ ಬಿಟ್ಟು ಚೆನ್ನಾಗೆ ಇದ್ದ ಆದ್ರೆ ಹೆಂಡ್ತಿ ಮಾತ್ರ ಮದ್ವೆಯಾಗಿ ೪ ತಿಂಗಳಲ್ಲೇ ಬಿಟ್ಟು ಹೋದ್ಲು.
ಅವಳಿಗೆ ಯಾಕೋ ತನ್ನ ಮೊದಲಿನ ಪ್ರಿಯಕರನ ನೆನಪಾಯ್ತು ಅವಳು ತನ್ನ ಮೊದಲಿನ ಪ್ರಿಯಕರನ ಜೊತೆಗೆ ಓಡಿ ಹೋದಳು ಆದ್ರೆ ಹಾಗೆ ಹೋಗ್ವಾಗ ಅವ್ಳು ಸುಮಾರು ೩ ತಿಂಗಳ ಗರ್ಬಿಣಿ.ಇದೆಲ್ಲಾ ಏನು..? ಯಾಕೆ ನನ್ನ ಜೀವನ ಹೀಗಾಯ್ತು ಅಂತ ಯೋಚನೆ ಮಾಡುತ ನಮ್ಮ ದೇವದಾಸ್ ಕುಡಿಯೋ ಚಟ ಜಾಸ್ತಿನೆ ಆಯಿತು, ಮನೆ ಬಿಟ್ಟು ಬೀದಿ ಸೇರಿದ ಆಮೇಲೆ ತನ್ನ ಹೆಂಡ್ತಿ ಯಾಕೆ ಈ ತರ ಮಾಡಿದ್ಲು ಎಂಬ ಯೋಚನೆ ಅವನನ್ನು ಯಾವಾಗಲು ಕಾಡುತ ಇತ್ತು .
ಹೀಗೆ ಅವನ ಜೀವನ ಬರಿ ಕುಡಿಯೋದೆ ಆಗೋಯ್ತು, ಆದ್ರೆ ಪಾಪ ಇನ್ನೊಂದು ಮದ್ವೇನೆ ಆಗ್ಲಿಲ್ಲ ಮೊದ್ಲೇ ಅವ್ನ ಮನೆಯವರು ಯಾರು ಹತ್ರ ಸೇರುಸ್ತನೆ ಇರ್ಲಿಲ್ಲ ಯಾಕಂದ್ರೆ ಹುಟ್ಟಿಸಿರೋ ತಾಯಿ ಬದುಕಿರಲಿಲ್ಲ ಇದ್ದದ್ದು ಕೇವಲ ಅಣ್ಣಂದಿರು ಅವುರಂತು ತಮ್ಮ ಹೆಂಡತಿಯರ ಗುಲಾಮರಾಗಿದ್ದರು.ಆದ್ರೆ ಅವ್ನ ಸಂಗಾತಿಯಾಗಿ ಇದ್ದಿದ್ದು ಕೇವಲ ಅವನ ಸಾರಾಯಿ ಬೋತ್ತಲ್.
ಕುಡಿತ ಜಾಸ್ತಿಯಾಗಿ ಕೊನೆಗೆ ಒಂದು ದಿನ ಲಿವೆರ್ಗೆ ತೊಂದರೆಯಾಗಿ ಕೊನೆಗೆ ಆಸ್ಪತ್ರೆ ಸೇರಿದ ಆದ್ರೆ ಆಸ್ಪತ್ರೆಲಿ ನೋಡೋದು ಯಾರು, ಆವಾಗ ಅವನ ಇಬ್ಬರು ತಂಗಿಯಂದಿರು ಬಂದ್ರು ಅವ್ರು ಅವನ್ನನ್ನ ಹೇಗೋ ಆಪರೇಷನ್ ಮಾಡ್ಸುದ್ದ್ರು.ಪಾಪ ತಂಗಿಯನ್ದ್ರು ಅವನ್ನನ್ನ ತಮ್ಮ ಮನೇಲಿ ಕುತುಕೊಲ್ಲ್ಸೋಣ ಅಂದ್ರೆ ತಮ್ಮ ಗಂಡಂದಿರ ವಿರೋದ,ಹೀಗೆ ಕೊನೆಗೂ ಒಬ್ಳು ತಂಗಿ ಮನಸು ಮಾಡಿ ಅವನನ್ನು ತನ್ನ ಮನೆಗೆ ಕರ್ಕೊಂಡು ಹೋದ್ಲು ಹೇಗೋ ಏನೋ ಅವ್ನ ಲೈಫ್ ಸರಿಯಾಗ್ತಾ ಬಂತು.ತನ್ನ ತಂಗಿಯಾ ಮಗನಿಗೆ ಅವ್ನಂದ್ರೆ ತುಂಬಾ ಇಷ್ಟ ಹೀಗೆ ಸುಮಾರು ೪ ವರ್ಷ ಅವ್ರ ಮನೆಲಿದ್ದ,ಒಂದು ಸಣ್ಣ ಹೋಟೆಲ್ನಲ್ಲಿ ಕೆಲಸ ಮಾಡ್ತಾ ಇದ್ದ. ಆದ್ರೆ ತನ್ನ ಬಾವನ ಹೀಯಲಿಕೆಯ ಮಾತಿಗೆ ನೊಂದು ಒಂದು ದಿನ ಮನೆ ಬಿಟ್ಟು ಹೋದ ಎಲ್ಲಿ ಹೋದ ಎನಾದ ಗೊತ್ತೆಯಾಗ್ಲಿಲ್ಲ.ಆದ್ರೆ ಸುಮಾರು ೭ ೮ ವರ್ಷದ ನಂತರ ಯಾವ್ದೋ ಸರ್ಕಾರೀ ಆಸ್ಪತ್ರೆಲಿ ಇದ್ದಾನೆ ಎಂದು ತನ್ನ ತಂಗಿಯ ಮಗನಿಗೆ ಗೊತ್ತಾಯ್ತು.
ಅವ್ನ ತಂಗಿ ಮಗನ ಹೆಸರು ಪ್ರೀತಂ ಒಳ್ಳೆ ಹುಡುಗ, ಅವ್ನು ತನ್ನ ಮಾವನನ್ನು ಹುಡುಕುತ್ತ ಆಸ್ಪತ್ರೆಗೆ ಹೋದ ಆದ್ರೆ ತನ್ನ ಮಾವನನ್ನು ನೋಡಿ ಮೂಕನಾದ, ಮುಕ ತುಂಬ ಗಡ್ಡ ಬಿಟ್ಟು ಕಾಲಿಗೆಲ್ಲ ಪ್ಲಾಸ್ಟರ್ ಹಾಕ್ಕಿದ್ರು,ಕುಡಿತ ಜಾಸ್ತಿಯಾಗಿ ಸಕ್ಕರೆ ಕಾಯಿಲೆ ಮದುಮೇಹ ಶುರುವಾಗಿ ಊಟ ತಿಂಡಿ ಸೇರುತ್ತಿರಲಿಲ್ಲ, ಅದನ್ನು ಪ್ರೀತಂ ನೋಡಿ ಸ್ವಲ್ಪ ಚಹಾ ಕುಡಿಸಿದ ಹೇಗೋ ಕಷ್ಟ ಪಟ್ಟು ಕುಡಿದ,ಆದ್ರೆ ಪಾಪ ಪ್ರೀತಂ ತುಂಬಾ ಸಮಾದಾನ ಮಾಡಿದ ಕೊನೆಗೆ ನಾಳೆ ಅಮ್ಮ ಮತ್ತು ಚಿಕ್ಕಮ್ಮ ಬರ್ತಾರೆ ಹೇಳಿ ಸಮಾದಾನ ಮಾಡಿ ಹೊರಟ.ಮರುದಿನ ತಂಗಿಯನ್ದ್ರು ಬಂದು ಆತನ ಸ್ಥಿತಿ ನೋಡಿ ಅಳುತ್ತ ಯಾಕೆ ಹಿಗಾಧಿ ನೀನು..ಕುಡಿಬೇಡ ಹೇಳಿದ್ರೆ ಕೇಳಲಿಲ್ಲ, ಈಗ ನೋಡು ಹೀಗಾಯ್ತು.
ಹೀಗೆ ಸ್ವಲ್ಪ ದಿನ ಬಿಟ್ಟು ಪ್ರೀತಂ ಸ್ವಲ್ಪ ಗಂಜಿ ಬಟ್ಟೆ ಇಟ್ಕೊಂಡು ಆಸ್ಪತ್ರೆಗೆ ಹೊರಟ ವಾರ್ಡ್ ಒಳಗೆ ಹೋದ, ನೋಡಿದ್ರೆ ಮಾವ ಮೊಟ್ಟೆ ಹಿಡ್ಕೊಂಡು ಕಣ್ಣು ಬಿಟ್ಟು ಮಲ್ಲ್ಗಿದ್ದ್ರು ಮನಸಲ್ಲೇ ಹಸಿವಾಗಿರ್ಬೇಕು ಪಾಪ ಅನ್ನ್ಕೊಂಡ ಆದ್ರೆ ಕೈ ಕಾಲು ಅಲ್ಲಾಡುತಿರಲಿಲ್ಲ ಪ್ರೀತಮ್ಗೆ ಅನುಮಾನ ಬಂದು ಡಾಕ್ಟರ್ ಬಳಿ ರೋಗಿಯ ಕಂಡಿಶನ್ ಹೇಗಿದೆ ಎಂದು ಕೇಳಿದ,..............ಅದುಕ್ಕೆ ಡಾಕ್ಟರ್, ಜಸ್ಟ್ ಈಗ ಸತ್ತೋದ್ರು ಅಂದ್ರು.....................ಅದನ್ನು ಕೇಳಿದ ಪ್ರೀತಂ ಕಯ್ಯಲಿ ತಂದಿರೋ ಗಂಜಿ ಮತ್ತು ದೇವದಾಸ್ ಕಯ್ಯಲ್ಲಿದ್ದ ಮೊಟ್ಟೆ ನೋಡಿ ಕುಸಿದು ಬಿದ್ದ.(ಸತ್ಯ ಕಥೆ )
Comments
ಉ: ದೇವದಾಸ್
In reply to ಉ: ದೇವದಾಸ್ by asuhegde
ಉ: ದೇವದಾಸ್
In reply to ಉ: ದೇವದಾಸ್ by vani shetty
ಉ: ದೇವದಾಸ್
In reply to ಉ: ದೇವದಾಸ್ by asuhegde
ಉ: ದೇವದಾಸ್
ಉ: ದೇವದಾಸ್
In reply to ಉ: ದೇವದಾಸ್ by kavinagaraj
ಉ: ದೇವದಾಸ್