ನೋವೇ ಅರಿಯದ ನಿನ್ನಂತ ನೀಚರಿಗೆ ಧಿಕ್ಕಾರವಿರಲಿ

ನೋವೇ ಅರಿಯದ ನಿನ್ನಂತ ನೀಚರಿಗೆ ಧಿಕ್ಕಾರವಿರಲಿ

ಕವನ
ಜಿಗಣೆಗಳಂತೆ ರಕ್ತ ಹೀರುತ್ತಿರುವ ರಾಕ್ಷಸರೇ ಕರುಣೆಯ ಒಂದೂ ಕಣವಿಲ್ಲದ ಕೀಚಕರೇ ಅಹಿಂಸೆಯ ಆರಾಧಿಸುತ್ತಿರುವವರ ಹಿಂಸಿಸಿ ಹತ್ಯೆಗೆಯ್ಯುತ್ತಿರುವವರೇ ಮಾನವೀಯತೆಯ ಒಂದಂಶವೂ ಇಲ್ಲದ ಪಾತಕಿಗಳೇ ಪಾಪವೇ ಪುಣ್ಯವೆಂದರಿತಿರುವ ಪಾಪಿಗಳೇ ಮುಂದೆ ಬಂದು ಎದುರಿಸಲಾಗದೆ ಬೆನ್ನ ಹಿಂದೆ ಚೂರಿ ಹಾಕುತ್ತಿರುವವರೇ ತನ್ನಮ್ಮನನ್ನೋ ಅಪ್ಪನನ್ನೂ ಕಂದನನ್ನೋ ಕಳೆದುಕೊಂಡವರ ಆರ್ತನಾದ ನಿಮಗೆ ಕೇಳಿಸುವುದಿಲ್ಲವೇ ಬೇರೆಯವರ ರಕ್ತ ಹರಿಸುತ್ತಿರುವ ನಿಮಗೆ ನಿಮ್ಮ ಮೈಯಲ್ಲಿ ಸ್ವಲ್ಪ ರಕ್ತ ಹರಿದರೂ ನೋವಾಗುವುದಿಲ್ಲವೇ ಮನುಷ್ಯತ್ವವೇ ಇಲ್ಲದ ನಿನ್ನಂತಹವರು ಮಾನವನಾಗಿ ಹೇಗೆ ಹುಟ್ಟಿದರು ನೋವೇ ಅರಿಯದ ನಿನ್ನಂತ ನೀಚರಿಗೆ ಧಿಕ್ಕಾರವಿರಲಿ

Comments