ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ

ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ

 

ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ

 

ನಿರಂತರವಾಗಿ ನಡೆದಿದೆ
ಜಿಹಾದಿನ ಹೋರಾಟದ ದೀಕ್ಷ
ಜಿಹಾದಿನ ಜಿಹ್ವೆಗೆ ಬೇಕೆ
ಸದಾ ಹಸಿಮಾಂಸದ ಭಕ್ಷ

ಸತ್ತ ಯಾರಿಗು ಅರ್ಥವಾಗದು
ನಾವೆ ಏಕೆ ಇವರಿಗೆ ಗುರಿ
ನಿಜವಾದ ಗುರಿಗಳು ಸದಾ
ಝೆಡ್ ರಕ್ಷಣೆಯ ಹಿಂದೆ ಗರಿಗರಿ

ಜಿಹಾದಿನ ಹೋರಾಟಗಾರರು ಅರಿಯರು
ತಮ್ಮದು ಯಾರ ವಿರುದ್ದ ಹೋರಾಟವೆಂದು
ಏಕೆಂದರೆ ಅವರು ಬರಿ ಆಯುದವಷ್ಟೆ
ಆಯುದ ಹಿಡಿದವರೊ ಅನಾಮಿಕ ಅದೃಷ್ಯರು

 

  •  

ಜಿಹಾದಿ ಹೋರಾಟಗಾರರೆ
ಯಾರ ವಿರುದ್ದ ನಿಮ್ಮ ಹೋರಾಟ
ರಾಜಕೀಯವಾದರೆ ಹೋರಾಡಿ
ರಾಜಕೀಯದವರ ವಿರುದ್ದ

 
ದಾರ್ಮಿಕವಾದರೆ ಹಿಡಿದು ಕೇಳಿ
ನಿಮ್ಮ ದಾರ್ಮಿಕನಾಯಕರ ನ್ಯಾಯ
ಈ ರೀತಿ ರೋಟಿ ಬಟ್ಟೆಗಾಗಿ ಬದುಕುವ
ಜನರ ನೀವು ಕೊಲ್ಲುವುದು ಅನ್ಯಾಯ


 

Rating
No votes yet

Comments