ಮಳೆ
ಬರಡಾದ ಮನಕ್ಕೆ ಸಾಂತ್ವನ ಕೊಟ್ಟು ನೀ ಜಿನುಗುತ್ತಿದ್ದಿಯೋ
ನವಿರಾದ ದುಃಖಕ್ಕೆ ಆಹ್ವಾನ ಇಟ್ಟು ನೀ ಛೇಡಿಸುತ್ತಿದ್ದಿಯೋ
ಕಾರಣ ಕೊಟ್ಟು ಜಾರಬಾರದೆ ಕಣ್ಣೀರಿಗೆ ಜೊತೆಯಾದ ಹನಿಯೇ
ಮಡುಗಟ್ಟುವ ಎದೆಯ ಭಾರಕೆ ಗುಡುಗುಟ್ಟುವ ಮೇಘವೇ ಇನಿಯ
ಒಂಟಿ ಬೀದಿಯಲಿ ವಿರಹದ ಮಳಿಗೆಯ ಬಾಗಿಲು ತೆರೆದಾಗಿದೆ
ಜಂಟಿ ದಾರಿಯಲಿ ಸವೆದ ಗಳಿಗೆಯ ನೆನಪ ಜೋಡಿಸಿಡಲಾಗಿದೆ
ನಡೆಯದ ವ್ಯವಹಾರಕ್ಕೆ ಕಾಯುವ ನಾಲ್ಕು ಗಳಿಗೆಯ ವರ್ತಕ
ಬಿಡದೆ ನೀ ಹೀಗೆ ಸುರಿದರೆ ನಿಲ್ಲದ ಪ್ರಯತ್ನ ಆಗವುದೆಂದು ಸಾರ್ಥಕ
ಹರೆಯದ ಉತ್ಸಾಹಕೆ ಸ್ಪೂರ್ತಿಯಾದ ಹನಿಯು ಬೇಕಾಗಿದೆ ಇಂದು
ಮರೆಮಾಡಲು ನಲ್ಲನ ವಿಯೋಗದ ಹನಿಯ ನಡುವಯಸ್ಸಿನೋಳು
ಒಡಲಲ್ಲಿ ಕುರುವ್ಹಿಟ್ಟು,ತನ್ನ ಅಸ್ತಿತ್ವ ಮರೆಮಾಡಿ,ವಿಧವೆಯ ಪದವಿಯು
ಹಣೆಯಲ್ಲಿ ಬೊಟ್ಟಿಟ್ಟು,ಹೊಸ ವ್ಯಕ್ತಿತ್ವ ತರೆಯಲು ಬೇಕಿದೆ ಆಸರೆಯು
ಕಿಟಕಿಯ ಹೊರ ಮಳೆ ನಿಂತರೂ ಒಳಗೆ ಇನ್ನೂ ಸುರಿಯುತ್ತಿದೆ
ಹೊರಗಿನ ಹನಿ ಸೇರಿ ಕವನದಂಚಿನಲಿ ಸಿಹಿ ಮತ್ತು ಪೇರಿಸಿದೆ
ಒಳಗಿನ ಹನಿ ಹರಿದ ಸೇರಗಿನಂಚಿನಲಿ ಮಣಿಮುತ್ತು ಪೋಣಿಸಿದೆ
ಕಾಮತ್ ಕುಂಬ್ಳೆ
ಸಾಹಿತ್ಯ ಸ್ವಂತದ್ದು, ಚಿತ್ರ ಕದದ್ದು.
Comments
ಉ: ಮಳೆ
In reply to ಉ: ಮಳೆ by ಸುಮ ನಾಡಿಗ್
ಉ: ಮಳೆ
ಉ: ಮಳೆ
In reply to ಉ: ಮಳೆ by gopinatha
ಉ: ಮಳೆ
ಉ: ಮಳೆ
In reply to ಉ: ಮಳೆ by ನಂದೀಶ್ ಬಂಕೇನಹಳ್ಳಿ
ಉ: ಮಳೆ
ಉ: ಮಳೆ
In reply to ಉ: ಮಳೆ by kavinagaraj
ಉ: ಮಳೆ
ಉ: ಮಳೆ
ಉ: ಮಳೆ
In reply to ಉ: ಮಳೆ by Chikku123
ಉ: ಮಳೆ
In reply to ಉ: ಮಳೆ by kamath_kumble
ಉ: ಮಳೆ
In reply to ಉ: ಮಳೆ by KAVITHA K S
ಉ: ಮಳೆ