umesh mundalli

umesh mundalli

ಕವನ

 


ಏಕೋ ಏನೋ ನಮ್ಮ ನಡುವೆ


ಅಂತರಾ ಇದೆ


ನಾನು ನಿನ್ನವ ಎಂಬ ಭಾವಕೆ


ಪರದೆ ಏಕಿದೆ


 


ಎದೆಯ ದುಗುಡ ಹೇಳಲಾರೆ


ಮನದ ಮಲ್ಲಿಗೆ


ಸೂಸು ನಿನ್ನ ಪರಿಮಳವನ್ನು


ಬಂದು ಮೆಲ್ಲಗೆ


 


ನೀನು ಭಾನು ನಾನು ಭುವಿಯು


ಅರಿಯದಾದೆನು


ಅರಿತೆ ಎಂಬ ಹಮ್ಮಿನಲ್ಲಿ


ಎಲ್ಲ ಮರೆತೆನೋ


 


ಜಗವು ಕರೆವ ಗಳಿಗೆ ನನ್ನ


ಬಳಿಗೆ ಬಂದಿದೆ


ಪರದೆ ಸರಿಸಿ ಕರೆವೆ ಎಂದು


ಮನವು ಕಾದಿದೆ


 


---ಉಮೇಶ ಮುಂಡಳ್ಳಿ ಭಟ್ಕಳ ು.ಕ.


 

Comments