ಮುಂಬೈ ಮೇಲೆ ಮತ್ತೆ ಬಾಂಬ್ ಧಾಳಿ

ಮುಂಬೈ ಮೇಲೆ ಮತ್ತೆ ಬಾಂಬ್ ಧಾಳಿ

 ಮುಂಬೈ ಮೇಲಿನ  ಬಾಂಬು ಧಾಳಿಯಲ್ಲಿ  

ಮಡಿದವರ ಆತ್ಮಗಳಿಗೆ  ಶಾಂತಿ ಸಿಗಲಿ  ಎಂದು ಹಾರೈಸೋಣ. 
 
ಪ್ರಿಯ ಸಂಪದ  ಓದುಗ ಮಿತ್ರರೇ  ಮತ್ತೊಮ್ಮೆ ಮುಂಬೈ ಮೇಲೆ  ಉಗ್ರರ  ಧಾಳಿ ನಡೆದಿದ್ದು  ಮತ್ತೆ ಮುಂಬೈ ರಸ್ತೆಗಳಲ್ಲಿ ಅಮಾಯಕರ ನೆತ್ತರು ಹರಿದದ್ದು, ಮಳೆಗೆ ಕೊಚ್ಚಿ ಹೋಗಿದ್ದು  ಆಯ್ತು. ಹಾಗೆಯೇ ರಾಜಕೀಯ ನಾಯಕರ ಮೊಸಳೆ ಕಣ್ಣೀರು ಪರಿಹಾರ  ಘೋಷಣೆ , ಉಗ್ರರ ಅಟ್ಟಹಾಸಕ್ಕೆ 'ಶಿಖಂಡಿ ಖಂಡನೆ'  ಎಲ್ಲವೂ ಆಯಿತು. ಪತ್ರಿಕೆ ದೃಶ್ಯ ಮಾಧ್ಯಮಗಳಲ್ಲಿ ಬ್ರೆಕಿಂಗ್ ನ್ಯೂಸ್  ಆಗಿ ಗಂಟೆಗಟ್ಟಲೆ ನೋವಲ್ಲಿ ನರಳುವವರನ್ನು, ಗೋಸುಂಬೆ ರಾಜಾಕಾರಣಿಗಳನ್ನು, ಕಂಡಿದ್ದು -ಕೇಳಿದ್ದೂ ಆಯ್ತು.
 
 
ಇದು ಮೊದಲ ಧಾಳಿಯಲ್ಲ ಮತ್ತು ಕೊನೆಯದೂ ಅಲ್ಲ. ಕೆಲವೇ ವರ್ಷಗಳ ಹಿಂದೆ ಮುಂಬೈ ನ ಪ್ರಸಿದ್ಧ ಸ್ಥಳಗಳ ಮೇಲೆ ಧಾಳಿ ಮಾಡಿ ಅಮಾಯಕರನ್ನು ಒತ್ತೆ ಇಟ್ಟುಕೊಂಡು ದಕ್ಷ ಅಧಿಕಾರಿಗಳನ್ನು ಹತ್ಯೆ ಮಾಡಿದ್ದೂ  ನಮ್ಮ ಕಣ್ಣ ಮುಂದೆ ಇನ್ನೂ ಮೊನ್ನೆ- ಮೊನ್ನೆ ನಡೆದಂಗಿದೆ. ಹಳೆಯದರಿಂದ  ಪಾಠ ಕಲಿಯದ ನಮ್ಮ ರಾಜಾಕಾರಣಿಗಳ  ಮತ್ತದೇ ಪೊಳ್ಳು ಆಶ್ವಾಸನೆ ನೀಡುತ್ತ ಉಗ್ರರನ್ನು ಧಮನಿಸುತ್ತೇವೆ ಅಂದಾಗ ಅದೆಲ್ಲಿಂದ ನಗಬೇಕೋ  ತಿಳಿಯುತ್ತಿಲ್ಲ.!!!!
 
 
 
ಇನ್ನು ಜಿಹಾದಿಗಳ ವಿಸ್ಯಕ್ಕೆ ಬಂದರೆ  ಅವ್ರಿಗೆ ತಾವು ಅದ್ಯಾವ ಖುಶಿಗಾಗೋ,  ಮಹಾನ್ ಸಾಧನೆಗಾಗಿಯೋ  ಅಮಾಯಕರ ಪ್ರಾಣ ತೆಗೆಯುತ್ತೆವಿ  ಅಂತ  ಅವ್ರಿಗೆ ಗೊತ್ತಿಲ್ಲ.
 
ಅದ್ಯಾರೋ 'ಗೂಬಾಲರ' ಮಾತು ಕೇಳಿಕೊಂಡು ತಮ್ಮ ಪ್ರಾಣ ಬಿಟ್ಟು ಅಮಾಯಕರ್ ಜೀವಗಳ ಜೊತೆ ಚೆಲ್ಲಾಟ  ಆಡುತ್ತಿದ್ದಾರೆ 
 
ಬದುಕುವುದಕ್ಕೆ,ಬದುಕಿರುವುದಕ್ಕೆ ,  ಹರ ಸಾಹಸ ಪಡುವ 
 
ಪಕ್ಕದಲ್ಲಿ ಬಿ ಎಂ ಟಿ ಸಿ  ಬಸ್ಸು ಯಮ  ರೂಪದಲ್ಲಿ ಮೈ ಮೇಲೆ ಬಂದರೆ, 
 
ವಿದ್ಯುತ್ ತಂತಿಯನ್ನು ಯಮನ ಯಮ ಪಾಶದಂತೆ  ನೋಡುವ,
 
 ಫೂಟ್ ಪತ್ ರಸ್ತೆ ಮೇಲಿನ  ಗುಂಡಿಯನ್ನು, ಹೂತು ಹಾಕಲು ತೋಡಿದ  ಹಳ್ಳ ಅನ್ಕೊಂಡು ಜೋಪಾನವಾಗಿ ದಾಟುತ್ತ  ಹೋಗುವ
 
 ನಮ್ಮಂತ ಜನ-ಸಾಮಾನ್ಯರಿಗೆ  ಈ ಜಿಹಾದಿಗಳು ಜೀವಕ್ಕೆ ಬೆಲೆ ಇಲ್ಲದಂತೆ  ಉಪಯೋಗವಿಲ್ಲದ,ಹಿಮ್ಸೆಗಾಗಿ ತಮ್ಮ ಪ್ರಾಣ ಕೊಟ್ಟು ಬೇರೆ ಅಮಾಯಕರ ಪ್ರಾಣ ತೆಗೆವುದು ನೋಡುವಾಗ-ಕೇಳುವಾಗ  ಆಶ್ರ್ಯವಾಗುತ್ತದೆ. ಜೀವ ಕೊಡದವನಿಗೆ,ಜೀವ  ತೆಗೆದುಕೊಳ್ಳುವ  ಹಕ್ಕು ಇಲ್ಲ ಅಲ್ಲವೇ?
 
ಈ ನಿಟ್ಟಿನಲ್ಲಿ ಒಬ್ಬ ಜನ ಸಾಮಾನ್ಯ ಆಗಿ  ನಾ ಯೋಚಿಸಿದಾಗ ನನಗೆ ಹಿಂದಿಯ  ಎ  ವೆಡ್ನೆಸ್ ಡೇ ಚಿತ್ರ ನೆನಪಾಗುತ್ತೆ.
 
ಒಬ್ಬ ಜನ ಸಾಮಾನ್ಯ ಹೆಚ್ಹ್ಸಿದ ಉಗ್ರರ ಹಿಂಸೆ ಮತ್ತು ಸರಕಾರಗಳ ಕೈಲಾಗದ ಸ್ತಿತಿ ನೋಡಿ ತಾನೇ ರಂಗಕ್ಕಿಳಿದು ಉಗ್ರರ ಪರವಾಗಿದ್ದಾನೆ ತೋರಿಸಿ ನಂಬಿಸಿ ಉಗ್ರರ ನ್ನು ಅವರ 'ಭಾಷೆಯಲ್ಲೇ' ಕೊನೆಗಾಣಿಸುತ್ತಾನೆ(ಮುಳ್ಳನ್ನ ಮುಳ್ಳಲ್ಲಿ ತೆಗೆದಂತೆ) ಕುಖ್ಯಾತ ಉಗ್ರರನ್ನ ಜೈಲ್ ಇಂದ ಬಿಡಿಸಿ  ಕರೆ ತಂದು ಟೇಬಲ್  ಕೆಳಗಡೆ ಬಾಂಬ್ ಇಟ್ಟು ಅವರನ್ನೇ ಪರಲೋಕಕ್ಕೆ ಕಳಿಸುತ್ತಾನೆ.
 
ಮೇಲಿಂದ ಮೇಲೆ ಉಗ್ರರ  ಅಟ್ಟಹಾಸ ಮುಂದುವರೆದರೂ  ನೂರಾರು ಅಮಾಯಕರ  ಜೀವ ಹೋದರು  ಕೇಂದ್ರ ರಾಜ್ಯ ಸರಕಾರಗಳು ಅದಕ್ಕೆ ತಕ್ಕ ಪ್ರತ್ಯುತ್ತರ  ನೀಡದೆ  ಯಾರನ್ನೋ ಓಲೈಸಲು ಹೋಗಿ  ಇನ್ನಾರಿಗೋ ಕುತ್ತಿಗೆಗೆ ತರುತ್ತಿದ್ದಾರೆ. ಮುಂಬೈ  ಮೇಲೆ ಕಸಬ್ ನಡೆಸಿದ ದಾಳಿಯೊಂದೆ ಸಾಕು ಭಾರತೀಯರ ನರ- ನಾಡಿ ಬಿಗಿದು ಸಿಟ್ಟು ಉಕ್ಕಿಸಲು. ಅನ್ತಿರ್ಪ ಆ ಕಸಬ್ನನ್ನೇ  ನೂರಾರು ಕೋಟಿ ಖರ್ಚು ಮಾಡಿ ಸಾಕಿ ಸಲಹುತ್ತಿವೆ.
 
ಪರ ದೇಶಗಳ 'ಯಾವ್ಯಾವ್ದನ್ನೋ- ಎನೆನನ್ನೋ'   ಅಂದಾನುಕರಣೆಯಿಂದ ಅನುಕರಿಸುವ ಭಾರತೀಯ  ರಾಜಕೀಯ  ನಾಯಕರಿಗೆ  , ಪರ ದೇಶಗಳಂತೆ ಉಗ್ರರನ್ನು  ಹುಡುಕಾಡಿ ಅವರೆಲ್ಲೇ ಅಡಗಿದ್ದರೂ ನಿರ್ನಾಮ ಮಾಡುವ  ಛಾತಿ- ಛಲ ಏಕಿಲ್ಲ?   

Comments