ನೀವೇನು ಹೇಳ್ತೀರೋ ಅದನ್ನು

ನೀವೇನು ಹೇಳ್ತೀರೋ ಅದನ್ನು



 

 

 

 

 

 

 

 

 

 

 

ಊಟಕ್ಕೆ ಮಾಡುವಿ  ಏನನ್ನು
ನೀವೇನು ಹೇಳ್ತೀರೋ ಅದನ್ನು

ಅನ್ನ ಸಾಂಬಾರ್ ಮಾಡ್ರಿ
ಮಕ್ಕಳು ತಿನ್ನಲ್ಲ ಬಿಡ್ರೀ

ಮೊಸರನ್ನ ಇರಲಿ
ಮೊಸ್ರಿಲ್ಲ ಮನೇಲಿ

ಪೂರಿ ಕಡಲೆ ಗಸಿ
 ಹೇವಿ ಬಿಡಿ ಜಾಸ್ತಿ

ಬೆಳ್ಳುಳ್ಳಿ  ಚಟ್ನಿ ಅನ್ನ
ಶುಕ್ರವಾರಕ್ಕೆ ಮುನ್ನ?

ಮಸಾಲಾ ದೋಸೆ?
ರಾತ್ರೆಗಾ ಈ ಆಸೆ?

ಹೊರಗಿಂದ ತಂದ್ರೆ?
ಹೊಟ್ಟೆಗೇ ತೊಂದ್ರೆ

ತೊವ್ವೆ ಅನ್ನ ನಲ್ಲೇ?
ನಿನ್ನೆ ಮಾಡಿದ್ದೆನಲ್ಲ

ಹಾಗಾದರೆ ಪಾಸ್ತಾ
ಊಟವಾ ಪಾಸ್ತಾ  ?

ಅವಲಕ್ಕಿ ಇಲ್ವಾ ಉಪ್ಪಿಟ್ಟು
ಬೇರೇನಿಲ್ವಾ ಇದ್ಬಿಟ್ಟು

ಬಿಸಿ ಬೇಳೆ ಬಾತು ಮತ್ತೆ
ತುಂಬಾನೇ ಸಮಯ ಹಿಡಿಸುತ್ತೆ


ಊಟಕ್ಕೆ ಮಾಡುವಿ  ಏನನ್ನು
ನೀವೇನು ಹೇಳ್ತೀರೋ ಅದನ್ನು

 

 

 

 

ಚಿತ್ರ ಕ್ರಪೆ: ಅಂತರ್ ಜಾಲ

Rating
No votes yet

Comments