ಅತ ಮತ್ತು ಆಕೆ

ಅತ ಮತ್ತು ಆಕೆ

ಆತ ಮತ್ತು ಆಕೆ
ಆಕೆ ಬಸ್ಸ್ಟ್ಯಾಂಡಿನಲ್ಲಿ ನಿಂತಿದ್ದಳು. ಅಗ ಸಾಯಂಕಾಲದ ಸಮಯ. ಆಗ ಒಂದು ಕಾರು ಬಂದು ನಿಂತಿತು. ಕಾರನ್ನು ಚಲಿಸುತ್ತಿದ್ದ ಆತ ಬರುತ್ತೀರಾ ಅಂತ ಕಣ್ಣಿನಲ್ಲೆ ಆಕೆ ಯನ್ನು ಕೇಳಿದ. ಆಕೆ ಕಾರನ್ನು ಏರಿದಳು. ಕಾರು ಹೊರಟಿತು. ಕಾರು ಬಹಳ ದೂರ ಸಾಗಿ ಒಂದು ಮನೆಯ ಮುಂದೆ ನಿಂತಿತು. ಆಕೆ ಇಳಿದು ಮನೆಯ ಒಳಕ್ಕೆ ಹೋದಳು. ಆತನೂ ಇಳಿದ. ಆಕೆಯನ್ನು ಹಿಂಬಾಲಿಸಿದ. ಅವರಿಬ್ಬರು ಮನೆಯ ಬಾಗಿಲನ್ನು ಹಾಕಿಕೊಂಡರು. ಏಕೆಂದರೆ ಅವರಿಬ್ಬರು ಗಂಡ ಮತ್ತು ಹೆಂಡತಿಯರು.

Comments