ಶೀನ ತಂದ ಗಸೆಗಸೆ ಪಾಯಸ
ಶೀನ ಉರಫ್ ಶ್ರೀನಿವಾಸ ಬುದ್ದಿವಂತ ಅನ್ನೋದಿಕ್ಕಿಂತ ದೈರ್ಯವಂತ ಹಾಗಾಗಿ ಏಳನೇ ತರಗತಿಯಲ್ಲಿಯೇ ಮೂರನೆ ವರ್ಷವೂ ಮುಂದುವರೆದಿದ್ದ. ಜೊತೆಗೆ ಸ್ವಲ್ಪ ಕೀಟಲೆ ಸ್ವಭಾವದವ ಇವನನ್ನು ಕಂಡರೆ ಇವನ ಸ್ನೇಹಿತರುಗಳಿಗೆ ಬಹಳ ಪ್ರೀತಿ ಏಕೆಂದರೆ ಇವರು ಶಾಲೆಗೆ ಅವರ ಊರಿನಿಂದ ಮೂರು ಕಿಲೋ ಮೀಟರ್ ನಡದೇ ಹೋಗಬೇಕಿತ್ತು ದಾರಿಯಲ್ಲಿ ಶೀನನ ನೇತೃತ್ವದಲ್ಲಿ ತೋಟಗಳ್ಳಲ್ಲಿ ಕದಿಯುತ್ತಿದ್ದ ಏಳನೀರು , ಕಾಯಿ, ಮಾವಿನಹಣ್ಣು , ಹಲಸಿನಹಣ್ಣು ಇವರಿಗೂ ಸಿಗುತ್ತಿತ್ತು ಸ್ನೇಹಿತರುಗಳಲ್ಲಿ ಕೆಲವರ ಮನೆಯಲ್ಲಿ ಬಡತನದ ಕಾರಣ ಸರಿಯಾದ ಊಟ ಸಿಗದ ಕಾರಣ ಇದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಕೆಲವು ವೇಳೆ ಸಿಕ್ಕಿ ಬಿದ್ದು ಒದೆ ತಿಂದಿದ್ದು ಇದೆ ಆದರೂ ಕದಿಯುವದನ್ನು ಮಾತ್ರ ಬಿಡುತ್ತಿರಲಿಲ್ಲ
ಕನ್ನಡದ ರಂಗಪ್ಪ ಮೇಷ್ಟ್ರು ಎಂದರೆ ನೆನಪಿಗೆ ಬರ್ತಾ ಇದ್ದದ್ದು ಅವರ ಬೆತ್ತದ ರುಚಿ ಜೊತೆಗೆ ಸಿಕ್ಕಾಪಟ್ಟೆ ಸಿಟ್ಟು ಬೇರೆ ಹೀಗಾಗಿ ಅವರನ್ನು ಕಂಡರೆ ಎಲ್ಲರಿಗೂ ಭಯ ಆದರೆ ಶೀನ ಮಾತ್ರ ಹೆದರುತ್ತಿರಲಿಲ್ಲ ಇವರನ್ನು ಸಹ ಒಮ್ಮೊಮ್ಮೆ ಪೇಚಿಗೆ ಸಿಕ್ಕಿಸಿ ಬಿಡುತ್ತಿದ್ದ ಹಾಗಾಗಿ ಇವನ ಸ್ನೇಹಿತರಿಗೆ ತಮ್ಮ ಕೈನಲ್ಲಿ ಆಗದ ಕೆಲಸ ಇವನು ಮಾಡ್ತಾನಲ್ಲ ಅಂತ ಹೇಳಿ ಇವನನ್ನು ಕಂಡರೆ ಖುಷಿ ಪಡ್ತಾ ಇದ್ದರು
ಒಮ್ಮೆ ರಂಗಪ್ಪ ಮೇಷ್ಟ್ರು ಖುಷಿ ಮೂಡ್ ನಲ್ಲಿ ಇದ್ದರು “ ನೋಡ್ರೋ ದಿನಾ ನಾನೆ ಪ್ರಶ್ನೆ ಕೇಳ್ತಾ ಇರ್ತಿನಿ ಇವತ್ತು ನೀವೇ ಪ್ರಶ್ನೆ ಕೇಳಿ ನಾನು ಉತ್ತರ ಹೇಳ್ತಿನಿ “ ಅಂದರು, ಎಲ್ಲರಿಗೂ ಪ್ರಶ್ನೆ ಕೇಳಬೇಕು ಅನಿಸಿದರೂ ಆಮೇಲೆ ನಾವೇನೋ ಪ್ರಶ್ನೆ ಕೇಳೋದು ಅವರಿಗೆ ಸಿಟ್ಟು ಬಂದರೆ ಬೇತ್ತದ ರುಚಿ ನೋಡಬೇಕಾಗುತ್ತೆ ಅನ್ನೋ ಭಯದಿಂದ ಸುಮ್ಮನೆ ಕುಳ್ತಿದ್ರು. ಶೀನ ಮಾತ್ರ ಎದ್ದು ನಿಂತು “ ಏನು ಪ್ರಶ್ನೆ ಬೇಕಾದರೂ ಕೇಳಬಹುದಾ ಸಾರ್ “ ಏನು ಬೇಕಾದರೂ ಕೇಳಬಹದು ಕೇಳು ಅಂದರು ರಂಗಪ್ಪ ಮೇಷ್ಟ್ರು
“ ಸಾರ್ ಮನೇಲಿ ಶುಭ ಸಮಾರಂಭಗಳು ಆದಾಗ ಮಾವಿನಸೊಪ್ಪಿನ ತೋರಣ, ಬಾಳೇಕಂದು ಇವನ್ನೆಲ್ಲ ಕಟ್ಟಿರ್ತಾರಲ್ಲ ಯಾಕೆ ಸಾರ್ “
ಇವನೇನೋ ತರಲೆ ಪ್ರಶ್ನೆ ಕೇಳ್ತಿಯನ್ನಲ್ಲ ಅಂದು ಕೊಂಡು “ ನೀನೆ ಹೇಳದಲ್ಲೋ ಶುಭ ಸಮಾರಂಬ ಅಂತ ಅದು ಗೊತ್ತಾಗ್ಲಿ ಅಂತ ಕಟ್ಟಿರುತ್ತಾರೆ “ ಅಂದರು ರಂಗಪ್ಪ ಮೇಷ್ಟ್ರು
“ ಮನೇಲಿ ನಡೆಯೋ ಹಿರಿಯರ ಶ್ರಾದ್ದ ಕೂಡ ಶುಭ ಅಲ್ಲವಾ ಸಾರ್ ಆವಗ ಇವನ್ನೆಲ್ಲ ಕಟ್ಟಲ್ಲವಲ್ಲ ಸಾರ್” ಸರಿ ಅದೇನಕ್ಕೆ ಕಟ್ಟಿರ್ತಾರೆ ಅಂತ ನೀನೆ ಹೇಳಪ್ಪ ಅಂದರು ಮೇಷ್ಟ್ರು
“ ಕಟ್ಟದೆ ಇದ್ದರೆ ಬಿದ್ದು ಹೋಗಲ್ವ ಸಾರ್ ಅದಕ್ಕೆ ಕಟ್ಟಿರ್ತಾರೆ “ ಸಾರ್ ಇನ್ನೊಂದು ಪ್ರಶ್ನೆ ಕೇಳ್ಲಾ ಅಂದ ಶೀನ
ಅದೇನು ಕೇಳ್ತಾನೊ ನೋಡೋಣ ಅಂತ ಕೇಳು ಅಂದರು
ಮೂರು ಇರುವೆಗಳು ಒಂದರ ಹಿಂದೆ ಹೋಗ್ತಾ ಇದ್ವು ಒಬ್ಬ ಮೊದಲನೆ ಇರುವೆನ ಕೇಳಿದ ನಿನ್ನ ಹಿಂದೆ ಎಷ್ಟು ಇರುವೆ ಇದೆ ಅಂತ ಅದು ಹೇಳ್ತು ನನ್ನ ಹಿಂದೆ ಎರಡು ಇರುವೆ ಇದೆ ಅಂತ , ಮದ್ಯದ ಇರುವೆನ ಕೇಳಿದ ನಿನ್ನ ಹಿಂದೆ ಎಷ್ಟು ಇರುವೆ ಇದೆ ಅದು ನನ್ನ ಹಿಂದೆ ಒಂದು ಇರುವೆ ಇದೆ ಅಂತ ಹೇಳಿತು , ಕಡೆ ಇರುವೆಗೂ ಇದೆ ಪ್ರಶ್ನೆ ಕೇಳಿದ ಅದು ನನ್ನ ಹಿಂದೆ ಮೂರು ಇರುವೆ ಇದೆ ಅಂತ ಹೇಳಿತು ಆ ಕಡೆ ಇರುವೆ ಯಾಕೆ ಹಾಗೆ ಹೇಳಿತು ಅಂತ ಹೇಳಿ ಸಾರ್
ರಂಗಪ್ಪ ಮೇಷ್ಟ್ರು ಎಷ್ಟು ಯೋಚನೆ ಮಾಡಿದರೂ ಅವರಿಗೆ ಏನು ಹೋಳಿಲಿಲ್ಲ ಸರಿ ಇದಕ್ಕೂ ನೀನೆ ಉತ್ತರ ಹೇಳಿ ಬಿಡಪ್ಪ ಅಂದರು “ ಕಡೇ ಇರುವೆ ಸುಳ್ಳು ಹೇಳುತ್ತೆ ಅಷ್ಟೆ ಸಾರ್ “ ಎಂದ ಶೀನ ಎಲ್ಲರು ಜೋರಾಗಿ ನಗಕ್ಕೆ ಶುರು ಮಾಡಿದರು ರಂಗಪ್ಪ ಮೇಷ್ಟ್ರಗೆ ಸಿಟ್ಟು ಬಂತು ಶೀನನಿಗೆ ಎರಡು ಬಿಟ್ಟು ಸುಮ್ಮನೆ ಕುತ್ಕೋಳು ಅಂದರು ಮನಸಿನಲ್ಲಿ ಇವರಿಗೆ ಪ್ರಶ್ನೆಕೇಳಿ ಅಂತ ಹೇಳಿದ್ದೆ ತಪ್ಪಾಯಿತು ಅನ್ನೊಕೊಂಡರು
ಇಂತ ಶೀನ ಒಂದು ದಿನ ಶಾಲೆಗೆ ತಡವಾಗಿ ಬಂದು ಬಾಗಿಲಲ್ಲಿ ನಿಂತು “ ಸಾರ್ ಒಳಗ್ ಬರಬಹುದಾ” ಅಂದ ಪಾಠ ಮಾಡ್ತಾ ಇದ್ದ ರಂಗಪ್ಪ ಮೇಷ್ಟ್ರು ಅವನ ಕಡೆ ತಿರುಗಿ “ ಯಾಕೋ ಲೇಟು ಇದೇನು ನಿಮ್ಮ ಮಾವನ ಮನೆ ಅಂತ ತಿಳಿಕೊಂಡಿದೀಯ ಏನೋ ಅದು ಕೈನಲ್ಲಿ ಚೊಂಬು “
“ ಗಸೆಗಸೆ ಪಾಯಸ ಸಾರ್ “ ಗಸೆಗಸೆ ಪಾಯಸ ಅಂದ ತಕ್ಷಣ ರಂಗಪ್ಪ ಮೇಷ್ಟ್ರುಗೆ ಬಾಯಲ್ಲಿ ನೀರೂರಿ “ ಲೇಟಾಗಿ ಬಂದಿದ್ದಕ್ಕೆ ಲಂಚನಾ ಕೊಡಿಲ್ಲಿ “ ಅಂತ ಹೇಳಿ ಚೊಂಬು ತಗೊಂಡು ಪೂರ್ತಿ ಪಾಯಸ ಕುಡಿದು ತಮ್ಮ ಶಲ್ಯದಿಂದ ಬಾಯಿ ಒರಸಿ ಕೊಂಡು “ ಏನೋ ಇವತ್ತು ವಿಶೇಷ “ ಅಂತ ಕೇಳಿದರೂ
“ ಇವತ್ತು ನನ್ನ ಹುಟ್ಟು ಹಬ್ಬ ಸಾರ್ ಅದಕ್ಕೆ ನಮಮ್ಮ ಗಸೆಗಸೆ ಪಾಯಸ ಮಾಡಿದ್ರು ಅದನ್ನ ನಮ್ಮನೆ ನಾಯಿ ನೆಕ್ಕಿ ಬಿಟ್ಟಿತ್ತು ಆಚೆ ಬಿಸಾಕಕ್ಕೆ ಈ ಚೊಂಬಲ್ಲಿ ತುಂಬಿ ಇಟ್ಟಿದ್ರು ಅದನ್ನ ತಗೊಂಡು ಬಂದಿದ್ದೆ ಸಾರ್ “ ಅಂದ
ರಂಗಪ್ಪ ಮೇಷ್ಟ್ರುಗೆ ಪಿತ್ತ ನೆತ್ತಿಗೇರಿತು “ ಅಯೋಗ್ಯ ನಾಯಿ ನೆಕ್ಕಿರೋ ಪಾಯಸ ತಂದು ನನಗೆ ಕುಡಿಸಿದಿಯ “ ಅಂತ ಹೇಳಿ ಚೊಂಬನ್ನು ಜೋರಾಗಿ ಬಿಸಾಕಿದ್ರು ಚೊಂಬು ತೂತಾಯಿತು
ಶೀನ ಚೊಂಬು ತಗೊಂಡು ತೂತಾಗಿದ್ದನ್ನ ನೋಡಿ ಜೋರಾಗಿ ಅಳಕ್ಕೆ ಶುರು ಮಾಡಿದ ,
ನಾಯಿ ನೆಕ್ಕಿದ ಪಾಯಸ ಕುಡಿದಿದ್ದು ನಾನು ಇವ್ಯಾನಕೆ ಅಳತಾ ಇದ್ದಾನೆ ಅನ್ಕೋಂಡು “ ಏ ಮುಚ್ಚೋ ಬಾಯಿ ಯಾಕೋ ಅಳತಾ ಇದಿಯ “ ಅಂದರು
“ ಸಾರ್ ಚೊಂಬು ತೂತಾಗಿದೆ ಈ ಚೊಂಬು ನಮ್ಮಪ್ಪ ಬೆಳಗ್ಗೆ ಹೊತ್ತು ಬಯಲಕಡೆ ಹೋಗಬೇಕಾರೆ ತಗೊಂಡು ಹೋಗು ಚೊಂಬು ಅವರಿಗೆ ಗೊತ್ತಾದರೆ ನನ್ನ ಚರ್ಮ ಸುಲಿದು ಬಿಡ್ತಾರೆ ಸಾರ್ ಅದನ್ನು ನೆನಸ್ಕೊಂಡು ಭಯ ಆಗತಾ ಇದೆ ಅದಕ್ಕೆ ಅಳತಾ ಇದ್ದೀನಿ“
ರಂಗಪ್ಪ ಮೇಷ್ಟ್ರುಗೆ ಹೊಟ್ಟೆ ತೊಳಸಿ ತಲೆ ತಿರುಗಿದಂತಾಗಿ ಕುರ್ಚಿಯಲ್ಲಿ ಕುಸಿದು ಕುಳಿತರು
ಕ್ಲಾಸ್ ರೂಂ ತುಂಬ ನಗೆಯ ದ್ವನಿ ಮಾತ್ರ ಕೇಳಿ ಬರ್ತಾ ಇತ್ತು …………………
ನಾನು ಇದುವರೆಗೂ ಯಾವುದೇ ಲೇಖನವನ್ನಾಗಲಿ, ಬರಹವನ್ನಾಗಲಿ ಬರೆದಿಲ್ಲ ಇದೇ ಮೊದಲ ಪ್ರಯತ್ನ ಏನಾದರೂ ತಪ್ಪಗಳಿದ್ದಲ್ಲಿ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಸ್ವಾಗತಿಸುತ್ತೇನೆ
Comments
ಉ: ಶೀನ ತಂದ ಗಸೆಗಸೆ ಪಾಯಸ
In reply to ಉ: ಶೀನ ತಂದ ಗಸೆಗಸೆ ಪಾಯಸ by gopaljsr
ಉ: ಶೀನ ತಂದ ಗಸೆಗಸೆ ಪಾಯಸ
ಉ: ಶೀನ ತಂದ ಗಸೆಗಸೆ ಪಾಯಸ
In reply to ಉ: ಶೀನ ತಂದ ಗಸೆಗಸೆ ಪಾಯಸ by partha1059
ಉ: ಶೀನ ತಂದ ಗಸೆಗಸೆ ಪಾಯಸ
ಉ: ಶೀನ ತಂದ ಗಸೆಗಸೆ ಪಾಯಸ
In reply to ಉ: ಶೀನ ತಂದ ಗಸೆಗಸೆ ಪಾಯಸ by gowri parthasarathy
ಉ: ಶೀನ ತಂದ ಗಸೆಗಸೆ ಪಾಯಸ
ಉ: ಶೀನ ತಂದ ಗಸೆಗಸೆ ಪಾಯಸ
In reply to ಉ: ಶೀನ ತಂದ ಗಸೆಗಸೆ ಪಾಯಸ by umargraju
ಉ: ಶೀನ ತಂದ ಗಸೆಗಸೆ ಪಾಯಸ