ಮುಂಗಾರಿನ ಮಳೆಯಲಿ ನೋಡೆ
ನಮ್ಮೂರಿನ ನಯಾಗಾರ
ಇದು ಅಸಲಿ ನಯಾಗಾರ ಅಲ್ಲ. ನಮ್ಮೂರಿನ ಸಮೀಪದಲ್ಲಿಯೇ (ಸುಮಾರು 8ಕಿ.ಮೀ. ದೂರ) ಇದ್ದರೂ ನನ್ನ ಗಮನಕ್ಕೇ ಬಾರದ ಒಂದು ಜಲಪಾತವನ್ನು 16-7-2011ರಂದು ಗೋಕರ್ಣಕ್ಕೆ ಹೊರಟಾಗ ಗೆಳೆಯ ರಮಾನಂದ ತಲವಾಟ ಮಾರ್ಗ ಮಧ್ಯದಲ್ಲಿ ಇಲ್ಲೊಂದು ಜಲಪಾತ ನೋಡುತ್ತೀರಾ ಎಂದು ಕೇಳಿದಾಗ ನಮಗೆ ಆಶ್ಚರ್ಯ! ನಾವು ನೋಡದ ಜಲಪಾತ ಇಷ್ಟು ಸಮೀಪದಲ್ಲಿ?
ಈ ಜಲಪಾತ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಆಡುಕಟ್ಟಾ ದಿಂದ ಹಲಗೇರಿಗೆ ಹೋಗುವ ಮಾರ್ಗಮಧ್ಯದಲ್ಲಿ ನಿಪ್ಲಿ - ಹೂಸೂರು ಡ್ಯಾಂ ಸಮೀಪದಲ್ಲಿ ಸುಮಾರು 6-10 ಅಡಿ ಎತ್ತರದಿಂದ 50 ಅಡಿ ಅಗಲವಾಗಿ ಧುಮ್ಮಿಕ್ಕುವ ಬಿಳಿಯ ನೀರಿನಿಂದಾದ ಜಲಪಾತ ಅತ್ಯಂತ ರುದ್ರ ರಮಣೀಯವಾಗಿ ಗೋಚರಿಸುತ್ತದೆ. ಬಿಳಿಯ ಹಾಲ್ನೊರೆಯಂತಹ ಜಲಧಾರೆ ಎತ್ತರದಲ್ಲಿ ಕಡಿಮೆ ಇದ್ದರೂ ನಯಾಗಾರ ಜಲಪಾದಂತೆ ಅಗಲವಾಗಿ ಹರಡಿ ಭೋರ್ಗರೆಯುತ್ತದೆ.
ಇದರ ಮೇಲ್ಭಾಗದಲ್ಲಿ ಹೊಳೆಯ ಹರವಾದ ಹರಿವು ಸಮತಟ್ಟಾಗಿದ್ದು, ಭಯವಿಲ್ಲದಂತೆ ನೀರಿನಲ್ಲಿ ನಲಿಯಲು ಅನುಕೂಲಕರವಾಗಿಇದೆ. ನೀರಲ್ಲಿ ಹಾದು ಆಕಡೆಯಿಂದ ಈ ಕಡೆಯವರೆಗೆ ದಾಟಬಹುದು. ಸಮೀಪದಲ್ಲಿಯೇ ಇರುವ ಡ್ಯಾಂನ ನೀರು ಶುಭ್ರವಾಗಿದ್ದು ಈ ನೀರಲ್ಲಿ ಈಜಾಡಬಹುದು. ಪಕ್ಕದಲ್ಲಿಯೇ ಇರುವ ಫಾರೆಸ್ಟ್ ನರ್ಸರಿ ಸಹ ಭೇಟಿ ನೀಡಬಹುದಾದ ಸ್ಥಳ.
ಜಲಪಾತ ಮಳೆಗಾಲದಲ್ಲಿ ಮಾತ್ರಾ ನೋಡಬಹುದಾಗಿದ್ದು ಬೇಸಿಗೆಯಲ್ಲಿ ಬರಿದಾಗಿರುತ್ತದೆ.
ಆಸಕ್ತರ ಬಂದು ನೋಡಿ ಪರಿಸರದಲ್ಲಿ ನೀವು ಬಂದು ಹೋದಬಗ್ಗೆ ಅಲ್ಲೆಲ್ಲೂ ಯಾವುದೇ ಕುರುಹುಗಳನ್ನುಳಿಸದೆ ಹೋಗುವುದನ್ನು ಮರೆಯಬೇಡಿ.
Comments
ಉ: ಮುಂಗಾರಿನ ಮಳೆಯಲಿ ನೋಡೆ
ಉ: ಮುಂಗಾರಿನ ಮಳೆಯಲಿ ನೋಡೆ
ಉ: ಮುಂಗಾರಿನ ಮಳೆಯಲಿ ನೋಡೆ
ಉ: ಮುಂಗಾರಿನ ಮಳೆಯಲಿ ನೋಡೆ: @ದೇವರೇ..!! ...