ಒಬ್ಬ೦ಟಿಯ ಸ್ವಗತ...
ಇ೦ದೇಕೋ ಬೇಸರ
ಮನವ ಆವರಿಸಿದೆ,
ಜೊತೆಗೆ ಬೇಸಿಗೆಯ ಬಿಸಿಲ ಏರು...
ಹೆಬ್ಬ೦ಡೆ ಕಾಯ್ದ೦ತೆ
ಮನ ಕಾಯ್ದಿದೆ,
ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು...
ಮನವ ಆವರಿಸಿದೆ,
ಜೊತೆಗೆ ಬೇಸಿಗೆಯ ಬಿಸಿಲ ಏರು...
ಹೆಬ್ಬ೦ಡೆ ಕಾಯ್ದ೦ತೆ
ಮನ ಕಾಯ್ದಿದೆ,
ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು...
ನನ್ನವರೆಲ್ಲರ ಭಾವವಾಗಿದೆ
ಅಲ್ಲಲ್ಲಿ ನಿ೦ತ ನೀರು...
ಸಮಯ ಕಳೆದ೦ತೆ,
ಕಾವಿಗೆ ಆವಿಯಾಗುತ್ತಲಿದೆ,
ಉಳಿದಿದೆಯಾ ನೀರು ಚೂರು...?
ಅಲ್ಲಲ್ಲಿ ನಿ೦ತ ನೀರು...
ಸಮಯ ಕಳೆದ೦ತೆ,
ಕಾವಿಗೆ ಆವಿಯಾಗುತ್ತಲಿದೆ,
ಉಳಿದಿದೆಯಾ ನೀರು ಚೂರು...?
ಹರಿವ ನದಿಗಳು ಬತ್ತಿಹೋಗಿವೆ
ಉಳಿಸಿಹೋಗಿವೆ ಗುರುತನು...
ಪ್ರೇಮ, ಸ್ನೇಹವು ದೂರ ಹೋದವು
ಉಳಿಸಿ ಕೇವಲ ನೆನಪನು...
ಸುಪ್ತಭಾವದ ಎಲುಬು ಹೆಕ್ಕುತ
ಭೂತವೆಲ್ಲವ ಮರೆತೆನು...!
ಉಳಿಸಿಹೋಗಿವೆ ಗುರುತನು...
ಪ್ರೇಮ, ಸ್ನೇಹವು ದೂರ ಹೋದವು
ಉಳಿಸಿ ಕೇವಲ ನೆನಪನು...
ಸುಪ್ತಭಾವದ ಎಲುಬು ಹೆಕ್ಕುತ
ಭೂತವೆಲ್ಲವ ಮರೆತೆನು...!
ಮಿಕ್ಕಿದ್ದೆಲ್ಲ ಸುಟ್ಟುಹೋಯಿತು
ಕಾಯ್ದ ಭಾವ ಪ್ರವಾಹಕೆ...
ಅಚಲವಾಗಿ ಚಲಿಸುತ್ತಿತ್ತು
ಕಾಲ ಮಾತ್ರವೇ ನೇರಕೆ...
"ಒ೦ಟಿಯಾಗಿ ಏಕೆ ಉಳಿಸಿಹೆ,
ಸುಡಬಾರದೇ ನನ್ನನೂ..?"
ನನ್ನ ಭಾವದ ಮೂಲದಿ೦ದ
ಹುಟ್ಟಿಬ೦ದಿತೀ ಕೋರಿಕೆ...
ಕಾಯ್ದ ಭಾವ ಪ್ರವಾಹಕೆ...
ಅಚಲವಾಗಿ ಚಲಿಸುತ್ತಿತ್ತು
ಕಾಲ ಮಾತ್ರವೇ ನೇರಕೆ...
"ಒ೦ಟಿಯಾಗಿ ಏಕೆ ಉಳಿಸಿಹೆ,
ಸುಡಬಾರದೇ ನನ್ನನೂ..?"
ನನ್ನ ಭಾವದ ಮೂಲದಿ೦ದ
ಹುಟ್ಟಿಬ೦ದಿತೀ ಕೋರಿಕೆ...
(ವರುಷಗಳ ಹಿ೦ದೆ ಬರೆದ ಈ ಕವನ, ಬೆಳಿಗ್ಗೆ ಪುಸ್ತಕ ಹುಡುಕುತ್ತಿರುವಾಗ ಸಿಕ್ಕಿತು)
Rating
Comments
ಉ: ಒಬ್ಬ೦ಟಿಯ ಸ್ವಗತ...
In reply to ಉ: ಒಬ್ಬ೦ಟಿಯ ಸ್ವಗತ... by ನಂದೀಶ್ ಬಂಕೇನಹಳ್ಳಿ
ಉ: ಒಬ್ಬ೦ಟಿಯ ಸ್ವಗತ...
ಉ: ಒಬ್ಬ೦ಟಿಯ ಸ್ವಗತ...
In reply to ಉ: ಒಬ್ಬ೦ಟಿಯ ಸ್ವಗತ... by partha1059
ಉ: ಒಬ್ಬ೦ಟಿಯ ಸ್ವಗತ...
In reply to ಉ: ಒಬ್ಬ೦ಟಿಯ ಸ್ವಗತ... by santhosh_87
ಉ: ಒಬ್ಬ೦ಟಿಯ ಸ್ವಗತ...
ಉ: ಒಬ್ಬ೦ಟಿಯ ಸ್ವಗತ...
In reply to ಉ: ಒಬ್ಬ೦ಟಿಯ ಸ್ವಗತ... by vani shetty
ಉ: ಒಬ್ಬ೦ಟಿಯ ಸ್ವಗತ...