ಸುಗ್ಗಿ ಮೆಟ್ಟಿಲು

ಸುಗ್ಗಿ ಮೆಟ್ಟಿಲು

ಕವನ

                         ಸುಗ್ಗಿ ಮೆಟ್ಟಿಲು

 ತನು ಹುಟ್ಟಲು ಅಳು ಮೂಡಲು ಮನೆಮನದಲು ಸುಗ್ಗಿ,
ವಿದ್ಯಾಬಾಸದಿ ಜ್ಞಾನ ಪಡೆಯಲು ಹೊಸ ಕನಸಿನ ಸುಗ್ಗಿ,
ತಂದೆ ತಾಯಿಯ ಸೇವೆ ಮಾಡಲು ಆ ಆನಂದವೇ ಸುಗ್ಗಿ,
ಪ್ರೀತಿ ಮೂಡಲು ಮನ ಬೆರೆಯಲು ಆ ಪ್ರೇಮವೇ ಸುಗ್ಗಿ,
ಕೆಲಸ ಕಾರ್ಯದಿ ಉನ್ನತಿ ಪಡೆಯಲು ಆ ತ್ರಿಪ್ಥಿಯೇ ಸುಗ್ಗಿ,
ಕಷ್ಟ ನಷ್ಟವ ಮೆಟ್ಟಿ ನಿಲ್ಲಲು ಗೆಲುವಿನ ನಗೆಯೇ ಸುಗ್ಗಿ,
ಮಂಗಳ ಕಾರ್ಯದಿ ಘೋಷ ಮೊಳಗಲು ನವ ಜೋಡಿಗೆ ಸುಗ್ಗಿ,
ಮಕ್ಕಳ ಆಟ ತುಂಟ ನೋಟವ ಸವೆಯಲು ಈ ಕಣ್ಣಿಗೆ ಸುಗ್ಗಿ,
ಋತು ಉರುಳಲು ತನು ಬಾಡಲು ಆ ಹಿರಿತನವೇ ಸುಗ್ಗಿ,
ದಾನ ಧರ್ಮದಿ ಕಾಲ ಕಳೆಯಲು ಆ ಜನ್ಮವೇ ಸುಗ್ಗಿ,
ಜನ್ಮ ಸಾರ್ಥಕತೆಯಲಿ ಕಣ್ಣು ಮುಚ್ಚಲು ಆ ಸಾವೇ ಸುಗ್ಗಿ.

Comments