ಶೀಮ ಶಾಲೆಗೆ ಹೋದ - ಇನ್ನಷ್ಟು
ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ?
ತರಕಾರಿಯವನು: ಆಲೂಗಡ್ಡೆಯದ್ದು ...
ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ?
ತರಕಾರಿಯವನು: ಬೆಂಡೆಕಾಯಿಯದು ...
ಶೀಮ: ಯಾವುದರದ್ದು ಕಿಲೋಗೆ ಏಳು ರೂಪಾಯಿ?
ತರಕಾರಿಯವನು (ಸಿಟ್ಟಾಗುತ್ತಾ): ಈರುಳ್ಳಿಯದ್ದು, ಯಾಕೆ ಕೇಳ್ತಾ ಇದ್ದೀಯಾ?
ಶೀಮ: ಹೇಳ್ತೀನಿ, ಇರಿ, ಮೂರು ಕಿಲೋ ಆಲೂಗಡ್ಡೆ, ಆರು ಕಿಲೋ ಬೆಂಡೆಕಾಯಿ, ಅರ್ಧ ಕಿಲೋ ಈರುಳ್ಳಿ ಎಷ್ಟಾಗುತ್ತೆ?
ತರಕಾರಿಯವನು: ತೊಂಭತ್ತು ರೂಪಾಯಿ ಐವತ್ತು ಪೈಸೆ, ಕೊಡ್ಲಾ?
ಶೀಮ: ಬೇಡ ... ಆದ್ರೆ, ನನ್ನ ನಾಳೆಯ ಹೋಂ ವರ್ಕ್ ಮಾಡಿದ್ದಕ್ಕೆ ಥ್ಯಾಂಕ್ಸ್!
********************************************************************
ಶೀಮ ಶಾಲೆಗ್ ಹೋಗುವ ದಾರಿಯಲ್ಲಿ ಮನೆಯೊಂದರ ಕರೆಗಂಟೆಯನ್ನು ಒತ್ತಲು ತುಂಬಾ ಹೊತ್ತಿನಿಂದ ಪ್ರಯತ್ನಿಸುತ್ತಿದ್ದ. ಕರೆಗಂಟೆ ಸಾಕಷ್ಟು ಎತ್ತರದಲ್ಲಿ ಇದ್ದುದರಿಂದ ಶೀಮನಿಗೆ ಅದು ಎಟುಕುತ್ತಿರಲಿಲ್ಲ. ಇದನ್ನು ನೋಡಿದ ವೃದ್ಧರೊಬ್ಬರು ಕರೆ ಗಂಟೆ ಒತ್ತಿ, ಶೀಮನಿಗೆ ಕೇಳಿದರು, ಈಗ?
ಶೀಮ: ಇಲ್ಲಿಂದ ಓಡಬೇಕು.
Comments
ಉ: ಶೀಮ ಶಾಲೆಗೆ ಹೋದ - ಇನ್ನಷ್ಟು