ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

ಒಂದು ವಾರ ರಜ ಹಾಕಿ ನನ್ನೂರಿಗೆ ಹೋದಾಗ ಅಲ್ಲಿ ಇನ್ನಷ್ಟು ಪುಸ್ತಕ ಖರೀದಿ ಮಾಡಿದೆ .
೧.ವಸುಧೇಂದ್ರ ಅವರ ’ಯುಗಾದಿ’ ಕತೆಗಳ ಪುಸ್ತಕ .
೨.ಜಾನಕಿ ಕಾಲಂ -
೩. ಜೋಗಿ ಕತೆಗಳು - ಸುಮಾರು ೩-೪ ಪುಟಗಳ ಕತೆಗಳಿವೆ. ವಿಚಿತ್ರ ಆಗಿವೆ . ಬರವಣಿಗೆ ಚೆನ್ನಾಗಿದೆ . ಅನೆಕ ಕತೆಗಳು ತಿಳಿಯೋದೇ ಇಲ್ಲ . ಆ ಕವನದ ಅರ್ಥ ಏನು / ಈ ಕವನದ ಅರ್ಥ ಏನು ಎಂದೆಲ್ಲ ಪದ್ಯಗಳನ್ನು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತೇವೆ. ಅದರೆ ಸರಳ ಗದ್ಯಾನೇ ಅನೇಕ ಸಲ ಅರ್ಥ ಆಗೋಲ್ವಲ್ಲ ? ಯಾವಾಗಲಾದರೂ ನಿಮಗೂ ಹಾಗೆ ಅನಿಸಿದೆಯೇ ? ಇಂಥ ಕತೆಗಳ ಬಗ್ಗೂ ಚರ್ಚೆ ಮಾಡೋಣ್ವೇ ?
೪. ಬೆಸ್ಟ್ ಆಫ್ ಕೇ.ಫ . - ಬಹಳ ದಿನದಿಂದ ಹುಡುಕ್ತಿದ್ದೆ
೫. ಬೆಸ್ಟ್ ಆಫ್ ಬಿ.ಜಿ.ಎಲ್. ಸ್ವಾಮಿ
೬. ಹೊಸಗನ್ನಡ ವ್ಯಾಕರಣ ( ಯಾರೋ ಅರಳಗುಪ್ಪಿ ಅಂತೆ )
೭. ಹಿಂದೆ ಯಾವಾಗಲೋ ಹಳೆಗನ್ನಡದ ವ್ಯಾಕರಣ ಎಂತಹದು ಎಂದೇನೋ ಶಂಕರ ಭಟ್ಟರ ಒಂದು ಪುಸ್ತಕ ನೋಡಿದ್ದೆ . ಅದು ಸಿಗಲಿಲ್ಲ ; ಬದಲಾಗಿ ಇಂಗ್ಲೀಷ್ ಹೆಸರಿನ ಒಂದು ಹಳೆ ಕನ್ನಡ ವ್ಯಾಕರಣ ಪುಸ್ತಕ ಸಿಕ್ತು .
೮. ನನ್ನ ಅವ್ವನಿಗಾಗಿ ’ಮರುಳ ಮುನಿಯನ ಕಗ್ಗದ ವಿವರಣೆ’ ಪುಸ್ತಕ
೯. ಗೌರಿ ಲಂಕೇಶರ - ದರವೇಶಿ ಕತೆಗಳು . ಇದು ಸೂಫಿ ಕತೆಗಳ ಸಂಗ್ರಹ . ಒಂದು ಅಥವಾ ಎರಡು ಪುಟಗಳ ಕತೆಗಳಿವೆ.
೧೦. ಶ್ರೀನಿವಾಸ ವೈದ್ಯ ಅವರ ಇನ್ನೊಂದು ಕಥಾಸಂಗ್ರಹ - ಅಗ್ನಿಕಾರ್ಯ
ಈ ಎಲ್ಲ ಪುಸ್ತಕದ ಬೆಲೆ ಸುಮಾರು ನೂರು ನೂರು ರೂಪಾಯಿಗಳು

ಆಮೇಲೆ ಫರ್ಸ್ಟ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲೇ ಯಾವ್ದೋ ಕಾಲಕ್ಕೆ ಪ್ರಿಂಟಾದ ಪುಸ್ತಕಗಳು ಇದ್ದವು . ಅವನ್ನೂ ೧೦/೧೫/೨೦ ರೂಪಾಯಿಗೆ ತಗೊಂಡೆ ! .

Rating
No votes yet

Comments