ಮನೆಮದ್ದು (೧) - ದಾಲ್ಚಿನ್ನಿ
ಪಲಾವ್ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ.
ದಾಲ್ಚಿನ್ನಿ ಪುಡಿಯನ್ನು ಜೇನಿನ ಜೊತೆ ಬೆರೆಸಿ ಸೇವಿಸುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ.
ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ, ಸೈನಸ್ ಇವನ್ನು ಗುಣಪಡಿಸಲು ಒಂದು ಚಮಚ ಜೇನುತುಪ್ಪಕ್ಕೆ ಕಾಲು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಮೂರು ದಿನಗಳ ಕಾಲ ಸೇವನೆ ಮಾಡಿ. ಕುದಿಸಿ ತಣಿಸಿದ ಬೆಚ್ಚಗಿನ ನೀರಿಗೆ ಈ ಮಿಶ್ರಣ ಹಾಕಿ, ಲಿಂಬೆ ಹುಳಿಯ ರಸ ಬೆರೆಸಿ ಸೇವಿಸಿದರೆ ಶೀತದಿಂದ ಕಟ್ಟಿದ್ದ ಮೂಗು ಸಡಿಲವಾಗುತ್ತದೆ.
ಪ್ರತಿದಿನ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ ಬೆರೆಸಿ ತಿಂದರೆ ನಮ್ಮ ದೇಹದ ಚೈತನ್ಯ ಹೆಚ್ಚುತ್ತದೆ. ವೃದ್ಧರು ಮತ್ತು ನಿಶ್ಯಕ್ತಿಯಿಂದ ಬಳಲುವವರು ಮೂರು ಲೋಟ ಬಿಸಿ ನೀರಿಗೆ ನಾಲ್ಕು ಚಮಚ ಜೇನುತುಪ್ಪ ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ, ಸಮ ಪ್ರಮಾಣದಲ್ಲಿ ಪ್ರತಿದಿನ ಮೂರು ಬಾರಿ ಸೇವಿಸಿದರೆ ದೇಹದ ತ್ರಾಣ ಜಾಸ್ತಿಯಾಗುತ್ತದೆ.
ಜೀರ್ಣಾಂಗದ ತೊಂದರೆ ಮತ್ತು ಆಸಿಡಿಟಿಯಿಂದ ಬಳಲುವವರು ಊಟದ ಮೊದಲು ೨ ಚಮಚ ಜೇನುತುಪ್ಪಕ್ಕೆ ದಾಲ್ಚಿನ್ನಿ ಪುಡಿ ಸೇರಿಸಿ ಸೇವನೆ ಮಾಡುವುದು ಒಳ್ಳೆಯದು.
ಹೊಟ್ಟೆನೋವು,ಅಲ್ಸರ್, ಮೊಡವೆ,ಚರ್ಮದ ಎಲರ್ಜಿ ಇವೆಲ್ಲದರ ನಿವಾರಣೆಗೂ ಸಹಕಾರಿ.
ಬಿಸಿನೀರಿಗೆ ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪ ಸೇರಿಸಿ ಬೆಳಗ್ಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿ ವಾಸನೆ ನಿವಾರಿಸಬಹುದು. ಶರೀರದ ತೂಕ ಕಡಿಮೆ ಮಾಡಲಿಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ಕಾಲು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಸೇವಿಸಬೇಕು.
ದಾಲ್ಚಿನ್ನಿಯ ಹೆಸರುಗಳು:
ಸಂಸ್ಕೃತದಲ್ಲಿ: ತಮಾಲ
ಇಂಗ್ಲಿಷಿನಲ್ಲಿ: ಸಿನ್ನಮೊನ್
ಸಸ್ಯಶಾಸ್ತ್ರೀಯ ಹೆಸರು: ಸಿನ್ನಮೊಮುಮ್ ತಮಾಲ
- ರಾಜಲಕ್ಷ್ಮಿ
Comments
ಉ: ಮನೆಮದ್ದು (೧) - ದಾಲ್ಚಿನ್ನಿ
ಉ: ಮನೆಮದ್ದು (೧) - ದಾಲ್ಚಿನ್ನಿ