ಸಾಗರ...ಸಕತ್ ಹಾಟ್

ಸಾಗರ...ಸಕತ್ ಹಾಟ್

೨೦೦೭ ಕಳೆದು ೨೦೦೮ ಬಂತು.ದಿನಾ ಪೇಪರ್,ಟೀವಿ ನೋಡಿದರೆ ೩೦೦೮ ಬಂದರೂ ನಾವು ಬದಲಾಗುವುದಿಲ್ಲ ಎನಿಸುತ್ತದೆ.
ಒಬ್ಬ ಯತಿ ಸಾಗರೋಲ್ಲಂಘನೆ! ಮಾಡಿದಕ್ಕೆ ಉಳಿದವರ ವಿರೋಧ.ಬಹುಮತವಿದ್ದರೆ ಪ್ರಧಾನಿ ಮನೆ ಕಸಗುಡಿಸುವವನೂ ರಾಷ್ಟ್ರಪತಿ ಆಗಬಹುದಾದ ನಮ್ಮ ದೇಶದಲ್ಲಿ ಬಹುಮತದ ಯತಿಗಳು ವಿರೋಧಿಸಿದರು ಎಂಬ ಕಾರಣಕ್ಕೆ ಇವರು ಸುಮ್ಮನಿರಬಹುದಿತ್ತು.
--ಹಿಂದೆ ಕೃಷ್ಣ ಬೆನ್ನು ತಿರುಗಿಸಿ ಗೋಡೆ ಒಡೆದ.೨೦೦೮ರಲ್ಲಿ ಸಾಗರಕ್ಕೆ ಧುಮುಕದಂತೆ ನೋಡಿಕೊಳ್ಳಿ
ಸ್ವಾಮಿ.

ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು “ಗಾಂಧೀಜಿಯನ್ನು ಕೊಂದ ಗೋಡ್ಸೆ ಪಕ್ಷದವರು..”
--ಗಾಂಧೀಜಿಯನ್ನು ದಿನಾ ಕೊಲ್ಲುವುದನ್ನು ೨೦೦೮ರಲ್ಲಾದರೂ ನಿಲ್ಲಿಸಲಾರಿರಾ?

ಮಾಜೀ ಮಾಜೀ ಮುಖ್ಯಮಂತ್ರಿ ಒಬ್ಬರ ಗಿಣಿಪಾಠ “ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು”
--೨೦೦೮ರಲ್ಲಿ ಕರ್ನಾಟಕಕ್ಕೆ ಉತ್ತಮ,ಭದ್ರ ಸರಕಾರ ಕೊಡುತ್ತೇವೆ ಅನ್ನಬಾರದೇ?

ಸಕತ್ ಹಾಟ್ ಮಗಾ.ಡವ್ ಇತ್ಯಾದಿ ಇತ್ಯಾದಿ ಪದ ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ ಟಿ.ವಿ.,ರೇಡಿಯೋ ಎತ್ತಿ ಬಿಸಾಕುವಷ್ಟು ಬೇಸರವಾಗುತ್ತದೆ.
--೨೦೦೮ರಲ್ಲಾದರೂ ಈ ಪದಗಳಿಗೆ ರೆಸ್ಟ್ ಕೊಡುವಿರಾ?
...

Rating
No votes yet

Comments