ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ

ಕವನ

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ
ನೀ ಬಂದು ನನ್ನ ವಿರಹ ವೇದನೆಯ ಮತ್ತಷ್ಟು ಹೆಚ್ಚಿಸಿದೆ
ನನ್ನ ಸಖಿಯ ನೆನಪನ್ನು ಇನ್ನಷ್ಟು ಹೆಚ್ಚಿಸಿರುವೆ ನೀ
ಕಿಟಕಿಯಲ್ಲಿ ನಿನ್ನ ನೋಡುತಾ ಒಂಟಿಯಾಗಿ ಕುಳಿತಿರುವೆ

ತುಂತುರು ಮಳೆಯಲ್ಲಿ ನಾವಿಬ್ಬರೂ ಒಟ್ಟಿಗೆ ನೆನೆದದ್ದು
ಸೋನೆಮಳೆಯಲ್ಲಿ ಕೈ ಕೈ ಹಿಡಿದು ಒಟ್ಟಿಗೆ ನಡೆದದ್ದು
ಮಳೆನೀರನ್ನು ಬೊಗಸೆಯಲ್ಲಿ ಹಿಡಿದು ಆಟವಾಡಿದ್ದು
ಎಲ್ಲವೂ ನೆನಪಾಗುತಿದೆ ಈ ಹೊತ್ತಿನಲ್ಲಿ ನಿನ್ನ ನೋಡುತಾ

ಚಳಿಯಲಿ ನಡುಗುತ್ತ ಬಿಸಿ ಬಿಸಿ ಕಾಫಿಯ ಹೀರುತ್ತಾ
ಮೆಣಸಿನ ಬಜ್ಜಿಯ ಮೆಲ್ಲುತ್ತಿದ್ದ ಘಳಿಗೆ ನೆನಪಾಗುತ್ತಿದೆ
ದಯಮಾಡಿ ಈಗ ಹೊರಟು ಹೋಗಿಬಿಡು ಓ ಮಳೆಯೇ
ಮರೆಯದಿರು ಮರಳಿ ಬರಲು ನನ್ನ ಸಖಿ ಬಂದ ಮೇಲೆ..

Comments