ಪ್ರೀತಿನಾ?

ಪ್ರೀತಿನಾ?

ಕವನ

ಭಾವನೆಗಳಿಗೆ ಬಣ್ಣ ಹಚ್ಚಿ 
ಒಲವಿನ ರೂಪ ಕೊಟ್ಟು 
ಪ್ರೀತಿಯ ಲೇಪನಾ ಮಾಡಿದಾಗ 
ನಿನ್ನ ನಾ ಕಂಡೆ ಗೆಳಯಾ
 
ಜಡವಾದ ದಿನಗಳು 
ಹೂವಿನಂತೆ ಹಗುರವಾಗಿ 
ಸಂತಸವ ಚಿಮ್ಮಿಸಿದವು 
ಇದ್ಯಾಕಾಗಿ ಹೇಳುವೆಯಾ?
 
ನಯನ ನಿನ್ನ ನೋಡಿದಾಗ 
ಮನ ಮಾತಾಡಲು ಬಯಸಿದಾಗ 
ಅಂಜಿಕೆ ಮುಂದೆ ಬಂದಿತ್ತು 
ನೀ ಕೇಳಿದ್ದೆ ಏನು ಹೆದರಿಕೆಯಾ?
 
ನೀ ಹೇಳಿದಾಗ ನಾ ನಂಬಿರಲಿಲ್ಲ 
ಮನ ಚಿಂತೆಯ ಗೂಡಾಗಿತ್ತು 
ಏನೆಂದು ತಿಳಿಯದಾಯಿತು 
ಹೃದಯ ಕೇಳಿತು ಇದೆ ಪ್ರೀತಿನಾ?
 

Comments