ಏನಮ್ಮ ಆತ ಕೊಟ್ಟದ್ದನ್ನೂ ಲೆಕ್ಕ ಹಾಕುತ್ತಿದ್ದೀಯಲ್ಲ?

ಏನಮ್ಮ ಆತ ಕೊಟ್ಟದ್ದನ್ನೂ ಲೆಕ್ಕ ಹಾಕುತ್ತಿದ್ದೀಯಲ್ಲ?

ಅವನು ಕುರುಡ, ಹಾಡು ಹೇಳಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದನು. ಒಂದು ದಿನ ಎಂದಿನಂತೆ ಬಿ ಎಂ ಟಿ ಸಿ ಬಸ್ಸಲ್ಲಿ ಅವನ ಹಾಡು ಸಾಗಿತ್ತು. ಎಲ್ಲರಂತೆ ಲೇಡಿ ಕಂಡಕ್ಟರ್ ಸಹ ಒಂದು ಕಾಯ್ನನ್ನು ಕೊಟ್ಟಳು. ಸ್ವಲ್ಪ ಹೊತ್ತಾದ ಮೇಲೆ ಅವನ ಹತ್ತಿರವೇ ೧೦ ರೂಗೆ ಚಿಲ್ಲರೆ ಕೇಳಿದಳು, ಅವನಿಗೆ ಹತ್ತು ರೂ ನೋಟನ್ನು ಕೊಟ್ಟು ಅವನು ಕೊಟ್ಟ ಚಿಲ್ಲರೆಯನ್ನ ಎಣಿಸುತ್ತಿದ್ದಳು, ಬಸ್ಸಿನಲ್ಲಿದ್ದ ಯಾರೋ 'ಏನಮ್ಮ ಆತ ಕೊಟ್ಟದ್ದನ್ನೂ ಲೆಕ್ಕ ಹಾಕುತ್ತಿದ್ದೀಯಲ್ಲ?' ಎಂದರು. . . . . . . . . . . . . . . ಅದಕ್ಕವಳು 'ಅವನೇನಾದರೂ ಜಾಸ್ತಿ ಕೊಟ್ಟಿದ್ದಾನೇನೋ, ಹಾಗೇನಾದರೂ ಇದ್ದರೆ ವಾಪಸ್ ಕೊಡಲು ಎಣಿಸುತ್ತಿದ್ದೆ' ಎಂದಳು.
Rating
No votes yet

Comments