ರವಿವಾರ ಸಂಜೆ ದೇವತೆಗಳ ಮಧ್ಯೆ..
ಎಡಕ್ಕೆ ನೋಡಿದರೆ ಗಂಗಮ್ಮ, ಬಲಕ್ಕೆ ನಂದಿ, ಮುಂದೆ ಈಶ್ವರ...ದೇವತೆಗಳ ಹೆಸರು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಈ ಎಲ್ಲಾ ದೇವರುಗಳು ನೆಲಸಿರುವುದು ಮಲ್ಲೇಶ್ವರ ಸಂಪಿಗೆ ರಸ್ತೆಯ ೧೭ನೇ ಕ್ರಾಸ್ ಸಮೀಪ.
ನಮ್ಮ ಗೋಪಿನಾಥರು "..ತ್ಯಾಂಪನ ಬ್ಯಾಡ್ಲಕ್" ಲೇಖನದಲ್ಲಿ "ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಸ್ಥಾನದ ಬಗ್ಗೆ ಬರೆದಿದ್ದರು. ಹಿಂದೆ ಒಮ್ಮೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅದರ ಬಗ್ಗೆ ವಿವರ ಬಂದಿದ್ದಾಗ , ನನ್ನ ತಾಯಿಗೆ ಈ ದೇವಸ್ಥಾನ ತೋರಿಸಬೇಕೆಂದಿದ್ದೆ. ನಂತರ ಮರೆತು ಹೋಗಿತ್ತು.
ಮಳೆ ಜೋರು ಬರುವ ಹಾಗಿದ್ದರೂ ಈ ಸಲ ನೋಡೇಬಿಡಬೇಕು ಎಂದು ಹೊರಟೇಬಿಟ್ಟೆ. ಅಲ್ಲಿದ್ದ ಗಂಗಮ್ಮ ದೇವಿಯ ಕೃಪೆಯೋ ಏನೋ ಮಳೆ ಬರಲೇ ಇಲ್ಲ. (ನನ್ನ ಬಳಿ ಇದ್ದ ಜರ್ಕಿನ್+ಕೊಡೆ ನೋಡಿ ಮಳೆ ಸುಮ್ಮನಾಗಿರಬಹುದು!)
ಈಗ ನಂದೀಶ್ವರ ದೇವಸ್ಥಾನದೊಳಗೆ ಹೋಗೋಣ ಬನ್ನಿ..
ಮುಂದಿನ ಸ್ವಾಗತ ಕಮಾನು -
ಕಮಾನು ದಾಟಿ ಒಳ ಹೋದರೆ ಯಾರದೋ ತೋಟದ ಮನೆ ಹೊಕ್ಕ ಅನುಭವವಾಗುವುದು. ಅಲ್ಲಿರುವ ಸಣ್ಣ ಮನೆಯೊಳಗೆ ಹೋದಾಗಲೇ ದೇವಸ್ಥಾನದ ಚಂದ ಗೊತ್ತಾಗುವುದು.
ಸುತ್ತಲೂ ಮೆಟ್ಟಲುಗಳಿರುವ ಕೊಳ(ಕಲ್ಯಾಣಿ) ಮೊದಲು ಸಿಗುವುದು.
ಕಲ್ಯಾಣಿಯಲ್ಲಿ ಆಮೆಗಳ ಆಟ ನೋಡಿಕೊಂಡು ಮುಂದೆ ಸಾಗಿ ದೇವರ ಬಳಿ ಹೋದೆ.
ಶಿವಲಿಂಗದ ಮೇಲೆ ನೀರಿನ ಅಭಿಷೇಕ ಆಗುತ್ತಲೇ ಇರುವುದನ್ನು ಗಮನಿಸಿ, ನನ್ನ ಬೇಡಿಕೆಗಳ ಪಟ್ಟಿ ಮನಸ್ಸಲ್ಲೇ ಸಲ್ಲಿಸಿ, ಮುಂದೆ ಭಟ್ಟರ ಬಳಿ ತೀರ್ಥಪ್ರಸಾದ( ಲಡ್ಡು+ಹೋಳಿಗೆ!) ತೆಗೆದುಕೊಂಡು ಮೇಲೆ ಬಂದೆನು.
ಅಲ್ಲಿರುವ ನಂದಿಯ ಬಾಯಿಂದ ಸುರಿವ ನೀರೇ ನೇರ ಕೆಳಗಿನ ಶಿವಲಿಂಗದ ಮೇಲೆ ಬೀಳುವುದು.
ದೇವಸ್ಥಾನದ ಹೊರಗೆ ಈ ಹೂವಿನ ಗಿಡ ನನ್ನ ಕೈಬೀಸಿ ಕರೆಯಿತು.
ಈ ಮರವೂ ಸಹ..
ಪ್ರಶಾಂತ ಸ್ಥಳ. ಸ್ವಚ್ಛವಾಗಿದೆ.
ಉಳಿದ ದೇವಸ್ಥಾನಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..
-ಗಣೇಶ.
Comments
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by Jayanth Ramachar
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by partha1059
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by gopaljsr
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by partha1059
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by bhalle
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by partha1059
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by RAMAMOHANA
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by gopinatha
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..
In reply to ಉ: ರವಿವಾರ ಸಂಜೆ ದೇವತೆಗಳ ಮಧ್ಯೆ.. by gopinatha
ಉ: ರವಿವಾರ ಸಂಜೆ ದೇವತೆಗಳ ಮಧ್ಯೆ..