ಕಡಲ ಅಲೆಗಳು ಹಿಂದೆ ಸರಿದಾಗ !

ಕಡಲ ಅಲೆಗಳು ಹಿಂದೆ ಸರಿದಾಗ !

ಈ ದೃಶ್ಯ 'ಮುಂಬೈನ ಮಹಾಲಕ್ಷ್ಮಿ ದೇವಾಲಯ'ದ ಬದಿಯಲ್ಲಿರುವ 'ಹಾಜಿ ಆಲಿ'ಯೆಂಬ ಸಮುದ್ರದ ದಡದಲ್ಲಿರುವ ದರ್ಗದ ಹತ್ತಿರ. ಸಮುದ್ರದ ಅಲೆಗಳು ಹಿಂದೆ ಹೋಗಿವೆ. ದಡದಲ್ಲಿ ಮರಳು ತುಂಬಿದೆ. ಆದರೆ ನಗರ ಮಾಲಿನ್ಯವೆಲ್ಲಾ ಸಮುದ್ರಕ್ಕೆ ಚೆಲ್ಲುವ ಪರಿಪಾಠವಿರುವುದರಿಂದ ಉಪಚರಿಸಿದ ಮಾಲಿನ್ಯದ ಜೊತೆಗೆ ಬೇರೆ ಹಲವಾರು ಬಗೆಯ ಮಲಿನ ತ್ಯಾಜ್ಯವಸ್ತುಗಳು ಕಡಲಿನಲ್ಲಿ ಬೆರೆತು, ಅವುಗಳು ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದು ಬೀಳುತ್ತವೆ. ಅದೇ ಮತ್ತೊಂದು ಬಗೆಯ ಮಾಲಿನ್ಯ ಸಮಸ್ಯೆಗೆ ಎಡೆಮಾಡಿಕೊಡುತ್ತವೆ. ಈಗಲಂತೂ ಸಮುದ್ರಲ್ಲಿ ಹಡಗುಗಳಿಂದ ಸೋರಿ ಚೆಲ್ಲಿದ ಪೆಟ್ರೋಲಿಯಮ್ ಎಣ್ಣೆಯ ಮಲಿನತೆ ಅಪಾರವಾಗಿದೆ. ಕೆಲವು ಹಡಗುಗಳು ಕಳ್ಳ-ತಪ್ಪಿಸಿಕೊಂಡು ಮುಂಬೈ ಇಲ್ಲವೇ ಮಂಗಳೂರಿನ ಕಡಲ ತೀರದಲ್ಲಿ ಬಂದು ನಿಂತು, ಅಪಾರ ರಾಶಿಯ ತ್ಯಾಜ್ಯವಸ್ತುಗಳನ್ನು ಚೆಲ್ಲಿ ಪ್ರದೇಶವನ್ನು ಕಲುಶಿತಮಾಡುತ್ತಿವೆ.

ಇದನ್ನು ಕಂಡುಕೊಂಡು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ.  ಮೀಡಿಯಾದವರು  ದೇಶದಾದ್ಯಂತ  ಬೊಬ್ಬೆ ಹೊಡೆದನಂತರವೂ  ನಮ್ಮ ಅಧಿಕಾರಿಗಳು ನಿದ್ದೆಯಿಂದ ಮೇಲೇಳುವುದು ಕಷ್ಟ.  ಅದರ ಬಗ್ಗೆ ವಿಚಾರಿಸಿಕೊಳ್ಳುವುದು ಅದ್ಯಾವಾಗಲೋ, ಹೇಳೋರು ಕೇಳೋರು ಇಲ್ಲದ ತರಹದ ಸಂಗತಿಯಿಂದ ಜನತೆ ಕಂಗೆಟ್ಟಿದೆ. ಎಲ್ಲರಿಗಿಂತ  ಮೊದಲು  ಹೆಚ್ಚು ನೋವು ಅನುಭವಿಸುವವರು,  ಸಮುದ್ರದ ಹತ್ತಿರ ಜೀವಿಸುವ ಕೋಳಿಗಳು ; ಮೀನು ಹಿಡಿದು ಮಾರಿ-ಜೀವಿಸುವ ಜನಸಮುದಾಯ !  ಸಾಯಂಕಾಲದ ಹೊತ್ತಿಗೆ ಸಮುದ್ರದ ನೀರು ಏರುತ್ತಾ ಬಂದು ದರ್ಗಕ್ಕೆ ಹೋಗುವ ದಾರಿಯೂ ಮುಳುಗಿಹೋಗುತ್ತದೆ.

ಇತ್ತಿಚೆಗೆ ಜುಹು ಬೀಚ್ ನಲ್ಲಿ ಎಮ್. ವಿ. ರಾಕ್ ಕ್ಯಾರಿಯರ್ ಎಂಬ  ೭೨೨ ಅಡಿ ಉದ್ದದ ಜಹಜು ಹೋದವಾರ ಬಂದು ನಿಂತು ಅದರಲ್ಲಿನ ಸುಮಾರು ೧೦೦ ಟನ್ ಪೆಟ್ರೊಲಿಯಮ್ ತೈಲವೆಲ್ಲಾ ಸೋರಿಹೋಗಿ ಸಮುದ್ರದ ನೀರಿನಲ್ಲಿ ಬೆರೆತಿದೆ. ಅದು ಹಾಗೆಯೆ ಬಾಂದ್ರ, ಥಾಣೆ, ಮತ್ತು ಊರಣ್ ತಟಗಳಲ್ಲೂ ವ್ಯಾಪಿಸಿ ಅಲ್ಲಿನ ಜಲಚರಗಳನ್ನು ನಾಶಮಾಡುತ್ತದೆ. ಈಗಾಗಲೆ ನಗರದಲ್ಲಿರುವ ಸಮುದ್ರ ತಟಗಳಾದ ದಾದರ್, ಹಜಿ ಅಲಿ, ಮುಂತಾದ ಭಾಗಗಳನ್ನು ಈ ತೈಲಮಾಲಿನ್ಯ ಅವರಿಸಿದೆ. ೧೨ ನಾಟಿಕಲ್ ಮೈಲಿ ಸಮುದ್ರ ಕಲುಶಿತವಾಗಿದೆಯೆಂದು ಮೆರೀನ್ ಶಾಸ್ತ್ರಜ್ಞರು/ನಿಪುಣರು ವರದಿಮಾಡಿದ್ದಾರೆ. ತೈಲ ಹೊರಗೆ ಬರುವುದರ ಜೊತೆಗೆ ಹಲವಾರು ಹಾನಿಕಾರಕ ಕೆಮಿಕಲ್ಸ್ ಗಳೂ ಹೊರಹೊಮ್ಮುವ ಸಾಧ್ಯತೆಗಳೂ ಕಂಡುಬಂದಿವೆ. ಆದ್ದರಿಂದ ಎಮ್. ವಿ. ರಾಕ್ ಕ್ಯಾರಿಯರ್ ನಂತಹ ವೆಸೆಲ್ ಗಳ ಮಾಲೀಕರು ಹೆಚ್ಚು ದಂಡವನ್ನು ಕೊಡಬೇಕೆಂದು ಮನವಿಸಲ್ಲಿಸಲಾಗಿದೆ. ೧೯೯೬ ನಿಂದ ೨೦೦೮ ರ ವರೆಗೆ,

ಈ ತರಹ ೬೮ ಬಾರಿ ವಿದೇಶಿ ಜಹಜುಗಳು ಭಾರತದ ಸಮುದ್ರವಲಯದಲ್ಲಿ ತಮ್ಮ ತ್ಯಾಜ್ಯವಸ್ತುಗಳನ್ನು ಹೊರಚೆಲ್ಲಿದ್ದಾರೆ. ಇದನ್ನು ನಮ್ಮ ಸರ್ಕಾರ ತೀವ್ರತೆಯಿಂದ ಪ್ರತಿರೋಧಿಸಿ ತಕ್ಕ ಕ್ರಮಗಳನ್ನು ತೆಗೆದುಕೊಂಡು ನಮ್ಮ ಕಡಲನ್ನು ಸ್ವಚ್ಛಗೊಳಿಸಬೇಕಾಗಿದೆ !

Comments