ನನಗೆ Facebook Friend Request ಕಳಿಸ್ತೀರ?
ಮೊನ್ನೆ ಒಂದು ಜೋಕ್ ಓದಿದೆ. ಅದು ಹೀಗಿತ್ತು "ಸಾಯುವ ಕಾಲದಲ್ಲಿ ತನ್ನ ಮೊಮ್ಮಗಳನ್ನು ತನ್ನ ಹತ್ತಿರಕ್ಕೆ ಕರೆದು ಒಬ್ಬ ಮುದುಕಿ ನುಡಿಯುತ್ತಾಳೆ, ನಿನಗಾಗಿ ಒಂದು ಫಾರ್ಮ್ ಬಿಟ್ಟು ಹೋಗುತ್ತಿದ್ದೇನೆ. ಅದರೊಂದಿಗೆ ಟ್ರಾಕ್ಟರ್, ಬೇಕಾದಷ್ಟು ದುಡ್ಡು, ಮನೆ ಇತ್ಯಾದಿ. ಮೊಮ್ಮಗಳಿಗೆ ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಎದ್ವಾತದ್ವ ಸಂತೋಷ. ಹಾಗೂ ಕೇಳುತ್ತಾಳೆ ’ಅಜ್ಜೀ, ನಿನ್ನ ಬಳಿ ಈ ಪಾಟಿ ಆಸ್ತಿ ಇರೋ ವಿಷಯ ನನಗೆ ಗೊತ್ತೇ ಇರಲಿಲ್ಲ’. ಅಜ್ಜಿ ’ಈ ಎಲ್ಲ ಆಸ್ತಿ Facebook’ನ Farmville ’ನಲ್ಲಿದೆ. ಅದನ್ನು ನೀನು ಮುಂದುವರೆಸಿಕೊಂಡು ಹೋಗಬೇಕು ಎನ್ನುವುದೆ ನನ್ನ ಕೊನೆ ಆಸೆ’ ಎಂದು ಸಾಯುತ್ತಾಳೆ". ಮೊಮ್ಮಗಳು ಅಜ್ಜಿ ಆಸ್ತಿ ಕಾಪಾಡಿದಳೋ ಇಲ್ಲವೋ ನನಗೆ ಗೊತ್ತಿಲ್ಲ.
ಈ ಜೋಕಿಗೆ ನನಗೆ ನಗು ಬರಲಿಲ್ಲ ಬದಲಿಗೆ "Facebook" ಬಗ್ಗೆ ಬರೆಯಬೇಕೆನ್ನಿಸಿತು ... ಸ್ವಲ್ಪ ಹಾಸ್ಯ, ಸ್ವಲ್ಪ ಸೀರಿಯಸ್, ಸ್ವಲ್ಪ ಅತಿ ಕಾಲ್ಪನಿಕ ಹೀಗೆ ... ಮಿರ್ಚ್ ಮಸಾಲ !!!
ಈಗಲೇ ಒಂದು Disclaimer ಹಾಕಿಬಿಡುತ್ತೇನೆ. ಇಲ್ಲಿ ಬರುವ ಸನ್ನಿವೇಶಗಳು ಹೆಚ್ಚುವರಿ ಕಾಲ್ಪನಿಕವಾದದ್ದು. ನಾನು ಸತ್ಯವನ್ನಲ್ಲದೆ, ಸುಳ್ಳನ್ನು ಬಿಟ್ಟು, ಬೇರೇನನ್ನೂ ನುಡಿಯಲ್ಲಾರೀ !!!
Facebook’ನಲ್ಲಿ ಬಂಧುಗಳಿಲ್ಲ, ಬಳಗವಿಲ್ಲ... ಎಲ್ಲ ಸ್ನೇಹಿತರೇ ... ಶತ್ರುಗಳಂತೂ ಇಲ್ಲವೇ ಇಲ್ಲ .. ಎಲ್ಲರೂ ಹಿತಶತ್ರುಗಳು ....
ಅಬ್ಬಬ್ಬ! ಎಂತಹ ಕಟುನುಡಿಗಳು !!! ಸಾರಿ ಕಣ್ರೀ, ಇದನ್ನಾಡಿದ್ದು ನಾನಲ್ಲ ! ನನ್ನ ಸ್ನೇಹಿತ ... ಯಾಕೆ ಅಂದಿರಾ? ಕೇಳಿ ಯೋಳ್ತೀನಿ ...
ಇವನು ನನ್ನ ಸ್ನೇಹಿತ. ಇವನು ಗೋಳು ಕೇಳುವವರಾರೂ ಇಲ್ಲ. ಅಂದ್ರೇ, ’ದಿನಾ ಸಾಯೋರಿಗೆ ಅಳೋವ್ರು ಯಾರು’ ಅಂತಾರಲ್ಲಾ, ಆ ಟೈಪು !!! ಪಾಪ ಹೀಗೇ, ಒಮ್ಮೆ ಅವನು ’ಹೊಟ್ಟೆ ಕೆಟ್ಟು ಇಪ್ಪತ್ತು ಬಾರಿ ಟಾಯ್ಲೆಟ್’ಗೆ ಹೋಗಿದ್ದೆ’ ಅಂತ ದು:ಖ ತೋಡಿಕೊಂಡಿದ್ದ. ನಲವತ್ತು ಜನ "Like" ಅಂತ ಹಾಕೋದೇ? ... ನನ್ನನ್ನೂ ಸೇರಿಸಿ?
ನನಗೆ ಈ "Like" ಇನ್ನೂ ಅರ್ಥವಾಗಿಲ್ಲ ... ಹೀಗೆ ಯಾರೋ ಈ ವದನಪುಸ್ತಕದಲ್ಲಿ ಎಂ.ಪಿ.ಪ್ರಕಾಶ್ ನಿಧವಾದರು ಎಂದು ಸುದ್ದಿ ಹಾಕಿದ್ದರು. ಅದಕ್ಕೂ "ಲೈಕ್" ಅಂತ ಹಾಕೋದೆ? ಪ್ರಕಾಶ್ ಅವರು ಇದನ್ನು ನೋಡಿದ್ದರೆ ಏನಂದುಕೊಳ್ಳುತ್ತಿದ್ದರೋ ಏನೋ? ಹೋಗ್ಲಿ ಬಿಡಿ ....
ಜಗತ್ತಿನಲ್ಲಿ ಎಲ್ಲ ಹೈ-ಟೆಕ್ ಆಗಿದೆ ಮಾರಾಯ್ರೇ! ನಮ್ ಕಳ್ ಮಂಜ, ಮೊನ್ನೆ ’೨೭ ಮಾವಳ್ಳಿ ಸರ್ಕಲ್’ಗೆ’ ರಾತ್ರಿ ಡ್ಯೂಟಿಗೆ ಹೋಗ್ತಿದ್ದೀನಿ ಅಂತ ಬರ್ಕೊಂಡಿದ್ನಂತೆ. ಅವನನ್ನ ಹಿಡಿದೇ ಬಿಡ್ತೀನಿ ಅಂತ ಪೋಲೀಸ್ ಪಾಪಣ್ಣ ಕಾಯ್ತಿದ್ನಂತೆ. ಮಂಜ ’ಕಳಾಸಿಪಾಳ್ಯ’ದಲ್ಲಿನ "೭೩, ಶಾಂತಿ ನಿವಾಸ" ಕೆಲಸ ಮುಗಿಸಿಕೊಂಡು ಹೋದನಂತೆ. ’ಮುಂಗಾರು ಮಳೆ’ಯಲ್ಲಿ ನೆಂದವನನ್ನು ಅಲ್ಲಿನ ’ಸರ್ಕಲ್ ಇನ್ಸ್ಪೆಕ್ಟರ್’ ’ಕೆಂಪೇಗೌಡ’ ಮನೆವರೆಗೂ ಹೋಗಿ ಬಿಟ್ಟು ಬಂದರಂತೆ ! ಪಾಪಣ್ಣ Facebook’ನಲ್ಲಿ ತೋಡಿಕೊಂಡಿದ್ದ ಈ ದು:ಖಕ್ಕೆ, ಮಂಜ "Like" ಹಾಕಿದ್ದ ....
ಒಬ್ಬ ಕಾಲೇಜು ಯುವತಿ ತನ್ನ ಹುಟ್ಟುಹಬ್ಬದ ಪಾರ್ಟಿಯ ಆಹ್ವಾನವನ್ನು Facebook’ನಲ್ಲಿ ಹಾಕಿದಳಂತೆ. ನಮೂದಿಸಿದ ದಿನ ಕಾಲೇಜಿನಿಂದ ಸಾವಿರ ಜನ ಸೇರಿದ್ದರಂತೆ. ಎಲ್ಲೆಲ್ಲೂ ಪಾರ್ಕಿಂಗ್ ತೊಂದರೆಯ ಹಾವಳಿ, ಯುವಕ-ಯುವತಿಯರ ಗಲಭೆ, ಸ್ಥಳೀಯರಿಗೆ ತಲೆ ಕೆಟ್ಟು, ಪೋಲೀಸಿನವರನ್ನು ಕರೆಸಬೇಕಾಯ್ತಂತೆ ಕೊನೆಗೆ.
ಇಂಥದೇ ಒಂದು ಹುಚ್ಚು ಕೆಲಸ ನಮ್ಮಲ್ಲಿ ಹಲವಾರು ಜನ ಮಾಡಿದ್ದರು. ವರ್ಲ್ಡ್ ಕಪ್ ’ಭಾರತ - ಪಾಕಿಸ್ತಾನ್’ ಪಂದ್ಯದ ಸಮಯ. Work From Home ಮಾಡುತ್ತೇನೆ ಎಂದು ನುಡಿದು, ಮನೆಯಲ್ಲಿ ಸ್ನೇಹಿತರ ಜೊತೆ ಪಂದ್ಯ ನೋಡುತ್ತಿದ್ದು, ನಂತರ ಸಂಭ್ರಮದ ಕ್ಷಣಗಳನ್ನು Facebook ’ನಲ್ಲಿ ಹಾಕಿಕೊಂಡಿದ್ದರು !!!
ಎಲ್ಲ ಕಡೆ Performance Evaluation ಸಮಯ. ಇಂತಹ ಕೆಲಸ ಮಾಡಿದೆ, ಅಂತಹ ಕೆಲಸ ಮಾಡಿದೆ, ’ಭೇಷ್’ ಎಂದು ಯಾರೂ ಬೆನ್ನು ತಟ್ಟೋಲ್ಲ !!! ಅಂತಹ ದಿನ ಅಲ್ಲಿ ನಿಂತು ಅರ್ಧ ಘಂಟೆ ಸಮಯ ಹಾಳು ಮಾಡಿದೆ, ಇಂತಹ ದಿನ ಕ್ಯಾಂಟೀನ್’ನಲ್ಲಿ ನನ್ನನ್ನು ನೋಡಿ ಕೂಡ ಸಲಾಮ್ ಹೊಡೀಲಿಲ್ಲ ಎಂದು ಉಗಿವ ಕಾಲ..... ಒಬ್ಬ ಮೇನೇಜರ್ ಕೈ ಕೆಳಗೆ ಇಬ್ಬರು ಸಮಾನರಾದ ಅರ್ಹತೆಯುಳ್ಳವರಿದ್ದರಂತೆ. ಇಬ್ಬರಲ್ಲಿ ಒಬ್ಬನಿಗೆ ಮಾತ್ರ ಪ್ರಮೋಷನ್ ಕೊಡುವ ಸಾಧ್ಯತೆ ಇತ್ತು. ಸರಿ ಒಬ್ಬನಿಗೆ ಕೊಟ್ಟರು. ಇನ್ನೊಬ್ಬ ಈ ವಿಷಯವನ್ನು ತನ್ನ ಮೇನೇಜರ್ ಬಳಿ ಕೇಳಿದನಂತೆ. ’ನೀನು ನನ್ನ Facebook Friend Request’ನ ತಳ್ಳಿ ಹಾಕಿದೆ. ಅದು ನನಗೆ ಸರಿ ಬರಲಿಲ್ಲ’ ಅನ್ನೋದೇ?
ನಮ್ಮ ಆಫೀಸಿನಲ್ಲಿ ಒಬ್ಬರಿದ್ದಾರೆ ... ಬಿಡಿ, ಬೇಕಾದಷ್ಟು ಜನ ಇದ್ದಾರೆ, ಆದರೆ ಈ ವಿಷಯ ಈ ಇಬ್ಬರ ಬಗ್ಗೆ ... ಒಂದು ಧೂಮಪಾನಿ ಮತ್ತೊಬ್ಬ ಆ ಧೂಮದಪಾನಿ ... ಪ್ರತಿ ಘಂಟೆ / ಒಂದೂವರೆ ಘಂಟೆಗೆ ಧೂಮಪಾನಿ ಎದ್ದು ಹೊರಡುತ್ತಾನೆ ... ಅವನ ಹಿಂದೆಯೇ ನೆರಳಿನಂತೆ ಈತನೂ ಸಾಗುತ್ತಾನೆ. ಇವನು ಸಿಗರೇಟ್ ಸೇದದೇ ಇದ್ದರೂ ಸುಮ್ನೆ ಯಾಕೆ ಹೋಗ್ತಾನೆ ಅನ್ನೋದು ನನ್ನ ಕುತೂಹಲ. ಹಿಂದೊಮ್ಮೆ ಹೀಗೇ ಪತ್ತೇದಾರಿ ಕೆಲಸ ಮಾಡಿ ಬೈಸಿಕೊಂಡಿದ್ದು ನಿಮಗೂ ನೆನಪಿರಬಹುದು. ಹಾಗಾಗಿ ಸುಮ್ಮನಿದ್ದೆ .. ಒಂದೆರಡು ದಿನ.... ಮೂರನೆ ಎದ್ವಾ ತದ್ವ ಕುತೂಹಲ ಹುಟ್ಟಿ, ಅವನನ್ನು ಫಾಲೋ ಮಾಡಿದೆ, ದೂರದಿಂದ. ಒಬ್ಬ ಸಿಗರೇಟ್ ಹಚ್ಚಿ ಸುರಳಿಯಾಕಾರದಿ ಆಕಾಶದಲ್ಲಿ ಚಿತ್ರ ಬಿಡಿಸುತ್ತಿದ್ದ. ಈ ಮತ್ತೊಬ್ಬ ತನ್ನ ಸ್ಮಾರ್ಟ್ ಫೋನ್’ನಲ್ಲಿ Facebook ನೋಡುತ್ತಿದ್ದ. ಎರಡೂ ಒಂದು ರೀತಿ ಚಟ ಅನ್ನಿ !!
ಹೀಗೆ ಒಮ್ಮೆ ಆಟೋ’ಗಾಗಿ ಕಾದಿದ್ದೆ ... ಯಾರೋ ಒಂದಿಬ್ಬರು ಮಾತನಾಡುತ್ತಿದ್ದುದ ಕೇಳಿಸಿಕೊಂಡೆ. "ಏನ್ ಕೊಬ್ಬು ಮಾರಾಯ ಅವನಿಗೆ? Friend request ಕಳಿಸಿದ್ರೆ confirm ಮಾಡೊಕ್ಕೆ ಇಪ್ಪತ್ತು ದಿನ ತೊಗೊಂಡ" "ಅದು ಪರವಾಗಿಲ್ಲ ಕಣೋ. ಟ್ಯಾಕ್ಸ್ ಡಿಪಾರ್ಟ್ಮೆಂಟ್ ಸೀನ ಇದ್ದಾನಲ್ಲ, ಅವನಿಗೆ ನಾನು request ಕಳಿಸಿದ್ದೆ. ಕಾಫಿ ಕೊಡಿಸೋವರೆಗೂ confirm ಮಾಡ್ಲಿಲ್ಲ ಮಾರಾಯ ಅವನು" ....
ಮತ್ತೊಂದು ಘಟನೆ ಹೀಗಿದೆ .. ಗಂಡನಾದವನು ಯಾರೋ ಮತ್ತೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತಾನೆ. ಆಕೆಯ ಜೊತೆ ಯಾವುದೋ ಪಾರ್ಟಿಗೆ ಹೋಗುತ್ತಾನೆ. ಅವಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ಚಿತ್ರ Facebook’ನಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಹೆಂಡತಿ ನೋಡುತ್ತಾಳೆ ... ಮುಂದೆ? ಗಲಾಟೆಯೋ ಗಲಾಟೆ !!
ಹಾಗಿದ್ರೆ Facebook ಕೆಟ್ಟುದೇ? ಹೌದು..ಇಲ್ಲ !!! ಎರಡೂ ಸರಿ. ನಾವು ನಮ್ಮ ಮಿತಿಯಲ್ಲಿದ್ದರೆ ಯಾವುದೂ ಕೆಟ್ಟುದಲ್ಲ ! ಮಿತಿ ಮೀರಿದರೆ ಅಮೃತವೂ ವಿಷವಾಗಬಹುದು.
ಆಂತರಿಕ ವಿಷಯಗಳು, ಖಾಸಗೀ ಬದುಕಿನಲ್ಲಿ ನೆಡೆಯುದೆಲ್ಲವನ್ನೂ ಜಗಜ್ಜಾಹೀರು ಮಾಡಬೇಕಿಲ್ಲ. ಇಂತಹ ಕ್ಷಣಗಳಿಂದ ದೂರವಿರಿ. ಈ ಮಾತು ಬರೀ Facebook ಕುರಿತಾಗಿ ಅಲ್ಲ. ಯಾವುದಾದರೂ ಆಗಬಹುದು.
ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದೆ ... ಇಂದು Facebook ನಾಳೆ ಮತ್ತೇನೋ ಗೊತ್ತಿಲ್ಲ. ಆಧುನಿಕ ತಂತ್ರಜ್ಞ್ನಾನಗಳು ಬಾಹ್ಯಕ್ಕೆ ನಮ್ಮನ್ನು ಹೆಚ್ಚು ಹೆಚ್ಚು ತೆರೆದಿಡುತ್ತಿದೆ. ಎಚ್ಚರಿಕೆ ಇರುವುದು ಒಳಿತು. ನೀವು ಕೆಲಸಕ್ಕೆ ಅರ್ಜಿ ಹಾಕಿದ್ದ ಕಂಪನಿಯವರು ನೀವು Facebook’ನಲ್ಲಿ ಇದ್ದೀರೋ? ಇದ್ದರೆ, ನಿಮ್ಮ ಖಾಸಗೀ ಜೀವನದಲ್ಲಿ ನಿಮ್ಮ ನಡುವಳಿಕೆ ಹೇಗೆ ಎಂಬುದನೆಲ್ಲ ನೋಡುತ್ತಾರೆ ಎಂಬುದು ನೆನಪಿರಲಿ !
ನಾನೇನೂ Facebook ವಿರೋಧಿ ಅಲ್ಲ. ಸಂಪರ್ಕ ಕಡಿಮೆಯಾಗಿರುವ ಬಂಧುಗಳು, ಸ್ನೇಹಿತರುಗಳು ಮತ್ತೊಮ್ಮೆ ದೊರೆಯುವಂತಾಗಿದ್ದೇ Facebook’ನಲ್ಲಿ !!!
ಸರಿ, ಈ ಬರಹ ಮುಗಿಸೋ ಮುನ್ನ, ಒಂದು ಸತ್ಯ ಘಟನೆ ಹೇಳಿ ಹೋಗ್ತೀನಿ ....
ಈ ಘಟನೆ ಬಗ್ಗೆ ಎಲ್ಲೋ ಓದಿದೆ. ಈಕೆ ಒಂದು ರೀತಿ ವಿಕೃತ ಮನಸ್ಸಿನವಳು. ದೆವ್ವ - ಭೂತ - ಪಿಶಾಚಿಗಳ ಬಗ್ಗೆ ಏನೋ ಒಂದು ರೀತಿ ಒಲವು. ಆ ರೀತಿ ವೇಷ ಧರಿಸಿಕೊಂಡು ತೆಗೆಸಿಕೊಂಡ ಫೋಟೋ’ ಗಳನ್ನು Facebook’ನಲ್ಲಿ ಹಾಕಿದ್ದಳಂತೆ. ಇವಳಂತೆಯೇ ವಿಕೃತ ಅಭ್ಯಾಸವುಳ್ಳ ಒಬ್ಬ ಸ್ನೇಹ ಹಸ್ತ ಚಾಚಿದ. ಈಕೆ ಹಸ್ತಲಾಘವ ಕೊಟ್ಟಳು. ಹಲವು ದಿನಗಳ ನಂತರ ಈಕೆಯ ಮನೆಗೆ ಅವನು ಬಂದ ... ಅವಳನ್ನು ಕೊಂದ ... ಹೋದ !!!!
ನಿಮಗೆ ಈ ಲೇಖನ ಇಷ್ಟವಾಗಿದ್ದರೆ ನನಗೆ Facebook Friend Request ಕಳಿಸ್ತೀರಲ್ಲ?
ಚಿತ್ರ: http://en.wikipedia.org/wiki/File:Facebook.svg
Comments
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by Jayanth Ramachar
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by ramvani
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by asuhegde
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by partha1059
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by gopaljsr
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by partha1059
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by Chikku123
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by bhalle
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by ಗಣೇಶ
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by kamath_kumble
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by swara kamath
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by santhosh_87
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by kavinagaraj
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by partha1059
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by asuhegde
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by gopinatha
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by partha1059
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by makara
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by bkjagadish
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by bhalle
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by bkjagadish
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by RAMAMOHANA
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by jokumar
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by nagarathnavina…
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by nnaveen
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by vidyavilas
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
ಉ: ನನಗೆ Facebook Friend Request ಕಳಿಸ್ತೀರ?
In reply to ಉ: ನನಗೆ Facebook Friend Request ಕಳಿಸ್ತೀರ? by b.n.umesh
ಉ: ನನಗೆ Facebook Friend Request ಕಳಿಸ್ತೀರ?