ಯಾಕೋ... ಇಂದು ಪುನಃ ಅನಿಸುತ್ತಿದೆ!!

ಯಾಕೋ... ಇಂದು ಪುನಃ ಅನಿಸುತ್ತಿದೆ!!

ಇಂದು ಪುನಃ ಅನಿಸುತ್ತಿದೆ
ಮನಸ್ಸು ಖಾಲಿ ಖಾಲಿ
ಒಳಗಡಗಿದ ಗದ್ದಲಗಳಿಗೆ ಕಿವಿ ಕಿವುಡು!
ಬಾಗಿಲು ಮುಚ್ಚಿ
ಸೌಂಡ್ ಪ್ರೂಫ್ ಪೈಂಟು ಹೊಡೆದಂತೆ!
ಎದೆಯ ಬಿಗುಮಾನಗಳಿಗೆ
ಬಿತ್ತಿದ್ದ ಪ್ರೀತಿಯ ಬೀಜಗಳು
ಮೊಳಕೆಯೊಡೆಯದೇ ಅಳಿದಿವೆ
ಮನದ ಮೂಲೆಯಲ್ಲಿ ಮುಗಿಲನ್ನೇರಲಿದ್ದ
ಕನಸುಗಳು ಬೆದರಿ ಅದುಮಿ ಹೋಗಿವೆ
ತನ್ನೊಡಲನೇ ಬಗಿದು ತ್ರಿವಿಕ್ರಮನಾಗುತ್ತಾ
ತನ್ನದೇ ದನಿ ತನಗೇ ಕೇಳದಂತೆ...
ದೂರ ದೂರದವರೆಗೂ ಏನೂ ಕಾಣದಂತೆ!
ಬಂಜರು ಹೃದಯದಲ್ಲಿ
ಮತ್ತೆ ಸೃಷ್ಟಿಗಾಗಿ ಎಂಬಂತೆ
ಮೋಡ ಕವಿದಿದೆ
ಮನಸ್ಸು ಮತ್ತೆ ಮಳೆಗಾಗಿ ಕಾದಿದೆ
ಧಾರೆಯ ಸಿಂಚನದ ಕಾತರದಿಂದ ನಗ್ನವಾಗಿವೆ
ಆದರೆ ಯಾಕೋ ಇಂದು ಪುನಃ ಅನಿಸುತ್ತಿದೆ
ಮನಸ್ಸೆಲ್ಲಾ ಖಾಲಿ ಖಾಲಿ
ಒಳಗಡಗಿದ ಗದ್ದಲಗಳಿಗೆ ಕಿವಿ ಕಿವುಡು!

Rating
No votes yet

Comments