ಅಷ್ಟಕ್ಕೂ ...
ಜೀವನವೇ ಕತ್ತಲೆ, ಭವಿಷ್ಯವೇ ಕತ್ತಲೆಯೆಂದು ಕೊರಗದಿರು
ಕತ್ತಲಲ್ಲೂ ಹೊಳೆಯಲು ಕಾತರಿಸು,
ನೀ ಹೊಳೆದರೆ ದಾರಿ ತಾನೇ ತಾನಾಗಿ ಕಾಣಿಸುವುದು!
ಹೊಳೆಯಲಾರೆ ಎಂಬ ಧೋರಣೆ ಕತ್ತರಿಸು
ಅಷ್ಟಕ್ಕೂ ...
ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ?
ಕಪ್ಪಿದ್ದರೆ ತಾನೇ ಬಿಳಿ ರಂಗಿಗೆ ಕಳೆ?
ಕಣ್ಣೆತ್ತದ ದೂರಕ್ಕೂ ಹಾಸಿರಬಹುದು ಜೀವನದ ದಾರಿ...
ಮುಂದೆ ಬರೀ ಬಂಜರು, ನಿರೀಕ್ಷೆಗಳ ಝಳ ಬೇರೆ!
ಜೊತೆ ಯಾರೂ ಇಲ್ಲ ಎಂದು ಹಳಿಯಬೇಡ,
ನಿನಗೆ ನೀನೇ ಸಂಗಾತಿ, ನೀ ನಡೆದದ್ದೇ ರಹದಾರಿ!
ಅಷ್ಟಕ್ಕೂ...
ಬಂಜರಿದ್ದರೆ ತಾನೇ ಹಸಿರಿಗೆ ಬೆಲೆ?
ಬೇಸಗೆಯ ನಂತರವಷ್ಟೇ ತಾನೇ ಮುಂಗಾರು ಮಳೆ?
ನೋವಿಗೇ ನೋವಾಗುವಷ್ಟು ನೋವುಣ್ಣುತ್ತಿದ್ದೇನೆಂದು ಮರುಗಬೇಡ
ಗಿಡದ ಮುಳ್ಳು ತಾಗಿ ಗಾಯವಾದರೇನಂತೆ,
ನೋವು ಮರೆಸುವ ಕೆಂಪು ಗುಲಾಬಿಯೇ ಕೀಳಬಹುದಲ್ಲ!
ಅಷ್ಟಕ್ಕೂ...
ನೋವಿದ್ದರೆ ತಾನೇ ನಲಿವಿಗೆ ನೆಲೆ?
ಮರೆವಿದ್ದರೆ ತಾನೇ ನೆನಪಿಗೆ ಬೆಲೆ?
ಇಂದಲ್ಲ ನಾಳೆ ತಂಪು ಸಿಗುವುದು
ಬೆಳಕು ಮೂಡಿ ಚಿಲಿಪಿಲಿ ಕೇಳಿಸುವುದು!
ಇಂದು ಹಾಸಿರುವ ಕಪ್ಪು ಮೋಡವೇ ನಾಳೆ ಮಳೆ ಸುರಿಸುವುದು!
ಅಷ್ಟಕ್ಕೂ...
ಕಾಯುವ ಕೌಶಲವಿದ್ದರೆ ತಾನೇ ಕಾಳು ಮೊಳಕೆಯೊಡೆಯುವುದು,
ಗಿಡವಾಗಿ, ಹೂ ಬಿಟ್ಟು, ಫಲ ಕೊಡುವುದು...?
Comments
ಉ: ಅಷ್ಟಕ್ಕೂ ...
In reply to ಉ: ಅಷ್ಟಕ್ಕೂ ... by srimiyar
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...
In reply to ಉ: ಅಷ್ಟಕ್ಕೂ ... by TEJAS AR
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...
In reply to ಉ: ಅಷ್ಟಕ್ಕೂ ... by pavi shetty
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...
In reply to ಉ: ಅಷ್ಟಕ್ಕೂ ... by vidyavilas
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...
In reply to ಉ: ಅಷ್ಟಕ್ಕೂ ... by Saranga
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...
ಉ: ಅಷ್ಟಕ್ಕೂ ...