ಬಿಸಿ ಬಿಸಿ...

ಬಿಸಿ ಬಿಸಿ...

ಕವನ

ಮಳೆಗಾಲದ ಸಂಜೆಯಲಿ
ಜಿಟಿಜಿಟಿ ಜಿನುಗುವ ಮಳೆಯಲಿ
ಸಂಪೂರ್ಣ ತೋಯ್ದು ಮೈಯೆಲ್ಲಾ
ಒದ್ದೆಯಾಗಿ ನಡುಗುತ್ತ ಮನೆಗೆ ಬಂದಾಗ
ನಿನ್ನ ಕಂಡೊಡನೆ ಮೈಯೆಲ್ಲಾ ಪುಳಕವಾಯ್ತು
ನಿನ್ನ ಬಳಿ ಬಂದು ಎರಡೂ ಕೈಯಲ್ಲಿ ನಿನ್ನ ಹಿಡಿದಾಗ
ನೀ ಕೊಟ್ಟ ಬೆಚ್ಚನೆಯ ಅನುಭವ ವರ್ಣಿಸಲಾರೆನು ನಾನು
ನಿನ್ನ ಎತ್ತಿ ಹಿಡಿದು ತುಟಿಯ ಬಳಿ ತಂದು ಮೆಲ್ಲನೆ ಹೀರಿದಾಗ
ಆನಂದದಿ ತೇಲಾಡಿ ನಾ ಕೇಳಿದೆ ಆಹಾ ಏನು ಅದ್ಭುತವಾದ ರುಚಿ

ಇದು ಫಿಲ್ಟರ್ ಕಾಫಿನಾ??

Comments