ಗುಂಡನ ಅನ್ವೇಷಣೆ

ಗುಂಡನ ಅನ್ವೇಷಣೆ

ಗುಂಡ  ಹೆಸರಿಗೆ ತಕ್ಕನಾಗಿ ಗುಂಡು ಗುಂಡಾಗಿಯೇ ಇದ್ದವ, ಅಪ್ಪ ಅಮ್ಮ ಒಬ್ಬನೇ ಮಗ ಅಂತ ಮುದ್ದಾಗಿ ಬೆಳಸಿದ್ದರು, ಹೆಚ್ಚಾಗಿ ಅವನನ್ನ ಬೈತಿರ್ ಲಿಲ್ಲ ಹೀಗಾಗಿ ಚಿಕ್ಕಂದಿನಿಂದಲೇ ಸೋಮಾರಿತನವನ್ನು ಚನ್ನಾಗಿಯೇ ಬೆಳಸಿಕೊಂಡಿದ್ದ . ಆದರೆ ತಿನ್ನುವುದರಲ್ಲಿ ಸೋಮಾರಿತನ ಇರಲಿಲ್ಲ,  ಒಮ್ಮ ಟಿ .ವಿ. ನೋಡ್ತಾ ಮನೆಯ ಹಾಲನಲ್ಲಿ ಸೋಫಾದ ಮಲಗಿದ್ದ ಗುಂಡ  ಅಡುಗೆ ಮನೇಲಿ ತರಕಾರಿ ಹೆಚ್ಕೋಂಡ್ ಕೂತಿದ್ದ ಅವರಮ್ಮನಿಗೆ                                           
“ ಅಮ್ಮ ಒಂದು ಲೋಟ ನೀರು ಕುಡಿಯೋಕೆ “ ಅಂತ ಕೂಗಿದ ,   ಅದಕ್ಕೆ ಅವರಮ್ಮ “ ನೀನೆ ಎದ್ದು ಬಂದು ಕುಡಿಯೋ ನಾನ್ ಕೆಲ್ಸ ಮಾಡ್ತಿರೋದು ಕಾಣಸ್ತಿಲ್ವ “ ಅಂದರೆ    “ ಹೋಗಮ್ಮ ಅಲ್ಲಿವರೆಗೆ ಯಾವನ್ ಎದ್ದು ಬರ್ತಾನೆ, ಹೋಗ್ಲಿ ಅಪ್ಪಂಗಾರು ಕೂಗಿ ಹೇಳಮ್ಮ ಆ ಎದುರು ಮನೆ ಅಂಕಲ್ ಜೋತೆ ಸುಮ್ಮನೆ ಹರಟೆ ಹೊಡ್ಕೋಂಡು ನಿಂತಿಯರೆ” ಎಂದ  “ ಎದ್ದು ಬಂದು ಕಪಾಳಕ್ಕೆ ಹೋಡಿತೀನಿ ನೋಡು ಇವಾಗ “ ಅಂತ   ಅವರಮ್ಮ ಅಂದರೆ “ ಹೇಗೂ ಹೊಡಿಯೋಕೆ ಎದ್ದು ಬರ್ತಿಯಲ್ಲ ಅವಾಗ್ಲೆ ಒಂದು ಲೋಟ ನೀರು ತಂದ್ಕೊಡು “  ಅಂದ. ಇಂತ ಸೋಮಾರಿ ತನದಿಂದ  ಎಸ್ ಎಸ್ ಎಲ್ ಸಿ ನ ಮೂರು ವರ್ಷ, ಎರಡನೇ ಪಿಯುನಲ್ಲಿ ಎರಡು ವರ್ಷ ತಗೊಂಡು ಮುಗಿಸಿದ್ದ ಹಾಗಂತ ಪರೀಕ್ಷೆಯಲ್ಲಿ ಸರಿಯಾಗಿ ಬರಿಯದೆ ನಪಾಸಾಗಿದ್ದಲ್ಲ ಮುಂದಿನ ಪರೀಕ್ಷೆ ಯಲ್ಲಿ ಬರೆದರಾಯಿತು ಅಂತ ಹೇಳಿ ಪರೀಕ್ಷೆಗೆ ಹೋಗದೆ ಇದ್ದಕ್ಕೆ ನಪಾಸಾಗಿದ್ದ ಪುಣ್ಯಾತ್ಮ,
ಪಿಯುಸಿ ಆದ ಮೇಲೆ ಇಂಜಿನಿಯರ್ ಗೋ ಇಲ್ಲ ಡಾಕ್ಟರು ಕೋರ್ಸಗೆ ಸೇರತಿಯನೋ ಸೇರಿಸ್ತಿನಿ ಅಂತ ಅವರಪ್ಪ ಹೇಳಿದ್ರು ಸಹ ” ಹೋಗಪ್ಪ ಅವೆರಡನ್ನ ಓದಬೇಕಾದ್ರು ಕಷ್ಟ ಬೀಳಬೇಕು ಆಮೇಲೆ ಕೆಲಸ ಮಾಡಬೇಕಾದರೂ ಕಷ್ಟಪಡಬೇಕು ಬಿಎಸ್ಸಿ ಗೆ ಸೇರ್ತಿನಿ ಆಮೇಲೆ ಎಮ್ ಎಸ್ಸಿ ಮಾಡಿ ಕಾಲೇಜ್ ನಲ್ಲಿ ಲೆಕ್ಚರರ್  ಕೆಲ್ಸಕ್ಕೆ ಸೇರಿ ಆರಾಮವಾಗಿ ಕಾಲ ಕಳಿಬಹುದು “ ಅಂತ ಹೇಳಿ ಬಿಎಸ್ಸಿಗೆ ಸೇರಿದ್ದ “ ಹಲ್ಲಿದ್ದೋರ್ ಗೆ ಕಡ್ಲೆ ಸಿಗಲ್ಲ  ಕಡ್ಲೆ ಇದ್ದೋರ್ ಹತ್ರ ಹಲ್ಲಿರೋಲ್ಲ ನಿನ್ನ ಹಣೆಬರಹ ತಪ್ಪಿಸಕ್ಕಾಗಲ್ಲ ಏನಾರೂ ಮಾಡ್ಕೊ” ಅಂತ ಹೇಳಿ ಅವರಪ್ಪ ಅಮ್ಮ ಇಬ್ಬರು ಸುಮ್ಮನಾಗಿದ್ದರು
ಬಿಎಸ್ಸಿಗೆ ಸೇರಿದ ಗುಂಡನಿಗೆ ಇದ್ದಕಿದ್ದಂತೆ ಓದಿನ ಮೇಳೆ ಬಹಳ ಆಸಕ್ತಿ ಬಂದಿತ್ತು ಅದರಲ್ಲು ಭೌತಶಾಸ್ತ್ರದ ವಿಷಯದಲ್ಲಿನ ನ್ಯೂಟನ್ ನ ಥಿಯರಿಯಮೇಲೆ ಇನ್ನಿಲ್ಲದ ಆಸಕ್ತಿ. ಮನೇನಲ್ಲು ಯಾವಗ್ಲು ರೂಂನಲ್ಲೇ ಕೂತಿರ್ತಿದ್ದ
ಊಟ ತಿಂಡಿನು ಸರಿಯಾಗಿ ಮಾಡ್ತ ಇರಲಿಲ್ಲ. ಇದನ್ನು ನೋಡಿ ಅವರಪ್ಪನಿಗೆ ಗಾಬರಿಯಾಯಿತು ಯಾಕೆಂದರೆ ಹಿಂದೆ ಇವನು ಎಸ್ ಎಸ್ ಎಲ್ ಸಿ ಓದಬೇಕಾದ್ರು ಹೀಗೆ ಮಾಡಿದ್ದ ಸ್ಕೂಲ್ ನಲ್ಲಿ ಅವನ ಮೇಷ್ಟ್ರು “ ಎಲ್ಲವನ್ನು ಪರೀಕ್ಷಿಸಿ ನೋಡೋದು  ಓಳ್ಳೇದು “ ಅಂತ ಹೇಳಿದ್ದರೂ ಅಂತ ಹೇಳಿ ಮನೇಲಿರೋ ಮಿಕ್ಸಿ, ಟೀವಿ, ಪ್ರಿಝ್ ಎಲ್ಲವನ್ನು ಬಿಡಿ ಬಿಡಿಯಾಗಿ ಕಳಚಿಟ್ಟು “ಏನಪ್ಪ ಇದು ಇದರೊಳಗೆ ಏನು ಒಳ್ಳೇದ್ ಇದೆ ನಮ್ಮ ಮೇಷ್ಷ್ರು ಬರಿ ಸುಳ್ಳು ಹೇಳ್ತಾರೆ “ “ ಲೇ ಅವರು ಹೇಳಿದ್ದು ಯಾರಾರು ಏನಾದರೂ ವಿಷಯ ಹೇಳಿದ್ರೆ ಅದು ಸರಿನೋ ತಪ್ಪೋ ಪರೀಕ್ಷಿಸಬೇಕು ಅಂತ ಕಣೋ ಅಯೋಗ್ಯ, ಇದನ್ನೆಲ್ಲ ಯಾಕೋ ಕಳಚಿಟ್ಟಿದಿಯ ಜೋಡಿಸಿಡು “ ಅಂದರೆ                  ಜೋಡಿಸಕ್ಕೆ ಗೊತ್ತಾಗ್ತಿಲ್ಲ ಅಂತಹೇಳಿ ಚೀಲದಲ್ಲಿ ತುಂಬಿಟ್ಟಿದ್ದ.  ಅದನ್ನು ಅಂಗಡಿಗೆ ತಗೊಂಡ್ ಹೋಗಿ ಜೋಡಿಸಿ ಕೊಡಪ್ಪ ಅಂತ ಕೇಳಿದ್ದಕ್ಕೆ ಅವನು ಎಲ್ಲಾ ನೋಡಿ “ ಟೀವಿದು , ಮಿಕ್ಸಿದು ,ಪ್ರಿಝ್ ದು ಎಲ್ಲ ಪಾರ್ಟ್ ಗಳು ಮಿಕ್ಸ್ ಆಗಿದೆ ಸಾರ್ ಇದನ್ನ ಜೋಡಿಸೋ ಬದಲು ಹೊಸದೆ ತಗಳ್ಳಿ ನಮ್ಮ ಅಂಗಡಿಲೇ ಎಲ್ಲ ಇದೆ ಕಡಿಮೆ ಹಾಕೊಡ್ತಿನೆ ಜೊತೆಗೆ ಈ ಪಾರ್ಟ್ ಗಳನ್ನು ಲೆಕ್ಕಕೆ ತಗೊಂಡು ಡಿಸ್ಕೌಂಟ್ ಕೊಡ್ತಿನಿ” ಅಂದ ಗುಂಡನು ಹೂ ನಪ್ಪ ಎಲ್ಲ ಹೊಸದು ತಗೊಂಡು ಬಿಡಣ ಅಂತ ಬಲವಂತ ಮಾಡಿದ , ಇವನು ಅಂಗಡಿಯೋನೋ ಏನಾದರೂ ಮುಂಚನೇ ಮಾತಾಡ್ ಕೊಂಡು ಹೀಗೆ ಮಾಡದರ ಅಂತ ಮನಸ್ಸಿಗೆ ಅನ್ಸಿದ್ರು ಏನ್ ಮಾಡಕಾಗುತ್ತೆ ಅಂತ ಹೇಳಿ ಮಿಕ್ಸಿ ಟೀವಿ ಪ್ರಿಝ್ ಎಲ್ಲ ಹೊಸದಾಗಿ ತಂದಿದ್ರು. ಇನ್ನೇನಾದ್ರು ಬಿಚ್ಚಿಟಿದ್ರೆ ತಗೊಂಬನ್ನಿ ಸಾರ್ ಬದಲಾಯಿಸಿ ಹೊಸದು ಕೊಡ್ತಿನಿ ಅಂತ ಅಂಗಡಿವನು ಹೇಳಿದ್ದು ಈಗ ಜ್ಞಾಪಕಕ್ಕೆ ಬಂದು ಈಗ ಇನ್ನೇನು ಮಾಡ್ತಾನೋ ಅಂತ ಗಾಬರಿಯಾಗಿತ್ತು . ಜೊತೆಗೆ ಟೀವಿ ಲಿ ಬರೋ ಜೋತಿಷ್ಯ ಕಾರ್ಯಕ್ರಮದಲ್ಲಿ ಈ ವಾರ ನಿಮಗೆ ಗ್ರಹಗತಿಗಳು ಸರಿಯಿಲ್ಲ ಅಂತ ಬೇರೆ ಹೇಳಿದ್ರು ಎನಾಗುತ್ತೊಅಂದುಕೊಂಡ್ರು.   ಏನ್ ಕ್ಕೆ ಹೀಗಿದನೆ ಇವನು ಅಂತ ಅವನನ್ನೆ ಕೇಳಣ ಅಂತ ಹೇಳಿ ಅವರಪ್ಪ
“ ಯಾಕೋ ಹೀಗಿದಿಯ ಏನಾಗಿದೆ ನಿಂಗೆ ಟೀವಿನು ನೋಡೋಲ್ಲ,ಊಟ ತಿಂಡಿನು ಸರಿಯಾಗಿ ತಿಂತಿಲ್ಲ” 
“ ಏನಿಲಪ್ಪ ಈ ನ್ಯೂಟನ್ ಥಿಯೆರಿ ಇದ್ಯಲ್ಲ ಆಕ್ಷನ್ ಅಂಡ್ ರಿಯಾಕ್ಷನ್ ಆರ್ ಇಕ್ವಲ್ ಅಂಡ್ ಆಫೋಸಿಟ್ ಅಂತ ಆತರನೆ ನಾನು ಏನಾದರೂ ಕಂಡು ಹಿಡಿಬೇಕೂಂತ ಯೋಚನೆ ಮಾಡ್ತ ಇದೀನಿ “
“ ನಿನೇನ್ ಕಂಡುಹಿಡಿತಿಯೋ ಕಂಡು ಹಿಡಿದಿರೋದನ್ನ ಅರ್ಥ ಮಾಡ್ಕೋ ಸಾಕು “
“ ಸುಮ್ನಿರಪ್ಪ ಜೀವನದಲ್ಲಿ ಏನಾದರೂ ಸಾದನೆ ಮಾಡಬೇಕು , ನೋಡ್ತಾ ಇರು ಇಷ್ಟ್ರೊಳಗೆ ಏನಾದರು ಒಂದು ಥಿಯರಿ ಕಂಡು ಹಿಡಿತಿನಿ “ ಅಂದ ಗುಂಡ. ಏನ್ ಕಂಡುಹಿಡಿತನೋ ಏನೋ ಅನ್ಕಂಡ್ ಅವರಪ್ಪ ಸುಮ್ಮನಾದ್ರು.
ಅವತ್ತು ಭಾನುವಾರ ಗುಂಡ ಬೇಗೆ ಎದ್ದು ಸ್ನಾನ ಮಾಡಿ ಪೇಪರ್ ಓದುಕೊಂಡು ಕೂತಿದ್ದ ಅವರಪ್ಪನ ಹತ್ತಿರ ಬಂದು “ ಒಂದು ಹತ್ತು ರೂಪಾಯಿ ಕೊಡಪ್ಪ “ ಅಂದ 
“ ಎನೋ ಇದು ಇವತ್ತು ಇಷ್ಟು ಬೇಗ ಎದ್ದು ಸ್ನಾನ ಮಾಡಿದಿಯ “
“ ನಾನು ಹೇಳಿದ್ನಲ್ಲ ಹೊಸ ಥಿಯರಿ ಕಂಡು ಹಿಡಿತೀನಿ ಅಂತ ಅದನ್ನ ಕಂಡು ಹಿಡಿದಿದಿನಿ “
“ ಸರಿ ಅದಕ್ಕೆ ಹತ್ತು ರೂಪಾಯಿ ಯಾಕೆ “
“ ನೀನು ಕೊಡಪ್ಪ ನಿನಗೆ ಪ್ರಾಕ್ಟಿಕಲ್ ಆಗಿ ತೋರಿಸ್ತಿನಿ “ ಅಂದ ಗುಂಡ ಇನ್ನೇನು ಗ್ರಹಚಾರ ಕಾದಿದಯೋ ಅಂದಕೊಂಡು ಅವರಪ್ಪ “ಅಂಗಿ ಜೋಬಿನಲ್ಲಿ ಇದೆ ತಗಳಪ್ಪ “ ಅಂತ  ಹೇಳಿ ಎದ್ದು ಸ್ನಾನಕ್ಕೆ ಹೋಗಿ ಸ್ನಾನ ಮುಗಿಸಿ ಬಂದು ತಿಂಡಿ ತಿಂದು ಟೀವಿ ನೋಡ್ಕೊಂಡು ಕೂತಿದ್ರು, ಹೊರಗೆ ಹೋಗಿದ್ದ ಗುಂಡ ಬಂದೋನೆ                 “ ಅಪ್ಪ ತಿಂಡಿ ತಿಂದ “ ಅಂದ ಇದೇನು ಇಷ್ಟೊಂದು ವಿಚಾರಸ್ಕಂತ ಇದನಲ್ಲ ಯಾಕೋ ಎಡಗಣ್ಣು ಬೇರೆ ಹಾರ್ತ ಇದೆ ಅನ್ಕೋಂಡು “ ಆಯ್ತಪ್ಪ ನೀನು ತಗೋ ಹೋಗು “ ಅಂದರು  ಅಡಗೆ ಮನೆಗೆ ಹೋದ ಗುಂಡ ಅಲ್ಲೇ ಇದ್ದ ಅವರಮ್ಮನಿಗೆ  “ ಅಪ್ಪನಿಗೆ ಕಾಫಿ ಕೊಟ್ಟೇನಮ್ಮ “ ಅಂದ   “ ತಿಂಡಿ ಆಯ್ತು ಇನ್ನು ಕಾಫಿ ಕೊಟ್ಟಲ್ಲ “ “ ಸರಿ ಕಾಫಿ ನಾನೆ ಮಾಡಿ ಕೊಡ್ತಿನಿ ಬಿಡು “ ಅಂತಹೇಳಿ ಕಾಫಿ ಮಾಡಿ ತಗೊಂಡು ಅವರಪ್ಪನಿಗೆ ಕೊಡೋಕೆ ತಗೊಂಡು ಹೋದ , ಅವರಮ್ಮನಿಗೂ ಆಶ್ಚರ್ಯ  ಇದೇನು ಎಂದು ಅಡಿಗೆ ಮನೆಗೆ ಬರದೆ ಇದ್ದೋನು ಇವತ್ತು ಅವನೆ ಕಾಫಿ ಮಾಡಿ ಅವರಪ್ಪನಿಗೆ  ಕೊಡ್ತಾ ಇದನಲ್ಲ ಅಂದ್ಕೊಂಡ್ರು
ಗುಂಡ ಕಾಫಿನ ಅವರಪ್ಪನಿಗೆ ಕೊಟ್ಟು ತಾನು ತಿಂಡಿ ತಿನ್ಕೊಂಡು ಅಲ್ಲೇ ಕೂತ್ಕೊಂಡು ಅವರಪ್ಪನ್ನೆ ಗಮನಸ್ತಾ ಇದ್ದ ಕಾಫಿ ಕುಡಿದು ಅರ್ಧ ಗಂಟೆ ಆಯ್ತು ಅವರಪ್ಪನಿಗೆ ಹೊಟ್ಟೆಯೊಳಗೆ ಗುಡ ಗುಡ ಅನಿಸಿ ಎರಡು ಮೂರು ಸಲ ಟಾಯ್ಲೆಟ್ ಗೆ ಹೋಗಿಬಂದರು ಅಲ್ಲೆ ಕೂತಿದ್ದ ಗುಂಡ “ ಏನಪ್ಪ ಬೇದಿನ “ ಅಂತ ಕೇಳಿದ
“ ಕಾಫಿ ಕುಡಿದ ಮೇಲೆ ಹೊಟ್ಟೆ ಒಂತರ ಆಗ್ತಿದೆ ಕಣಯ್ಯ ಅದ್ ಸರಿ ನಿನಗೆ ಹೇಗೆ ಗೊತ್ತಾಯಿತು “
“ ಕಾಫಿಗೆ ಒಂದೆ ಒಂದು ಬೇದಿ ಮಾತ್ರೆ ಹಾಕಿದ್ದೆ “
“ ಅದಕ್ಕೇನ ಬೆಳಗ್ಗೆ ಹತ್ತು ರೂಪಾಯಿ ತಗೊಂಡು ಹೋಗಿದ್ದು, ನನಗೆ ಯಾಕೋ ಬೇದಿ ಮಾತ್ರೆ ಕೊಟ್ಟೆ”
“ ನಾನು ಕಂಡು ಹಿಡಿದಿರೋ ಥಿಯರಿನ ನಿನಗೆ  ಪ್ರಾಕ್ಟಿಕಲ್ ಆಗಿ ತೊರಿಸ್ತಿನಿ ಅಂತ ಹೇಳಿದ್ನಲ್ಲ ಅದಕ್ಕೆ”
“ ನಿನ್ನ ಥಿಯರಿಗೂ ನನಗೆ ಬೇದಿ ಮಾತ್ರೆ ಕೊಡುದಕ್ಕೂ ಏನೋ ಸಂಬಂಧ, ಏನ್ ಥಿಯರಿನೋ ಅದು “
“ ನ್ಯೂಟನ್ ಥಿಯರಿ ಏನು ಹೇಳುತ್ತೆ ಆಕ್ಷನ್ ಅಂಡ್ ರಿಯಾಕ್ಷನ್ ಆರ್ ಇಕ್ವಲ್ ಅಂಡ್ ಆಫೋಸಿಟ್ ಅಂತ ನಾನು ಕಂಡು ಹಿಡಿದಿರೋ ಥಿಯರಿ ಏನು ಗೊತ್ತ “ ಲೂಸ್ ಮೋಶನ್ ಕೆನಾಟ್ ಬಿ ಡನ್ ಇನ್ ಸ್ಲೋ... ಮೋಶನ್ “ ಅಂತ ಹೇಗಿದೆ ಅದು ನಿನಗೆ ಅರ್ಥ ಅಗ್ಲಿ ಅಂತ ಬೇದಿ ಮಾತ್ರೆ ಕೊಟ್ಟಿದ್ದು “ ಅಂದ ಗುಂಡ …………………

Comments