ಮಗಾ ಅಲೆ..

ಮಗಾ ಅಲೆ..

ನಾಲ್ಕು ವರ್ಷದ ಮೊದಲು "ಈ ಅಣ್ಣ" ಯಾರೆಂದು ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ!


 


ಕೆಲ ಸಂಪದಿಗರು ಯಾವಾಗ ನನ್ನನ್ನು "ಗಣೇಶಣ್ಣ" ಎಂದು ಕರೆಯಲು ಆರಂಭಿಸಿದರೋ, ಆವಾಗ ಸಣ್ಣಗೆ ಎದ್ದ "ಅಣ್ಣ ಅಲೆ" ಈಗ ನೋಡಿ ಎಲ್ಲಿವರೆಗೆ ಮುಟ್ಟಿದೆ!


 


ಎಲ್ಲಿಂದ ಎಲ್ಲಿಗೆ ಸಂಬಂಧ ಅಂದಿರಾ..?


 


ಇಂಟಲಿಜೆನ್ಸ್ ಇಲಾಖೆ ಇರುವ ಸರಕಾರವೇ, ಅಣ್ಣಾ ಅಲೆಗೆ ಆರ್.ಎಸ್.ಎಸ್‌ಏ ಕಾರಣ ಎಂದಿತು. ಕೈ ಪಕ್ಷವೇ ಅಮೇಏಏರಿಕಾ ಕೈವಾಡ ಎಂದಿತು. ಜವಾಬ್ದಾರಿ ಸ್ಥಾನದಲ್ಲಿರುವವರೇ ಬಾಯಿಗೆ ಬಂದಂತೆ ಒಂದೊಂದು ಹೇಳಿಕೆ ಕೊಡುವಾಗ ನಾನು ನನ್ನ "ಇಂಟಲಿಜೆನ್ಸ್" ಉಪಯೋಗಿಸಿ ಅಣ್ಣ ಅಲೆಯ ಮೂಲ ಪತ್ತೆ ಹಚ್ಚಿದೆ.....ತಪ್ಪಾ?


 


ಕರ್ನಾಟಕದಲ್ಲಿ ಅಣ್ಣಾ ಅಲೆಗಿಂತಲೂ ಬಹಳ ವರ್ಷ ಮೊದಲಿನಿಂದಲೇ ಒಂದು ಅಲೆ ಇದೆ.ತಲೆ ಚಿಟ್ಟು ಹಿಡಿದರೂ ಇನ್ನೂ ಮುಂದುವರಿದಿದೆ. ಅದೇ ....."ಮಗಾ ಅಲೆ" ಅಲ್ಲಾ..ಗೌಡರ ಮಕ್ಕಳದಲ್ಲಾ.. ಬೇರೆ..


ಟಿ.ವಿ.ಯಲ್ಲಿ ಒಮ್ಮೆ ಒಂದು ಸಿನೆಮಾ ನೋಡಿದ್ದೆ- ಒಂದು ದೃಶ್ಯದಲ್ಲಿ ನಾಲ್ಕು ಸ್ನೇಹಿತರು ಮಳೆಯಲ್ಲಿ ನೆನೆದುಕೊಂಡು ಪ್ರೀತಿ ಬಗ್ಗೆ ಚರ್ಚಿಸುತ್ತಿದ್ದರು. ಪ್ರತಿಯೊಬ್ಬರೂ ಇನ್ನೊಬ್ಬನನ್ನು "ಮಗಾ ಮಗಾ" ಎಂದೇ ಕರೆಯುತ್ತಿದ್ದರು. ಬಹುಷಃ ಗೆಳೆಯರು ಒಬ್ಬರಿಗೊಬ್ಬರು ಮಗಾ ಎಂದಾಗಲೇ ಅದು ಮಾಸ್ ಚಿತ್ರವಾಗುವುದು..


ಎಫ್.ಎಮ್. ಚಾನಲ್ ಬೆಂಗಳೂರಿಗೆ ಬರಲಿದೆ ಎಂದು ಕಾತರದಿಂದ ಕಾದಿದ್ದೆ. ಸಿ.ಡಿ/ಡಿ.ವಿ.ಡಿ ಪ್ಲೇಯರ್‌ಗಳ ಅಗತ್ಯವೇ ಇಲ್ಲ ಅಂದುಕೊಂಡೆ. ಆದರೆ ಎಫ್.ಎಮ್ನೊಂದಿಗೆ ವಕ್ಕರಿಸಿದರು ನೋಡಿ ಸಕತ್ ಹಾಟ್ ಮಕ್ಕಳು. ಮೂಲೆ ಸೇರಿದ್ದ ಸಿ.ಡಿ. ಪ್ಲೇಯರ್ ಪುನಃ ಹೊರತಂದು ರಫಿ,ಲತಾ..ರ ಹಾಡುಗಳ ಕ್ಯಾಸೆಟ್ ಹಾಕಿ ಕೇಳುತ್ತಿರುವೆ.


ಕಳೆದ ತಿಂಗಳಲ್ಲಿ ಒಂದು ಚಾನಲ್‌ನವರು ಸಿನೆಮಾ ಪ್ರಶಸ್ತಿ ಸಮಾರಂಭ ಏರ್ಪಡಿಸಿದ್ದರು. ಸೃಜನ್ ಲೋಕೇಶ್ ಸೇರಿ ಮೂವರು ನಿರೂಪಕರು..ಒಬ್ಬರನೊಬ್ಬರು ಮಗಾ ಮಗಾ ಎಂದೇ ಮಾತನಾಡಿಸುತ್ತಿದ್ದರು.


ದೊಡ್ಡವರು ಬಿಡಿ, ಮಕ್ಕಳ ಬಾಯಲ್ಲೂ ಈ ಮಾತು ಕೇಳುವಾಗ ಕಿರಿಕಿರಿ ಅನಿಸುವುದು.


-ಗಣೇಶ.


 

Rating
No votes yet

Comments