ಕತೆ: ಅಣ್ಣ-ತಮ್ಮ
ಅವರಿಬ್ಬರು ಅಣ್ಣ - ತಮ್ಮಂದಿರಾಗಿದ್ದರು ಆದರೂ ಸ್ನೇಹಿತರಹಾಗೆ ಜೊತೆಯಾಗಿಯೇ ಇರುತಿದ್ದರು. ಆದರೆ
ಒಳಗೊಳಗೇ ಭೇದ-ಭಾವ ವಿತ್ತು . ಏಕೆಂದೆ ಅವರಿಬ್ಬರಲ್ಲಿ ಅಣ್ಣನಿಗಿಂತಲೂ ತಮ್ಮ ಬಹಳ ಹುಷಾರ್,
ಕಲಿಕೆಯಿಂದ ಹಿಡಿದು ಮರ ಹತ್ತುವ ವರೆಗೆ ತಮ್ಮ ಒಂದು ಹೆಜ್ಜೆ ಮುಂದಿದ್ದ. ಪ್ರತಿಯಾಗಿ ಅಣ್ಣ ಹೊಟ್ಟೆ
ತುಂಬಿಸುವುದರಲ್ಲಿ ಮಾತ್ರ ಮುಂದಿದ್ದ. ಆದ್ದರಿಂದಲೇ ಗಾತ್ರದಲ್ಲೂ ದೊಡ್ದವನಿದ್ದ.
ಒಮ್ಮೆ ಪೇರಳೆ ಮರವೋದಕ್ಕೆ ಹತ್ತಿದ ತಮ್ಮ ಎರಡು ಹಣ್ಣುಗಳನ್ನು ಬೀಳಿಸಿದ, ಒಂದು ದೊಡ್ಡದು
ಇನ್ನೊಂದು ಸಣ್ಣದು. ಮರದಿಂದ ಇಳಿದ ತಮ್ಮ ಸಣ್ಣದನ್ನು ಕಿಸೆಗೆ ತುಂಬಿದ. ಇನ್ನೊಂದು ನೇರ ಬಿದ್ದದ್ದು
ಕೆಸರಿಗಾಗಿತ್ತು. ಕೆಸರಿನ ಹಣ್ಣನ್ನು ಅಣ್ಣ ತಮ್ಮನ್ದಿರು ನೋಡುತ್ತಲೇ ಅದನ್ನು ಹಂಚುವ ವಿಷಯದಲ್ಲಿ
ತರ್ಕವಾಯಿತು. ಕೊನೆಗೆ ಯಾರು ಕೆಸರಿನಿಂದ ಹಣ್ಣನ್ನು ತೆಗೆಯುತ್ತಾರೋ ಅವರಿಗೆ ಹಣ್ಣು ಎಂದು
ತೀರ್ಮಾನಕ್ಕೆ ಬಂದರು. ಕೆಸರಿನಿದ ಹಣ್ಣನ್ನು ತೆಗೆಯಲು ಅಣ್ಣ ಪ್ರಯತ್ನಿಸಿದ, ಕಾಲಿಗೆ ಕೆಸರದಾಗ "ಛೀ"
ಎಂದು ಪ್ರಯತ್ನ ನಿಲ್ಲಿಸಿದ. ತಮ್ಮ ಕೆಸರನ್ನು ಲೆಕ್ಕಿಸದೆ ಕೆಸರಿಗಿಳಿದು ಹಣ್ಣನ್ನು ತೆಗೆದಾಗ ಅಣ್ಣ ಮೊದಲ
ತೀರ್ಮಾನವನ್ನೇ ಬದಲಿಸಿದ! ಹಣ್ಣಿನ ಅರ್ಧ ತನಗೆ ನೀಡಬೇಕೆಂದು ಹೇಳಿಕೊಂಡ. ಅಣ್ಣನ ಮಾತಿಗೆ ಹ್ಞೂ
ಅನ್ನದಿದ್ದರೆ ತಾನು ಸುರಕ್ಷಿತವ್ವಗಿ ಕೆಸರಿನಿಂದ ಮೇಲೆಬರಲು ಸಾದ್ಯವಿಲ್ಲ ಎಂಬುದು ತಿಳಿದ ತಮ್ಮ ಅದಕ್ಕೆ
ಒಪ್ಪಿದ. ಆದರೆ ಸಣ್ಣ ಹಣ್ಣಿನಲ್ಲಿ ಪಾಲು ಕೇಳಬಾರದೆಂದು ಶರತ್ತಿಟ್ಟ. ಹಣ್ಣಿನ ಪಾಲು ಕೊಡುತ್ತೇನೆ ಎಂದ
ಕ್ಷಣ ತಮ್ಮನ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಿದ್ದ ಅಣ್ಣ. "ಕೆಸರಿನ್ದಮೇಲೆ ಏರುವಾಗ ಜಾಗ್ರತೆ,
ಹಣ್ಣನ್ನು ನಾನು ಹಿಡಿಯುತ್ತೇನೆ ಕೊಡು" ಎಂದ. ಹಾಗೆ ಅಣ್ಣನ ಪ್ರೀತಿಗೆ ಕರಗಿ ಹಣ್ಣನ್ನು ಅವನತ್ತ ಎಸೆದ.
ಎಸೆದ ಮರುಕ್ಷಣ "ಅರ್ಧ ಅಲ್ಲ ಒಂದು ಸಣ್ಣ ತುಂಡು ಕೂಡ ಕೊಡಲಾರೆ" ಎಂದು ಮಾತನ್ನೆ ಬದಲಿಸಿದ
ಅಣ್ಣ. ಆದರೆ ದುರಾದೃಷ್ಟ ಹಣ್ಣು ಅವನ ಕೈ ತಪ್ಪಿ ನೇರ ಹಸುವೋದರ ಎದುರಿಗೆ ಬಿತ್ತು. ಸಪ್ಪೆ
ಮುಖದೊಂದಿಗೆ ತಮ್ಮನ ಕಡೆ ತಿರುಗುವಷ್ಟರಲ್ಲಿ ತಮ್ಮ ತನ್ನಲ್ಲಿದ್ದ ಸಣ್ಣ ಹಣ್ಣನ್ನು ಬಾಯಿಗೆ ಹಾಕಿದ್ದ!!!
Comments
ಉ: ಕತೆ: ಅಣ್ಣ-ತಮ್ಮ