ಭ್ರಷ್ಟಾಸುರ ಮರ್ದನವಾಗಲಿ
ಭ್ರಷ್ಟಾಸುರ ಮರ್ದನವಾಗಲಿ
ಸತತ ನಿರಂತರ ಸತ್ಯಾನ್ವೇಷಣ
ವ್ರತವಾಗಲಿ ಅದು ಸರ್ವ ಜನ
ಪಾಲನೆಯಾಗಲಿ ಧ್ಯೇಯದ ಪಥದಲಿ
ಸಾಗುತಲಿರಲಿ ದೇಶ ಜನ ||
ಸ್ವಾರ್ಥಕೆ ದುಡಿಯುವ ಮಂದಿಯ ಸಹಿಸದು
ಇತಿಹಾಸಕೆ ಬೇಕೊಳ್ಳೆತನ
ಮಾತ್ರವೇ ಉಳಿವುದು ಗಾತ್ರಗಳಳಿವುದು
ಎಂಬುದನರಿತಿರಲೆಲ್ಲ ದಿನ ||
ದುಡಿದವರನು ಛೀ ಥೂ ಎನ್ನುವ ಸಿರಿ
ಬರಿ ಮರುಳಾಟಿಕೆ ಅಹಮಿಕೆಯು
ಮರುಗುವ ಪರಿಗದು ಕಾರಣವಾಗುವ
ತಿಳುವಳಿಕೆಯು ಬೇಕೆಲ್ಲರಲು ||
ನಯವಂಚಕರನು ಜೈಲಿಗೆ ತಳ್ಳಲು
ನಿಷ್ಟುರ ನಿಷ್ಠೆಯು ನ್ಯಾಯದೊಳು
ಅಧಿಕಾರದ ದುರ್ಬಳಕೆಗೆ ಶಾಸ್ತಿಯು
ಆಗಲೇ ಬೇಕಿದೆ ದೇಶದೊಳು ||
ಅಣ್ಣ ಹಜಾರೆಯ ಹೋರಾಟವು ಫಲ
ನೀಡಲಿ ಭಾರತ ಯುವಕರಲಿ
ಭ್ರಷ್ಟಾಸುರ ಮರ್ದನಕೆಂದೇ ಛಲ
ಮೂಡಲಿ ತರುಣರ ಹೃದಯದಲಿ ||
- ಸದಾನಂದ
Rating
Comments
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by vani shetty
ಉ: ಬ್ರಷ್ಟಾಸುರ ಮರ್ಧನವಾಗಲಿ
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by kavinagaraj
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by manju787
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by kavinagaraj
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by gopaljsr
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by kavinagaraj
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by kavinagaraj
ಉ: ಬ್ರಷ್ಟಾಸುರ ಮರ್ಧನವಾಗಲಿ
In reply to ಉ: ಬ್ರಷ್ಟಾಸುರ ಮರ್ಧನವಾಗಲಿ by kavinagaraj
ಉ: ಬ್ರಷ್ಟಾಸುರ ಮರ್ಧನವಾಗಲಿ
ಉ: ಭ್ರಷ್ಟಾಸುರ ಮರ್ದನವಾಗಲಿ
In reply to ಉ: ಭ್ರಷ್ಟಾಸುರ ಮರ್ದನವಾಗಲಿ by ಗಣೇಶ
ಉ: ಭ್ರಷ್ಟಾಸುರ ಮರ್ದನವಾಗಲಿ