ಮೊದಲ ಕವಿತೆ...ಬಾಲ ಗೋಪ ಹುಟ್ಟಿದ ದಿನ ಜನ್ಮ ತಾಳಿತು!

ಮೊದಲ ಕವಿತೆ...ಬಾಲ ಗೋಪ ಹುಟ್ಟಿದ ದಿನ ಜನ್ಮ ತಾಳಿತು!

ಕವನ

 ಇಳಿದು ಬಾ ಬುವಿಗೆ
ಬಾಡಿ ಬಸವಳಿದಿದ್ದಾಳಾಕೆ
ಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆ
ನನಗೆ ಗೊತ್ತು
ನೀನು ಕಾದಿರುವಿ 
ಸರಿಯಾದ ಕಾಲಕ್ಕಾಗಿ
ಆದರೆ ಈ ಸಾರಿ ಪೂರ್ಣಾವತಾರ ತಾಳು
ಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆ
ನಿನಗೂ ಕಷ್ಟವಾದೀತು ಯಾರು ಮಾನವರು ಯಾರು ದೈತ್ಯರೆಂದು ಅರಿಯಲು
ಕೊನೆಗೂ ಜಯ ನಿನ್ನದೇ....ಆದರೆ ಜಯದ ಸುಖ ಅನುಭವಿಸಲು ಯಾರೂ ಉಳಿಯರು...
ಇದು ಸತ್ಯ ಅಲ್ಲವೇ...ಗೋಪಾಲ?

Comments