ಶ್ವಾನ ಪುರಾಣಮ್ 2
ಶ್ವಾನ ಪುರಾಣಮ್ 2
ಇಷ್ಟರಲ್ಲಿ ಅನು ಓಡಿ ಬಂದು ಪಪ್ಪಾ ಇವನ ಹೆಸರು ಏನಿಡೋಣ ಅಂತ ನಾವು ಆಗಲೇ ಊಹಿಸಿಯಾಯ್ತು ಎಂದ. ಏನಿಟ್ಟಿದ್ದೀರಪ್ಪಾ ಎಂದೆ.ಯಾವ ಹೆಸರು ಕರೆದರೂ ಈತ ಮಾತನಾಡಲಿಲ್ಲ, ಆದರೆ ನಾನು ಇವನಿಗೆ ಲೂಯಿ ಅಂತ ಕರೆದಾಗ ಆತನ ಒಂದು ಕಿವಿ ನನ್ನ ಕಡೆ ತಿರುಗಿತು. ಅದಕ್ಕೆ ಅದೇ ಹೆಸರಿಂದ ಕರೆಯೋಣ ಎಂದ.ಪ್ರಾಯಶಃ ಅಂತಹದ್ದೇ ಏನೋ ಹೆಸರಿಟ್ಟಿರಬಹುದು ಇವನ ಮೊದಲಿನ ಯಜಮಾನ ಅಲ್ಲ್ವಾ ಅಂತ ಹೇಳುವಾಗಲೇ ಶ್ರೀಮತಿ ನಾಳೆ ಇದರ ಓನರ್ ಬಂದು ನಮ್ಮ ನಾಯಿ ನೀವು ಕದ್ದಿದ್ದೀರ ಎಂದರೆ ಏನ್ರೀ ಮಾಡ್ತೀರಾ ನೀವು ಎಂದಳು. ಈ ವಿಷಯವನ್ನು ಕೂಡ ಅಲ್ಲಗಳೆಯುವಂತಿಲ್ಲವಲ್ಲ.ನೋಡೋಣ ಬಿಡು ಹೇಳೀಕೇಳಿ ಜಾತಿ ನಾಯಿ, ಇಲ್ಲಿ ಅದಕ್ಕೆ ಒಳ್ಳೇಯದಾದರೆ ಇಲ್ಲೇ ಇರುತ್ತೆ ಇಲ್ಲವಾದರೆ ಮೊದಲಿನ ಜಾಗಕ್ಕೆ ಓಡಿ ಹೋಗಬಹುದುಬಿಡು ಸಮಾಧಾನಿಸಿದೆ.ಆ ಕಾಲ ಬೇಗಬರಲಪ್ಪಾ,ಎಂದಳು ಶ್ರೀಮತಿ.
ಆದಿನದಿಂದ ನಮ್ಮ ಮನೆಯಲ್ಲಿ ಒಂದು ಹೊಸ ಸದಸ್ಯ ಸೇರ್ಪಡೆಯಾದ. ಈತನಂತೂ ಮನೆಯನ್ನು ಎಷ್ಟು ಚೆನ್ನಾಗಿ ಮೂರೇ ದಿನಗಳಲ್ಲಿ ಹೊಂದಿಕೊಂಡ ಎಂದರೆ ಮನೆಯ ಖರ್ಚು ಕೂಡಾಕಾಲು ಅಂಶ ಜಾಸ್ತಿಯೇ ಅಯಿತು. ನಾಲ್ಕನೆಯ ದಿನದಿಂದ ಆತ ಮನೆಯ ಉಸ್ತುವಾರಿಯ ಜವಾಬ್ದಾರಿ ಕೂಡಾ ತಾನೇ ತೆಗೆದುಕೊಂಡ. ಈ ಅಚ್ಚರಿಯ ವಿಷಯ ನಮ್ಮ ಗಮನಕ್ಕೆ ಬಂದುದು ವಿಚಿತ್ರ ಪ್ರಸಂಗದಿಂದ.ಪ್ರತಿ ಬುಧವಾರ ಸಂಜೆ ನಾವಿಬ್ಬರೂ ಸಂತೆಗೆ ಹೋಗುತ್ತೇವೆ. ನಾವಿದ್ದ ಕೊಲೊನಿಯ ಹೊರಭಾಗದಲ್ಲಿ ಸಂತೆ ಏರ್ಪಡುತ್ತದೆ, ಎಲ್ಲಾ ಸಂತೆಗಳಂತೆಯೇ ಅಲ್ಲಿಯೂ ನಮಗೆ ಬೇಕಾದ ಬೇಡವಾದ ವಸ್ತುಗಳ ಭಾರೀ ಭಂಢಾರವೇ ಬಿದ್ದಿರುತ್ತದೆ.ನಮಗೆ ಬೇಕಾದ ಫ಼್ರೆಷ್ ತರಕಾರಿಗಳು ಬರುತ್ತವಾದ್ದರಿಂದ ವಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲಿಂದಲೇ ತಂದು ಇಟ್ಟುಕೊಳ್ಳುವುದು ನಮಗೆ ರೂಢಿಯಾಗಿತ್ತು.ಲೂಯಿಯನ್ನು ಮೊದಲ ದಿನ ಕಟ್ಟಿ ಹಾಕಿದ್ದೆವು ಯಾಕೆಂದರೆ ಈತ ಸೀದಾ ಮನೆಯ ಇದಿರಿನ ವಿಶಾಲ ಜಾಗದಲ್ಲಿ ಅಡುತ್ತಿರುವ ಎಲ್ಲಾ ಮಕ್ಕಳಲ್ಲಿ ಒಂದು ರೀತಿಯ ಭಯದ ವಾತಾವರಣವನ್ನೇ ಸೃಷ್ಟಿಸಿದ್ದ, ಆತನೇನೋ ಮಕ್ಕಳೊಡನೆ ಆಡಲು ಹೋಗುತ್ತಿದ್ದನಾದ್ರೂ ಈತನ( ನಾಯಿ ಭಾಷೆ) ಆ ಹಿಂದಿಯ ಮಕ್ಕಳಿಗೆಲ್ಲಿ ಅರ್ಥವಾಗಬೇಕು, ಅವು ಈತನ ಅಬ್ಬರ ನೋಡಿ ಕೀಈಈಈಈಈಈ ಅಂತ ಚೀರಿ ಓಡಿದರೆ ಈತನಿಗೆ ಅದೇನೋ ಭಾರೀ ಮಜವಾಗಿ ಅಲ್ಲಿದ್ದ ಎಲ್ಲಾ ಚಿಣ್ಣರನ್ನೂ ಓಡಿಸತೊಡಗಿದ, ಈಚೀರಾಟ ನೋಡಿ ನನ್ನ ಇಬ್ಬರೂ ಮಕ್ಕಳು ಅವನನ್ನು ಎಳತಂದು ಲಿಫ಼್ಟನ ಹತ್ತಿರ ಕಟ್ಟಿ ಹಾಕಿದರು.ಅದು ಮತ್ತೊಂದು ರಾದ್ದಾಂತಕ್ಕೆ ದಾರಿ ಮಾಡಿತು. ನಮ್ಮದು ಐದು ಅಂತಸ್ತಿನ ಮನೆಯೆಂದು ಹೇಳಿದೆನಷ್ಟೆ ನಮ್ಮಪಕ್ಕದ ಬಿಲ್ಡಿಂಗ್ ಕೂಡ ನಮ್ಮ ಬಿಲ್ಡಿಂಗಗೆ ತಾಗಿಕೊಂಡೇ ಇದ್ದುದರಿಂದ ನಮ್ಮ ಲಿಫ಼್ಟ್ನಲ್ಲಿ ಬಂದು ಕೆಲವರು ಮೇಲೆ ಹತ್ತಿ ಆಚೆ ಬಿಲ್ಡಿಂಗಗೆ ಹೋಗುತ್ತಿದ್ದರು. ಲೂಯಿ ಬಂದ ಮೇಲೆ ಆಚೆ ಹೋಗುವವರು , ಕೆಲಸ ಇಲ್ಲದೇ ಅಲ್ಲಿ ಇಲ್ಲಿ ಅಲೆಯುವವರು, ಹೀಗೆ ಇವರೆಲ್ಲರ ಸಂಖ್ಯೆ ಒಮ್ಮೆಲೇ ಕಡಿಮೆಯಾಯಿತು.ಒಮ್ಮೆಯಂತೂ ಲಿಫ಼್ಟ್ ಕೆಟ್ಟು ಹೋಗಿತ್ತು ಅದರ ರಿಪೇರಿಗೆ ಬಂದ ಮೆಕೇನಿಕ್ ಕೂಡಾ ಲೂಯಿಯ ಅಬ್ಬರ ನೋಡಿ ಹೆದರಿ ಹಾಗೆಯೇ ಓಡಿಹೋಗಿದ್ದ. ನಾನೇ ಅವನನ್ನು ಪುಸಲಾಯಿಸಿ ಕರೆತಂದು ರಿಪೇರಿ ಮಾಡಿಸಿದ್ದೆ. ತಡೆಯಿರಿ, ನಾವು ಸಂತೆಗೆ ಹೋದ ಕಥೆ ಏನಾಯ್ತು ಅಂದಿರಾ ? ಅಲ್ಲಿಗೇ ಬರ್ತಾ ಇದ್ದೇನೆ, ಬಿಡಿ ನಾವು ಸಂತೆಯಿಂದ ಬಂದ ಮೇಲೆ ಹಾಗೆ ಏನೂ ವಿಶೇಷ ಘಟಿಸಲಿಲ್ಲ. ಸುಮಾರು ಒಂಬತ್ತು ಘಂಟೆಗೆ ನನ ಮೊಬೈಲ್ ಗುಣುಗುಣಿಸಿತು. ಎತ್ತಿದರೆ ನಮ್ಮ ಕಾಲೊನಿಯ ಪಕ್ಕದಲ್ಲೇ ಸಿಂಗಲ್ ಆಗಿ ವಾಸಿಸುತ್ತಿರುವ ನನ್ನ ಸ್ನೇಹಿತ ಕುಲಕರ್ಣಿಯವರದು. ಕೆಂಡಾಮಂಡಲವಾಗಿದ್ದಾರೆ, ಪ್ರಾಣಿ. ಏನಾಯ್ತು ಎಂದರೆ, ನಾವು ಸಂತೆಗೆ ಹೋಗಿದ್ದಾಗ ಇವರು ನಮ್ಮ ಮನೆಗೆ ಬಂದಿದ್ದಾರೆ. ಲಿಫ಼್ಟ್ ಕೆಟ್ಟು ಹೋಗಿರೋದರಿಂದ ಕಷ್ಟಪಟ್ಟು ಮೆಟ್ಟಲೇರಿ ಬಂದಿದ್ದಾರೆ. ಈತನ ವಿಷಯ ಅವರಿಗೆ ಗೊತ್ತಿಲ್ಲ, ಅವರ ವಿಷಯ ಈತನಿಗೆ ಗೊತ್ತಿಲ್ಲ, ಈಮೂರು ದಿನಗಳಲ್ಲಿ ಲೂಯಿ ಮನೆಗೆ ಬರುವ ಎಲ್ಲರನ್ನೂ ಬಹು ಚೆನ್ನಾಗಿ ಪರಿಶೀಲಿಸಿ ನೆನಪಿನಲ್ಲಿಟ್ಟಿದ್ದಾನೆ. ನಾವು ಹೊರಗೆ ಹೋದ ಕೂಡಲೇ ಈತ ನಮ್ಮ ಮನೆಯ ಕೆಳಗಿನ ಮೂರನೆಯ ಮನೆಯಲ್ಲಿದ್ದು ಕಾಯುತ್ತಿದ್ದಾನೆ.ಕುಲಕರ್ಣಿಯವರು ನಡೆದು ಬರುವಾಗ ಈತ, ತಾನು ಈ ಮನೆಗೆ ಬಂದ ಮೇಲೆ,ಇದುವರೆವಿಗೂ ಬರದೇ ಇದ್ದ ಕುಲಕರ್ಣಿಯವರನ್ನು ನೋಡಿ ಈ ಅಪರಿಚಿತ ವ್ಯಕ್ತಿಯ ಮೇಲೆ ಈತನಿಗೆ ಸಂಶಯಬಂದು ಅವರನ್ನೇ ಹಿಂಬಾಲಿಸಿ ಬಂದಿದ್ದಾನೆ.ಅವರು ಮನೆಯ ಕರೆಘಂಟೆ ಒತ್ತುವ ತನಕ ಸುಮ್ಮನಿದ್ದ ಈತ ಒಮ್ಮೆಗೇ ಅವರ ಕಾಲಿನ ಮೀನ ಕಂಡಕ್ಕೆ ಬಾಯಿ ಹಾಕಿದ್ದಾನೆ. ಇಷ್ಟು ಹೇಳುವಾಗ ಅವರ ಕೋಪ ಪುನಃ ತಾರಕಕ್ಕೇರಿತು. " ಅಲ್ಲಾರೀ ನಿಮ್ಮ ಮನೆ ನಾಯಿ, ಮನೆ ಹಾಳಾಗ, ನಿಮಗೇನು ಬುದ್ದಿ ಇದೆಯೇನ್ರೀ, ಇಷ್ಟು ದೊಡ್ಡ ನಾಯಿ ಯಾರಾದ್ರೂ ಸಾಕ್ತಾರಾ? ನಾಯಿ ತಂದ ವಿಷಯ ನನಗೆ ಹೇಳಲು ನಿಮಗೇನು ನಾಯಿ ಕಡಿದಿತ್ತಾ? ನಿಮ್ಮ ಅಜ್ಜಿಗೆ, ನಿಮಗೆ, ಎಲ್ಲರಿಗೂ ಒಟ್ಟಿಗೇ ಆ ನಾಯಿ ಕಡೀಲಿ," ಅವರು ಈ ಪಾಟಿ ಬಯ್ಯುವಾಗ (ಫ಼ೋನಿನಲ್ಲಿ) ನನಗೆ ನಗೆ ಉಕ್ಕುಕ್ಕಿ ಬಂತು.ಜೋರಾಗಿ ನಗುವ ಹಾಗೆಯೂ ಇಲ್ಲ, ಅವರಿಗೆ ಗೊತ್ತಾದರೆ ನನ್ನ, ನನ್ನವರ ಏಳೇಳು ಜನ್ಮ ಜಾಲಾಡಿಯಾರು, ಅನ್ನಿಸಿತು. ಅಲ್ಲ ಇದಕ್ಕೆ ಯಾರನ್ನು ದೂರಿ ಏನು ಪ್ರಯೋಜನ, ಅವರು ಬರುವ ಮೊದಲು ನನಗೆ ಈಗ ಮಾಡಿದ ಹಾಗೆ ಫ಼ೋನ್ ಮಾಡಿದ್ದರೆ?. ಲೂಯಿಯನ್ನ ನೋಡಿದರೆ ಅದು ಬಾಲ ಅಲ್ಲಾಡಿಸುತ್ತಾ ತಾನು ಮಾಡಿದ್ದರ ಬಗ್ಗೆ ನನ್ನಿಂದ ಪ್ರಶಂಸೆ ನಿರೀಕ್ಷಿಸುತ್ತಿದೆ ಅನ್ನಿಸಿತು.ಇದರ ಬಗ್ಗೆ ನಾನು ಅವರನ್ನು ಸಾರಿ ಕೇಳಿದೆ.
ಲೂಯಿಯನ್ನು ತಿರುಗಾಡಿಸಲು ನಾನೇ ಕರೆದೊಯ್ಯಬೇಕಾಗಿತ್ತು, ಎರಡು ಮೂರು ಬಾರಿ ನಾನು ಕರೆದೊಯ್ಯಲು ಮಕ್ಕಳಲ್ಲಿ ಹೇಳಿದಾಗ ಎನೇನೋಸಬೂಬು ಹೇಳಿ ತಪ್ಪಿಸಿಕೊಂಡವವು. ತಿರುಗಾಡಲು ಕರೆದೊಯ್ಯದಿದ್ದರೆ ಅದೂ ನಮ್ಮ ಕುತ್ತಿಗೆಗೇ ಬರುತ್ತದೆ. ಒಂದೇ ವಾರದಲ್ಲಿ ಲೂಯಿಯ ಎಲ್ಲ ಸಂಜ್ಞಾ ಭಾಷೆಗಳನ್ನೂ ನಾವೆಲ್ಲರೂ ಕಲಿತುಕೊಂಡೆವು.ಮುಂಗಾಲಿನಲ್ಲಿ ಗೋಡೆ ಕೆರೆದರೆ ಅದಕ್ಕೆ ಟಾಯ್ಲೆಟ್ ಬಂತು ಎಂದರ್ಥ.ಅದು ಗೆಜ್ಜೆ ಶಬ್ದ ಮಾಡುತ್ತಾ ಮೇಲೆ ಹಾರಿದರೆ ಅದಕ್ಕೆ ಬೋರಾಗಿದೆ, ಹೊರಗಡೆ ತಿರುಗಾಡಬೇಕು ಎಂತರ್ಥ,ಹಾರಿ ಹಾರಿ ಮುಖ ಮುತ್ತಿಕ್ಕಲು ಬಂತೆಂದರೆ ಅದಕ್ಕೆ ತುಂಬಾ ಖುಶಿಯಾಯಿತೆಂದರ್ಥ, ತಾರಕದಲ್ಲಿ ಗಲಾಟೆ ಮಾಡಿದರೆ ಅದಕ್ಕೆ ಹಸಿವೆ ಆಗಿದೆ ಅಂತಲೇ.ನಾವು ವಾಕಿಂಗ್ ಹೋಗುವ ಸಮಯದಲ್ಲಿ ಅದು ಯಾವಾಗಲೂ ನಮ್ಮೊಡನಿರುತ್ತಿತ್ತು,ನಮ್ಮ ಜತೆ ಅದು ತುಂಬಾನೇ ಚೆನ್ನಾಗಿ ಹೊಂದಿಕೊಂಡಿತು, ನಮ್ಮ ಜತೆ ಈಗ ಬೇಕಾಬಿಟ್ಟಿ ಯಾರೂ ಮಾತನಾಡಲು ನಿಲ್ಲುತ್ತಿರಲಿಲ್ಲ ಲೂಯಿಯಿಂದಾಗಿ, ಯಾಕೆಂದರೆ ನಮಗಾಗದವರು(ಇದಿರಿಗಲ್ಲ, ಮಾನಸಿಕವಾಗಿ ತಲೆಬಿಸಿ ಮಾಡುವ ಜನರು) ಯಾರನ್ನೂ ಅದು ಹತ್ತಿರಬಿಡುತ್ತಲೇ ಇರಲಿಲ್ಲ, ಅದಕ್ಕೆ ಹೇಗೆ ಗೊತ್ತಾಗುತ್ತದೋ ಆ ದೇವರೇ ಬಲ್ಲ.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಲೂಯಿಯ ಆರೋಗ್ಯದ ಬಗ್ಗೆ ಕಾಳಜಿಗಾಗಿ ಅವನನ್ನು ಡಾಕ್ಟರರಹತ್ತಿರ ಕೊಂಡೊಯ್ಯಲೇ ಬೇಕಾಗಿತ್ತು."ಗೊತ್ತಾ ನಿಮಗೆ?" ಡಾಕ್ಟರೆಂದರು"ಮನುಷ್ಯರ ಮಗುವಿಗೂ ನಾಯಿ ಮರಿಗೂ ಬೆಳೆಯುವಲ್ಲಿ ವ್ಯತ್ಯಾಸ? ೧:೧೨ ಅಂದರೆ ಮನುಷ್ಯರ ಮಗು ಹನ್ನೆರಡು ತಿಂಗಳು ಎಷ್ಟು ಬೆಳೆಯುತ್ತದೋ ಅಷ್ಟು ಬೆಳವಣಿಗೆ ನಾಯಿ ಮರಿ ಒಂದೇ ತಿಂಗಳಲ್ಲಿ ಪೂರೈಸುತ್ತದೆ.ಇನ್ನೊಂದು ವಿಷಯ ನೀವು ನೆನಪಿನಲ್ಲಿಡಬೇಕಾಗಿದ್ದುದು, ನಾಯಿಗೆ ನೀವು ಎಷ್ಟೇ ತಿಂಡಿ ಹಾಕಿ ಅದಕ್ಕೆ ತೃಪ್ತಿಯೆಂಬುದು ಇರಲ್ಲ, ಅದು ನನಗೆ ನಾಳೆಗೆ ತಿಂಡಿ ಸಿಗದಿದ್ದರೆ? ಎಂಬ ಚಿಂತೆಯಲ್ಲೇ ಯಾವಾಗಲೂ ಇರುತ್ತದೆ, ಅದಕ್ಕೆ ನೀವು ನೀವೇ ಅಂದಾಜು ಮಾಡಿ ಆಹಾರ ಹಾಕಬೇಕಾಗುತ್ತದೆ.ಮಾತನಾಡುತ್ತಾ ಅಡುತ್ತಾ ಡಾಕ್ಟರು ಲೂಯಿಯ ಬಾಯಿಗೆ ಬಾಯಿ ಕವಚವೊಂದನ್ನು ತೊಡಿಸಿದರು. "ಇದು ಯಾಕೆ ಡಾಕ್ಟರೇ ಲೂಯಿ ಯಾರಿಗೂ ಕಚ್ಚಲ್ಲವಲ್ಲ" ಎಂದರೆ, ಲೂಯಿ ಲೂಯಿಯೇ ಎಂದರು ಡಾಕ್ಟರು.ಲೂಯಿಯನ್ನು ಹಿಡಿದು ಮಲಗಿಸಿ ಚುಚ್ಚು ಮದ್ದು ಚುಚ್ಚಿಯೇ ಬಿಟ್ಟರು. ನನಗಂತೂ ಒಂದೇ ಬಾರಿಗೆ ಹೊಸ ಲೂಯಿಯನ್ನು ಕೊಳ್ಳುವಷ್ಟು ಬಿಲ್ಲು ತೆರಲೇ ಬೇಕಾಯಿತು.
ಲೂಯಿಯನ್ನು ನೋಡಿದಾಗಲೆಲ್ಲಾ ನನಗೆ ತಂದೆಯವರು ಹೇಳುತ್ತಿದ್ದಮಾತು ನೆನಪಿಗೆ ಬರುತ್ತದೆ. "ಋಣಾನುಬಂಧ ರೂಪೇಣಾಂ ಪಶು ಪತ್ನಿ ಸುತ ಆಲಯ".ಇದು ಎಲ್ಲಿಯದ್ದೋ ಇದಕ್ಕೂ ನಮಗೂ ಎಂತಹಾ ಸಂಬಂಧ? ಅದಕ್ಕೆ ಹಾಕಿದ ಅನ್ನ ಮಾತ್ರದ ಕೃತಜ್ಞತೆ ಇದಾಗಿರಲಿಕ್ಕಿಲ್ಲ.ಒಂದು ದಿನ ಲೂಯಿ ಒಂದು ವಿಚಿತ್ರ ಸ್ವರದಲ್ಲಿ ಕೂಗಿಕೊಂಡಾಗ, ಇವಳು ಗಾಬರಿಯಾಗಿ ಕಟ್ಟಿದ್ದ ಹಗ್ಗ ಬಿಚ್ಚಿದಳು. ಲೂಯಿ ಸೀದಾ ಅಡುಗೆ ಮನೆಗೆ ಓಡಿ ಅಲ್ಲಿ ಎಲ್ಲಾ ಕಡೆ ಮೂಸುತ್ತಾ ಪುನಃ ವಿಚಿತ್ರ ಧ್ವನಿ ಹೊರಡಿಸತೊಡಗಿತಂತೆ.ಇವಳು ಗಾಬರಿಯಾಗಿ ನನಗೆ ಫ಼ೋನಾಯಿಸಿದಳು. ನಾನು ಆಫ಼ೀಸಿನಿಂದ ಓಡಿ ಬಂದೆ, ಹುಡುಕಿ ನೋಡಿದಾಗ ಹಾವೊಂದು ಕಂಡು ಬಂತು. ಪ್ರಾಯಶಃ ಇಲಿಯನ್ನು ಅರಸಿ ಪೈಪಿನ ಮುಖಾಂತರ ಮೇಲೆ ಬಂದಿತ್ತದು, ಮತ್ತು ನಮ್ಮ ಲೂಯಿಯ ಸೂಕ್ಷ್ಮ ಗೃಹಿಕೆಗೆ ಸಿಕ್ಕಿ ಅದು ನಮಗೆ ಮುನ್ಸೂಚನೆ ನೀಡಿತು.ಅದು ನಮಗೆ ತಿಳಿಸದಿದ್ದರೆ? ..ನನ್ನವಳ ಲೂಯಿಯ ಬಗೆಗಿನ ಅಭಿಪ್ರಾಯ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದ್ದ ಹಾಗೆ ಕಂಡಿತು.
(ಮುಂದುವರಿಯುವುದು)
ಶ್ವಾನ ಪುರಾಣಮ್ 1 :
Comments
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by makara
ಉ: ಶ್ವಾನ ಪುರಾಣಮ್ 2
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by manju787
ಉ: ಶ್ವಾನ ಪುರಾಣಮ್ 2
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by partha1059
ಉ: ಶ್ವಾನ ಪುರಾಣಮ್ 2
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by ಗಣೇಶ
ಉ: ಶ್ವಾನ ಪುರಾಣಮ್ 2
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by Chikku123
ಉ: ಶ್ವಾನ ಪುರಾಣಮ್ 2
ಉ: ಶ್ವಾನ ಪುರಾಣಮ್ 2
In reply to ಉ: ಶ್ವಾನ ಪುರಾಣಮ್ 2 by kavinagaraj
ಉ: ಶ್ವಾನ ಪುರಾಣಮ್ 2