ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು ಜಂತ್ರಗುಡ್ಡೆಗೆ ಕೂಡ ಅನ್ವಯಿಸುತ್ತದೆ.
ನಿಮಗೆಲ್ಲಾ ಅಮೇರಿಕಾ ಅಮೇರಿಕಾ ಚಿತ್ರ ನೆನಪಿರಬೇಕು. ಹೇಗೆ ಮರೆಯಬಲ್ಲಿರಿ. ರವಿಚಂದ್ರನ್ ಬಂದ ನಂತರ ಬಂದ ಕೆಲವೇ ಕೆಲವು ಸ್ವಂತ ಕಥೆಯ(ಇಲ್ಲಿಯವರೆಗಿನ ನಂಬಿಕೆ) ಉತ್ತಮ ಚಿತ್ರಗಳಲ್ಲಿ ಇದೂ ಒಂದು. ಅದು ಕನ್ನಡ ಚಿತ್ರರಂಗ ರಾಷ್ಟ್ರೀಕೃತ(?)ಗೊಳ್ಳುತ್ತಿದ್ದ ಸಮಯ. ಜಾಗತೀಕರಣವೆಂದು ಯಾಕೆ ಕರೆಯುವುದಿಲ್ಲವೆಂದರೆ ನಾವಿನ್ನೂ ಭಾರತ ಬಿಟ್ಟು ಹೊರಗಿನಿಂದ ಚಿತ್ರಕಥೆಗಳನ್ನು ಕದಿಯುವ ಮಟ್ಟಕ್ಕೆ ಬೆಳೆದಿಲ್ಲ. ಭಾರತವೆಂದರೂ ತಪ್ಪೇ... ತಮಿಳ್, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ಬಿಟ್ಟು ಎಂದರೆ ಸರಿಯಾಗುತ್ತದೆ. ಇರಲಿ.. ಡಬ್ಬಿಂಗ್ ಆಗಲಿ ರಿಮೇಕ್ ಆಗಲಿ ಅದರ ಬಗ್ಗೆ ನನಗಿರುವ ಸಿಟ್ಟಿಗೆ ಈ ಲೇಖನವನ್ನು ಯಾಕೆ ಬಲಿಪಶು ಮಾಡಲಿ.
ಈ ಚಿತ್ರದ ಒಂದು ಹೆಸರು ಅಷ್ಟೇನೂ ಪ್ರಸಿದ್ಧಿಯಾಗದಿದ್ದರೂ ಹೆಸರುವಾಸಿಯಾಗಲು ಒಂಭತ್ತು ವರ್ಷಗಳ ನಂತರ 'ಮುಂಗಾರು ಮಳೆ' ಎಂಬ ಚಿತ್ರ ಬರಬೇಕಾಯಿತು. ಎಲ್ಲೋ ಕ್ಯಾಲಿಫೋರ್ನಿಯಾದಲ್ಲಿ ಕುಳಿತಿದ್ದ ಈ ಸಂಗೀತಗಾರನ ಹೆಸರು ಮನೋಮೂರ್ತಿ. 'ಅಮೇರಿಕಾ ಅಮೇರಿಕಾ' ಚಿತ್ರದ ಹಾಡುಗಳೆಲ್ಲವೂ ಈಗಲೂ ಆಪ್ತವೆನಿಸುತ್ತದೆ. ಅದರಲ್ಲಿ ಬಹುಶಃ ಎಲ್ಲರಿಗೆ ಇಷ್ಟವಾದ ಹಾಡು ಯಾವುದು ಎಂದರೆ 'ನೂರು ಜನ್ಮಕೂ ನೂರಾರು ಜನ್ಮಕೂ' ಎನ್ನುವುದು ಹೆಚ್ಚಿನವರ ಉತ್ತರವಾಗಿರುತ್ತದೆ ಎಂದು ನನ್ನ ಅನಿಸಿಕೆ.
ಪಂಚರಂಗಿ ಧಾಟಿಯಲ್ಲಿ ಇಲ್ಲಿಗೇನಾದರೂ ವಿಷಯ ಶುರುವಾಯ್ತು ಅಂದ್ಕೊಳಿ, ನನಗೇನೂ ಬೇಸರವಿಲ್ಲ.
ನೂರೂ ಜನ್ಮಕೂ ನೂರಾರೂ ಜನ್ಮಕೂ ಹಾಡಿನಲ್ಲಿ ರಮೇಶ್ ಟಾಪ್ ಟು ಬಾಟಮ್ ಬಿಳಿ ಬ್ಲೇಸರಿನಲ್ಲಿ ಮತ್ತು ಹೇಮಾ ನೀಲಿ ವನ್ ಪೀಸಿನಲ್ಲಿ ಚಿತ್ರಿಸಲ್ಪಟ್ಟ ದೃಶ್ಯವಿದೆಯಲ್ಲ ಅದು ಜಂತ್ರಗುಡ್ಡೆಯಲ್ಲಿ ನಡೆದಿದ್ದು. ಹೀಗೆ ಮರ ಸುತ್ತುವ ಹಾಡುಗಳ ಪಟ್ಟಿಗೆ ಇದೂ ಸೇರ್ಪಡೆಯಾಗಿ ಜಂತ್ರಗುಡ್ಡೆ ಪರೋಕ್ಶವಾಗಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿತು. ಆದರೆ ಅಲ್ಲಿಯವರೆಗೆ ಜಂತ್ರಗುಡ್ಡೆಯೆನ್ನುವುದು ಊರಿನ ಇನ್ನೊಂದು ಹಾರರ್ ಸ್ಥಳವಾಗಿತ್ತು.
ಜಂತ್ರ ಬಸ್ ನಿಲ್ದಾಣಕ್ಕೆ ಮುಖ ಮಾಡಿ ಹಬ್ಬಿರುವ ಜಂತ್ರಗುಡ್ಡೆಯೆನ್ನುವುದನ್ನು ಕಿ.ಮೀ ಲೆಕ್ಕದಲ್ಲಿ ಆಳೆದರೆ ಒಂದು ಇರಬಹುದೇನೋ, ಗೊತ್ತಿಲ್ಲ. ಆದರೆ ಊರಿನ ಮಾರಿ ಅಲ್ಲಿ ಇದ್ದಾಳೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ರಾತ್ರಿಯಲ್ಲಿ ಅಲ್ಲಿ ಬೆಂಕಿಯ ಉಂಡೆಗಳು ಕಾಣಿಸುತ್ತಿದ್ದುವಂತೆ. 'ಮನುಷ್ಯನೇ ದೊಡ್ಡ ಮಾರಿ, ಅವನು ಹೋದರೆ ಯಾವ ಮಾರಿಯೂ ಅಲ್ಲಿ ಇರಲಾರಳು' ಎಂದು ಅಷ್ಟು ಸಣ್ಣ ಪ್ರಾಯದಲ್ಲಿ ನಾನು ಹೇಳಿದ್ದು ಅಮ್ಮನಿಗೆ ಜ್ನಾನಿ ಹೇಳಿದಂತಾಗದೆ ಉದ್ಧಟತನದಂತೆ ಕಂಡಿತ್ತು. ಅಲ್ಲಿಗೆ ಹೋಗುತ್ತೇನೆ ಎನ್ನುವ ನನ್ನ ಮಾತುಗಳಿಗೆ ಹೋದರೆ ಬೆನ್ನು ಸುಲಿದು ಬಿಡುತ್ತೇನೆ ಎಂದ ಅವಳ ಮಾತಿಗೆ ನಾನು ಹೆದರುವವನಲ್ಲ ಎಂದು ಹಳೆಯ ಭಾಗಗಳಲ್ಲಿ ನಿಮಗೆ ಗೊತ್ತಾಗಿದೆ.
ಅಲ್ಲಿಗೆ ಹೋದ ಅನುಭವದ ಮೊದಲು ಮಾರಿಯ ಬಗ್ಗೆ ಹೇಳುವುದು ಮುಖ್ಯ. ಮಾರಿಯ ಕಲ್ಪನೆ ಹೇಗೆ ಶುರುವಾಯಿತೋ. ಆದರೆ ಊರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವವಳು ಎಂದು ನಂಬಲಾಗುತ್ತದೆ. ಹಾಗೆಯೇ ಅವಳು ಮುನಿದರೆ ಊರಿಗೆ ಊರೇ ನಾಶವಾಗುತ್ತದೆ ಎಂದು ವರ್ಷಕ್ಕೊಮ್ಮೆ ಕೋಳಿ ಅರ್ಪಿಸಿ ನೆಂಜಿ ನೆಂಜಿ ತಿನ್ನುತ್ತಾರೆ. ಕಾಲರಾ, ಪ್ಲೇಗ್ ಮುಂತಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡದಿದ್ದ ಕಾಲದಲ್ಲಿ ಇಂತಹ ನಂಬಿಕೆಯೊಂದು ಸೃಷ್ಟಿಯಾಗಿರಬೇಕು. ಇದು ಈಗಲೂ ನಡೆಯುತ್ತಿದೆಯೋ ಗೊತ್ತಿಲ್ಲ.
ಜಂತ್ರಗುಡ್ಡೆಗೆ ಹೋಗಬೇಕು ಎನ್ನುವ ಆಸೆಗೆ ಇಂಬು ಸಿಕ್ಕಿದ್ದು ನನ್ನ ಕ್ರಿಕೆಟ್ ಬಳಗದಿಂದ. ಎಲ್ಲರಲ್ಲೂ ಸೈಕಲ್ ಇದ್ದಿದ್ದ ಸಮಯವದು. ಒಂದು ಸಾಯಂಕಾಲ ಹೊರಟೇ ಬಿಟ್ಟೆವು. ವರ್ಷ ನೆನಪಿಲ್ಲ. ಯಾವುದೇ ಭಯವಿರಲಿಲ್ಲ. ಏನೇನು ಕಾಣಬಹುದೆಂಬ ಕುತೂಹಲವಿತ್ತು. ಪಶ್ಛಿಮದಲ್ಲಿ ಬೆಳ್ಳಿಯ ರೇಖೆಯಂತೆ ಕಾಣುವ ಅರಬ್ಬೀ ಸಮುದ್ರ, ದೂರದಲ್ಲಿ ಕಾಣುವ ದೀಪಸ್ತಂಭ(ಬಹುಶಃ ಕಾಪು), ಸೂಡದ ಹೊಳೆ, ಪೂರ್ವದಲ್ಲಿ ಕಾಣುವ ಪಶ್ಚಿಮ ಘಟ್ಟ, ಅಲ್ಲೆಲ್ಲೋ ಸಿಕ್ಕಿಸಿ ಇಟ್ಟಂತೆ ಕಾಣುವ ನಿಟ್ಟೆ ಕಾಲೇಜು, ನಂದಳಿಕೆ, ಎಂ ಆರ್ ಪಿ ಎಲ್... ಈಗ ಹೋದರೆ ನಾಗಾರ್ಜುನ ಕೂಡ ಕಾಣಬಹುದು. ಅವತ್ತು ಆ ಸ್ಥಳ ನನ್ನನ್ನು ಸ್ಪರ್ಶಿಸಿದಷ್ಟು ಬೇರೆ ಯಾರನ್ನೂ ಸ್ಪರ್ಶಿಸಿರಲಾರದು, ಏಕೆಂದರೆ ಮತ್ತೆ ಅವರು ಯಾರೂ ಬರದಿದ್ದರೂ ಏಕಾಂತ ಕಳೆಯಲು ನಾನು ಹೆಚ್ಚಾಗಿ ಅಲ್ಲಿಗೆ ಬರುತ್ತಿದ್ದೆ. ಅಲ್ಲಿನ ನೀರವತೆ ನನ್ನನ್ನು ಸೆಳೆಯುತ್ತಿತ್ತು.
ಬದಲಾವಣೆಯೆನ್ನುವುದು ಪ್ರಕೃತಿಯ ನಿಯಮವಂತೆ. ನಿಜಕ್ಕೂ ಬದಲಾವಣೆ ಎನ್ನುವುದು ಪ್ರಕೃತಿಯ ಮಟ್ಟಿಗೆ ಪುನರಾವರ್ತಿಸುವುದೋ ಎಂಬ ಜಿಜ್ನಾಸೆ ನನ್ನನ್ನು ಯಾವತ್ತೂ ಕಾಡುತ್ತಿರುತ್ತದೆ. ಆದರೆ ಕಣ್ಣೆದುರಿಗೆ ಬದಲಾಗುವುದೆಲ್ಲಾ ಪ್ರಕೃತಿ ನಿಮಯವೆಂದು ಒಪ್ಪಿ ಸುಮ್ಮನಿರುತ್ತೇನೆ. ಈಗ ಅದೇ ಜಂತ್ರ ಗುಡ್ಡೆಯ ಎರಡೂ ಬದಿ ಮನೆಗಳು ಸ್ಥಾಪಿತವಾಗಿವೆ. ಜಂತ್ರಗುಡ್ಡೆಯ ಮೇಲೆಯೇ ಒಂದು ಸಿಮೆಂಟಿನ/ಬಾವಿ ವರ್ಕ್ಸ್ ಅಂಗಡಿಯೊಂದು ಸ್ಥಾಪಿತವಾಗಿದೆ. ಈಗ ಅಲ್ಲಿ ಮಾರಿ ಇದ್ದಳು ಎನ್ನುವುದನ್ನೂ ಜನರು ಮರೆತಿದ್ದಾರೆಯೋ ಎಂದೆನಿಸುತ್ತದೆ. 'ರೈಸ್ ಆಫ್ ನೇಶನ್ಸ್' ಕಂಪ್ಯೂಟರ್ ಗೇಮಿನಂತೆ ನಗರ ಬೆಳೆಯುತ್ತಾ ಅದರ ವ್ಯಾಪ್ತಿಯೂ ದೊಡ್ಡದಾಗಿ ಮಾರಿಯ ವ್ಯಾಪ್ತಿಯೂ ದೊಡ್ಡದಾಗಿ ಅವಳು ಅಲ್ಲಿಂದ ಗುಳೇ ಎದ್ದಿದ್ದಾಳೆ ಎಂದು ನನಗೆ ನಾನೇ ಹೇಳಿಕೊಂಡು ನಗುತ್ತೇನೆ.
Comments
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by gopaljsr
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by manju787
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by ksraghavendranavada
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by sasi.hebbar
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by gopinatha
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by ಗಣೇಶ
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
In reply to ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ) by kavinagaraj
ಉ: ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)