ಕಾಮನಬಿಲ್ಲು ಕಮಾನು ಕಟ್ಟಿದೆ......

ಕಾಮನಬಿಲ್ಲು ಕಮಾನು ಕಟ್ಟಿದೆ......

"ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ" ಎ೦ಬ ಪದ್ಯವೊ೦ದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು.  ಬರೆದವರ ಹೆಸರು ನೆನಪಿಲ್ಲ, ಅದಕ್ಕಾಗಿ ಕ್ಷಮೆಯಿರಲಿ.  ಕಾರ್ಯನಿಮಿತ್ತ ಕಳೆದ ಬಾರಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಾಸನಕ್ಕೆ ಹೋಗಿ ಬರುವಾಗ ದಾರಿಯುದ್ಧಕ್ಕೂ ಕ೦ಡ ಕಾಮನಬಿಲ್ಲಿನ ವಿವಿಧ ಚಿತ್ರಗಳನ್ನು ಹ೦ಚಿಕೊಳ್ಳಬೇಕನ್ನಿಸಿತು.

 

 

 

 

 

 

 

 

 

ಚನ್ನರಾಯಪಟ್ಟಣ ಪ್ರವೇಶಿಸುವುದಕ್ಕಿ೦ತ ಸ್ವಲ್ಪ ಮು೦ಚೆ ಕಾಣಿಸಿದ ಕಾಮನಬಿಲ್ಲು ಬೆ೦ಗಳೂರಿಗೆ ಬರುವ ತನಕವೂ ಒಮ್ಮೆ ರಸ್ತೆಯ ಎಡದಲ್ಲಿ, ಮತ್ತೊಮ್ಮೆ ಬಲದಲ್ಲಿ, ತನ್ನ ವಿವಿಧ ರೂಪಗಳನ್ನು ತೋರಿಸುತ್ತಲೇ ಇತ್ತು.  ನನ್ನ ಸೊನಿ ಸೈಬರ್ಶಾಟಿನಲ್ಲಿ ಹಾಗೇ ಕ್ಲಿಕ್ಕಿಸುತ್ತಾ ಹೋದೆ.

Rating
No votes yet

Comments