ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
ಆಧಾರದ ಪಿಕ್ನಿಕ್
ನಾನು ಮೊನ್ನೆ ಮೊನ್ನೆ ತಮ್ಮನ ಮನೆಗೆ ಹೋಗಿ ಬಂದಾಗಿನಿಂದ ಯಾಕೋ ಈ ಆಧಾರ್ ಗುರುತು ಪತ್ರ ಮಾಡಿಸಿಕೊಳ್ಳಲೇ ಬೇಕೆಂಬ ತಲುಬು ಮನಸ್ಸಿನ ತುಂಬ ನನ್ನಾವರಿಸಿತ್ತು.ಅದಕ್ಕೆ ಕಾರಣ ಬೆಂಗಳೂರಿಗೆ ಬಂದು ಸುಮಾರು ಐದು ವರುಷಗಳಾದರೂ ಇನ್ನೂ ನನ್ನ ಓಟರ್ ಕಾರ್ಡ್ ಮಾಡಿಸಲಾಗಲಿಲ್ಲ . ಅದೇಕೋ ಮೂರು ಮೂರು ಸಾರಿ ನನ್ನ ಅರ್ಜಿ ಕೊಟ್ಟರೂ ಯಾವ್ಯಾವುದೋ ಕಾರಣಗಳಿಂದ ಅದು ಕ>ಬು ಸೇರಿರುತ್ತಿತ್ತು ಅಂತ ಕಾಣ್ಸುತ್ತೆ. ಅದೇ ಕಾರಣವಿರಬಹುದೇನೋ ನನ್ನ ಮನಸ್ಸು ಇದಕ್ಕೆ ಒಡಂಬಡಿಸಿದ್ದು. ಅದಿರಲಿ. ತಮ್ಮ ನನಗೆ ಇಡೀ ಬೆಂಗಳೂರಿನಲ್ಲಿಯೇ ಎಲ್ಲಾ ಕಡೆ ಬೆಂಗಳೂರು ವನ್ ಆಫೀಸುಗಳಲ್ಲೂ
ಬಿ ಬಿ ಎಮ್ ಪಿ ಆಫೀಸುಗಳಲ್ಲಿಯೂ ಆಗುತ್ತೆ ಅಂದದಕ್ಕೆ ಸರಿ ಮಲ್ಲೇಶ್ವರಮ್ ನಲ್ಲೂ ಇದೆ ಅಂದದಕ್ಕೋ ಏನೋ ಕಿವಿ ಚುಳ್ಳೆರಿಸಿತ್ತು, ಸರಿಯಾಗಿ ವಿಳಾಸ ಹೇಳು ಎಂದೆ ಮಲ್ಲೇಶ್ವರಮ್ಮ ನಲ್ಲೇ ಇರೋ ನಾನು ಎನ್ ಆರ್ ಕಾಲೊನಿಯಲ್ಲಿದ್ದ ಆತನನ್ನು ಕೇಳುತ್ತಿರುವುದೂ ಒಂದು ವಿಚಿತ್ರವೇ, "ಅದೇ ಗೀತಾಂಜಲಿ ಥಿಯೇಟರ್ ಇಲ್ಲವೇನೋ ಅದರ ಹತ್ತಿರವೇ" ಎಂದ. "ಅರೇ ಅದೆಲ್ಲಿದೆ ಮರಾಯಾ" ಎಂದು ಕೇಳಿದೆ ಆತುರದಿಂದ, ಬಾಕಿ ಬಿಲ್ಡಿಂಗ್ಸ್ ಕಾಣದಿದ್ದರೂ ಥಿಯೇಟರ್ ಎಂದರೆ ಈಗಲೂ ನನಗೆ ಆಪ್ತವೇ. "ಅರೇ ನಿನಗೆ ಗೊತ್ತಿಲ್ಲವಾ ಅದೇ ಬಿಗ್ ಬಜಾರ್ ಇದೆಯಲ್ಲಾ? ಅದೇ ಕಟ್ಟಡ ಇದ್ದ ಜಾಗದಲ್ಲಿ ಮೊದಲೊಂದು ಥಿಯೇಟರ್ ಇತ್ತು ಅದೇ ಗೀತಾಂಜಲಿ" ಎಂದನಾತ.
ಪಕ್ಕನೆ ನನಗೆ ಸುಮಾರು ವರ್ಷಗಳಹಿಂದೆ ರಾತ್ರೆ ಹನ್ನೆರಡು ಗಂಟೆಯ ಹೊತ್ತಿಗೆ ಯಾವುದೋ ಸಿನೇಮಾ ನೋಡಿ ವಾಪಸ್ಸು ಬರುವಾಗ ನನ್ನನ್ನು ಪೋಲೀಸು ಹಿಡಿದದ್ದು, ನಾನು ಹೆದರಿರುವಾಗ ಆತನೇ ನನ್ನ ಸಮಾಧಾನ ಮಾಡಿ ಶಾಂತಿ ಸಾಗರ್ ತೋರಿಸಿದ್ದು ನೆನಪಾಯ್ತು.
ಸಂಜೆಯ ಶನಿವಾರದ ಗಾಳಿಸೇವನೆಯಲ್ಲಿ ನಾನೂ ನನ್ನ ಧರ್ಮ ಪತ್ನಿ ಇಬ್ಬರೂ ಹೊರಟೆವು. ಮೊದಲನೆಯದಾಗಿ ಬಿಗ್ ಬಜಾರ್ ನ ಹತ್ತಿರ ವಿದ್ದ ಬಿಬಿಎಮ್ ಪಿ ಆಫೀಸಿಗೆ ಹೋದೆವು. ಆತ ಸಾರಾ ಸಗಟಾಗಿ ನಮ್ಮನ್ನು ತಿರಸ್ಕರಿಸಿಯೇ ಬಿಟ್ಟ ." ಯಾರ್ರೀ ಹೇಳಿರೋದು? ನಮ್ಮ ಕೆಲಸ ಮಾಡಲೇ ನಮಗೆ ಪುರುಸೊತ್ತಿಲ್ಲ ಮತ್ತೆ ಆಧಾರಾನಾ? "
ಸರಿ ಇನ್ನುಳಿದುದು "ಬೆಂಗಳೂರು ಒಂದು" ಅದೆಲ್ಲಿದೆ...?
ಅದೇ ಅಮ್ಮಣ್ಣಿ ಕಾಲೇಜಿನ ಪಕ್ಕದಲ್ಲಿ, ಸರಿಯಾಗಿ ಹೇಳಬೇಕೆಂದರೆ ಕೇಂದ್ರೀಯ ವಿಧ್ಯಾಲಯ ಮತ್ತು ಅಮ್ಮಣ್ಣೀ ಕಾಲೆಜಿನ ಮಧ್ಯದಲ್ಲಿದೆ ಅದು, ಈ ಸಾರಿ ನನ್ನ ಧರ್ಮ ಪತ್ನಿ ಹೇಳಿದ್ದಳು.
ಸರಿ ಅಂತಾ ಅದೇ ಹುರುಪಿನಲ್ಲಿ ಅಲ್ಲಿಗೆ ಹೋದರೆ ಅಲ್ಲಿನ ಸಲಹಾಕಾರ "ಆ ಅದೇಶ ಇನ್ನೂ ಬಂದಿಲ್ಲ ಸಾರ್ , ನೀವು ವಿಚಾರಿಸುತ್ತಾ ಇರಿ ಯಾವಾಗ ಬೇಕಾದರೂ ಆರ್ಡರ್ ಬರಬಹುದು" ಎಂದು ಹೇಳಿ ನಮ್ಮ ಆಸೆಗೆ ತಣ್ಣೀರೆರೆಚಿದ. ಯಾವುದೋ ಹಳೇ ರಿಸೀದಿಯನ್ನು ಕೊಟ್ಟು "ಅದರಲ್ಲಿ ಬರೆದಿದೆ ನಮ್ಮ ಕರೆವಾಣಿ ನಂಬರ್ . ಆಗಾಗ್ಗೆ ವಿಚಾರಿಸುತ್ತಾ ಇರಿ" ಎಂದಿದ್ದ, ನಿರಾಸೆ ಯಲ್ಲಿ ಹಾಗೇ ಮನೆಗೆ ಬಂದೆವು. ನನಗಂತೂ ಎಲ್ಲಾ ಬೆಂಗಳೂರಿಗರೂ ಆಧಾರ ಮಾಡಿಸಿಕೊಂಡಿದ್ದಾರೆ ಅನ್ನಿಸ್ಸಿತ್ತು. ನಮ್ಮದು ಮಾತ್ರ ಬಾಕಿ ಅಂತ.
ಹದಿನಾರನೇ ತಾರೀಖು ಎಲ್ಲಾ ವಾರ್ತಾ ಪತ್ರಿಕೆಗಳಲ್ಲೂ ಪ್ರಚಾರವಾಯ್ತು ,ಆಧಾರ ಪ್ರಮಾಣ್ ಪತ್ರ ಈಗ ಬೆಂಗಳೂರು ವನ್ ಆಫೀಸುಗಳಲ್ಲಿ ಮಾಡಿಸತೊಡಗಿದ್ದಾರೆ ಎಂತ. ಅದನ್ನು ನೋಡಿ ನಾವೂ ಹೋಗಲೇ ಬೇಕು ಎಂದು ಕೊಂಡೆವು.
ಆದರೆ ಮಾರನೆಯ ದಿನವೇ ಹೋಗಲು ನಮಗೆ ಸರಿಯಾದ ಸಮಯ ಸಿಗಲೇ ಇಲ್ಲ.
ಅಂತೂ ೧೮ರಂದು ನಾನೂ ಇವಳೂ ಹೊರಟೆವು, ವಿಶು ( ನನ್ನ ತಮ್ಮ - ಆತ ಅಂಚೆ ಇಲಾಖೆಯಲ್ಲಿದ್ದಾನೆ, ಅವನ ಕಾರ್ಡ್ ಆಗಲೇ ಆಗಿ ಬಿಟ್ಟಿದೆ) ಮೊದಲೇ ಹೇಳಿಟ್ಟಿದ್ದರಿಂದ ಯಾವದೆಲ್ಲಾ ಕಾಗದ ಬೇಕಾಗಿದೆಯೋ ಅವನ್ನೆಲ್ಲಾ ತೆಗೆದುಕೊಂಡು ಹೊರಟಿದ್ದೆವು. ಸರಿಯಾಗಿ ಒಂಬತ್ತೂ ಮುಕ್ಕಾಲಿಗೆ ಅಲ್ಲಿಗೆ ತಲುಪಿದೆವು. ಒಳ್ಳೆಯ ಸ್ವಾಗಥ ಸಿಕ್ಕಿತು ನಮಗೆ ಅವರು ಅಲ್ಲಿಂದ ನಮಗೆ ನಮ್ಮ ಮನೆಯಲ್ಲಿರುವ ಸದಸ್ಯರಷ್ಟೆ ಫಾರಮ್ ಸಿಕ್ಕಿತು ಅದನ್ನು ಅಲ್ಲಿಯೇ ತುಂಬಿಸಿ ತೋರಿಸಿದಾಗ ಒಂದು ಸಣ್ಣ ಚೀಟಿಯಲ್ಲಿ ೨೬ ನೇ ತಾರೀಖಿಗೆ ಹತ್ತು ಗಂಟೆಗೆ ಬರಲು ತಿಳಿಸಿದ್ದರು, ಅದರಲ್ಲಿ ನಮ್ಮ ಕ್ರಮ ಸಂಖ್ಯೆ ೮ ರಿಂದ ೧೧ ಇತ್ತು( ನಮ್ಮಲ್ಲಿನ ನಾಲ್ಕು ಜನರಿಗೆ). ಆದಿನಕ್ಕೆ ನಮ್ಮ ಕರಿ ಹಲಗೆ( ಅಲ್ಲ ಅದು ಈಗ ಬಿಳಿ ಹಲಗೆ- ನಮಗೆ ಮರೆತು ಹೋಗ ಬಹುದಾದ ಎಲ್ಲಾ ವಿಷಯಗಳನ್ನು ನಾವು ಇದರಲ್ಲಿ ಬರೆದೇ ಇಟ್ತಿರುತ್ತೇವೆ)
ನಾವು ನಾಲ್ವರೂ ೨೬ ನೆಯ ತಾರೀಖು ಎಲ್ಲಾ ಕಾಗದಗಳನ್ನೂ( ಮೂಲ ಪ್ರತಿ) ತೆಗೆದಿಟ್ಟಿದ್ದೆವು. ನಿಜವಾಗಿ ನಾವು ನಡೆದೇ ಹೊರಟಿದ್ದೆವು. ಸರಿಯಾಗಿ ಒಂಬತ್ತೂ ಮುಕ್ಕಾಲಿಗೆ ಅಲ್ಲಿಗೆ ತಲುಪಿದೆವು. ನಮ್ಮನ್ನು ಯಾರೆಂದುಕೊಂದರೋ ಏನೋ ಅಲ್ಲಿದ್ದ ಎರಡು ಪೋಲೀಸರು ಮತ್ತು ಮೂಲ ಪ್ರತಿಯನ್ನು ವೀಕ್ಷಿಸಿ ಸಲಹೆ ಕೊಡುವವ, ಎದ್ದು ನಿಂತರು ನಾನೇ ನಾಚಿಕೆಯಿಂದ ನನ್ನ ವಿವರಣೆ ಕೊಟ್ಟೆ. ಆದರೆ ನನ್ನ ಪತ್ನಿಯ ಮತ್ತು ಮೊದಲ ಮಗನ ಕಾಗದಗಳನ್ನೇನೋ ಅವನು ವೀಕ್ಷಿಸಿ ತನ್ನ ಒಪ್ಪಿಗೆ ಮುದ್ರೆ ಅಂಕಿಸಿದ. ಆದರೆ ಸಣ್ನವನ ವಿಷಯದಲ್ಲಿ ಆತ ನನ್ನ ಯಾವುದೇ ಮಾತನ್ನೂ ಒಪ್ಪಿಕೊಳ್ಳಲಿಲ್ಲ.
ಕಾರಣ ನಮ್ಮ ಪಡಿತರ ಚೀಟಿ ಮಾಡಿಸುವಾಗ ದುರದೃಷ್ಟವಶಾತ್ ಸಣ್ಣವನಭಾವ ಚಿತ್ರ ಸೇರಿಸಲಾಗಲಿಲ್ಲ ( ಆ ದಿನ ಆ ಸಮಯದಲ್ಲಿ ಆತ ಶಾಲೆಗೆ ಹೋಗಿದ್ದ) ಅನಂತರ ಅದೇಕೋ ಪುನಹ ಆತನ ಹೆಸರೇನೋ ಅದರಲ್ಲಿದ್ದರೂ ಭಾವ ಚಿತ್ರ ಸೇರಿಸಲಾಗಿರಲಿಲ್ಲ. ಈ ಸಾರಿ ಅವನ ಶಾಲೆಯವರು ಅವನ ಗುರುತು ಪತ್ರ ಮಾಡಿಸದೇ ಇದ್ದುದೂ ಸೇರಿ ಆ ಸಲಹಾಕಾರ ಅವನನ್ನು ಆಧಾರ್ ಪತ್ರದ ಪಟ್ಟಿಗೆ ಸೇರಿಸಲು ಒಪ್ಪಲೇ ಇಲ್ಲ ಸುತರಾಮ್. ಅದರಲ್ಲೂ ಆತನ ವ್ಯಾಸಂಗ ಪತ್ರ ತಂದಿದ್ದರೂ ಅದರಲ್ಲಿಯೂ ಆತನ ಭಾವ ಚಿತ್ರ ಅಂಟಿಸಿರಲಿಲ್ಲ. ನನ್ನ ಧರ್ಮ ಪತ್ನಿ ಈ ಬಗ್ಗೆ ಹೇಳಿದ್ದರೂ ನಾನು ಒಪ್ಪಿರಲಿಲ್ಲ, ನಾನು ಸಾರಿಗೆ ಸಂಸ್ಥೆಯವರ ಪಾಸ್ ನಲ್ಲಿ ವಿಶ್ವಾಸವಿಟ್ಟಿದ್ದೆ . ಅದಾದರೂ ಸಾಕಾಗಬಹುದು ಏಕೆಂದರೆ ಅದರಲ್ಲಂತೂ ಅವನ ಭಾವಚಿತ್ರ ಇದ್ದೇ ಇದೆಯಲ್ಲ ಎಂದು ನನ್ನ ನಂಬುಗೆ ಕೈ ಕೊಟ್ಟಿತ್ತು.
ಆಗಲೇ ಚಿಕ್ಕವನ ಮುಖವೂ ಮ್ಲಾನವಾಗಿತ್ತು.
"ನೀವು ಓದು ಬರಹ ಕಲಿತವರೇ ಹೀಗೆ ಮಾಡಿದರೆ ಹೇಗೆ ಸರ್, ನಿಮ್ಮ ಆಧಾರ ಎಪ್ಲಿಕೇಷನ್ ಅರ್ಜಿಯಲ್ಲಿ ಹಿಂದುಗಡೆ ಏನೆಲ್ಲಾ ತರಬಹುದು ಎಂಬುದರ ಪಟ್ಟಿಯೇ ಇದೆ , ಹಾಗಿರುವಾಗ.... " ಸಲಹಾಕಾರ ಹೇಳುತ್ತಿರಬೇಕಾದರೆ " ನಾನು ನಿಜ ನಮ್ಮದೇ ತಪ್ಪು ಬಿಡಿ , ಪುನಹ ನಮಗೆ ಮುಂದಿನ ನಮ್ಮ ಸರದಿಯ ತಾರೀಖು ಕೊಡಿ ಎಂದೆ.
ಆತ ಈಗಂತೂ ಮೊದಲು ನಿಮ್ಮ ಮೂವರ ಗುರುತು ಪರಿಚಯ ಮತ್ತಿತರ ಎಲ್ಲಾ ವಿಷಯಗಳನ್ನು ತುಂಬಿಸಿಯೇ ನನ್ನ ಬಳಿ ಬನ್ನಿ ನಾನು ಮತ್ತೆ ಚಿಕ್ಕವನಿಗಾಗಿ ಮಾತ್ರ ಮುಂದಿನ ಸರದಿಯ ಗುರುತು ಪತ್ರ ಕೊಡುತ್ತೇನೆ,ಆದರೂ ನಿಮ್ಮ ಸೂಚನೆಗಾಗಿಮುಂದಿನ ತಿಂಗಳು ಹದಿನೈದರ ತಾರೀಖಿನ ನಂತರವೇ ನಿಮ್ಮ ಸರದಿ ಬರುತ್ತೆ ಎಂದ.
ಹಿಂದಿನ ದಿನ ಬಂದು ಪೂರ್ತಿಯಾಗದೇ ಇರುವವರೂ ಅಲ್ಲಿದ್ದರು, ಒಬ್ಬನಂತೂ ತನ್ನ ಸರದಿ ಈಗ ಬಂದರೆ ಸಾಕು ಎಂಬುವಂತೆ ಎಲ್ಲರಲ್ಲೂ ಕೇಳತೊಡಗಿದ್ದ, ಆದರೆ ನಾನು ನನ್ನದೇ ಜರ್ಬಿನಲ್ಲಿ , ನನ್ನ ಸರದಿಯಾದ ಮೇಲೆಯೇ ನಿಮ್ಮದು ಮಾಡಿಸಿಕೊಳ್ಳಿ ಎಂದಿದ್ದೆ ಆ ಮಹಾಶಯನಲ್ಲಿ. ನನ್ನ ಈ ನಿರ್ಧಾರ ತಪ್ಪು ಎಂದು ಮಾರನೆಯ ದಿನವೇ ನನಗರಿವಾಗಲಿತ್ತು.
ನನ್ನ ಸರದಿ ಬಂದಾಗ ಮೊದಲು ಕನ್ನಡಲ್ಲಿ ಹಾಗೂ ಆಂಗ್ರೇಜಿಯಲ್ಲಿ ನಮ್ಮ ಹೆಸರು ವಿಳಾಸ ಮತ್ತು ಹುಟ್ಟಿದ ವರ್ಷ ಮುಂತಾದ ವಿಷಯಗಳನ್ನು ತುಂಬಿಸುವಾಗ( ಕಂಪ್ಯೂಟರಿನಲ್ಲಿ)
ನಮಗೇ ತೋರಿಸಿ ನಮಗೆ ಒಪ್ಪಿಗೆಯಾದ ಮೇಲೆಯೇ ಮುಂದುವರಿಯುತ್ತಾರೆ. ಆದರೆ ಭಾವಚಿತ್ರ ಅಷ್ಟು ಸಮರ್ಪಕವಾಗಿ ಬಂದಿಲ್ಲ ಎನ್ನಿಸಿತ್ತು. ಕಣ್ಣುಗಳ ಚಿತ್ರವನ್ನೂ, ಕೈ ಬೆರಳಚ್ಚುಗಳನ್ನೂ ತೆಗೆದುಕೊಳ್ಳುತ್ತಾರೆ .
ನಾವು ಹೊರಡಲಿರುವಾಗ ಪಕ್ಕದ ಪೋಲೀಸ್ ಹೇಳಿದ " ಸಾರ್ ನೀವು ನಿಮ್ಮ ಮಗನ ವ್ಯಾಸಂಗ ಪತ್ರದಲ್ಲಿ ಅವನ ಭಾವಚಿತ್ರವನ್ನು ಸೇರಿಸಿ ಆತನ ಶಾಲೆಯಿಂದ ಬರೆಸಿ ಮೊಹರೆ ಹಾಕಿಸಿ ತನ್ನಿ, ನಾಳೇನೇ ನಾನು ನಿಮಗೆ ಇದನ್ನು ಮಾಡಿಸಿಕೊಡುತ್ತೇನೆ" ಎಂದಿದ್ದ.
ಆದರೆ ನಮಗೆ ನಂಬಿಗೆ ಇರಲಿಲ್ಲ.
ಆದರೆ ಅಚ್ಚರಿಯೆಂಬಂತೆ ನಾವು ಮಾರನೆಯ ರಾತ್ರೆ ಒಂಬತ್ತೂ ಮುಕ್ಕಾಲಿಗೆ ಬೆಂಗಳೂರು ನಂಬರ್ ಒಂದು ಆಫೀಸಿಗೆ ಹೋದಾಗ ಯಾರೂ ಬಂದಿರಲಿಲ್ಲವಾದುದರಿಂದ ಸರದಿಗೆ ಕಾಯುವ ಪ್ರಮೇಯವೇ ಇಲ್ಲದೇ ನಮ್ಮ ಚಿಕ್ಕವನನ್ನು ಕರೆದು ಕುಳ್ಳಿರಿಸಿ ಅವನ ವಿವರಗಳೆಲ್ಲವನ್ನೂ ಕಂಪ್ಯೂಟರಿನಲ್ಲಿ ಸಂಗ್ರಹಿಸಿಕೊಂಡರು. ಬರೇ ಹತ್ತು ನಿಮಿಷ ಅಷ್ಟೆ , ಚಿಕ್ಕವನ ಮುಖವೂ ಅರಳಿತ್ತು.
ಇದಕ್ಕಾಗಿ ರಾತ್ರೆಯಲ್ಲಿ ಬೆಳಗಿನವರೆಗೆ ಕುಳಿತು ಎಲ್ಲರ ಅಹವಾಲುಗಳನ್ನೂ ಬೇಸರಿಸದೇ ಕೇಳುತ್ತಾ ಎಲ್ಲರ ವಿವರಗಳನ್ನು ಸಂಗ್ರಹಿಸಿಕೊಳ್ಳುತ್ತಿರುವ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲೇ ಬೇಕು.
ನಾವು ಅವರೆಲ್ಲರಿಗೂ ನಮ್ಮ ಅನೇಕಾನೇಕ ಧನ್ಯವಾದಗಳನ್ನರ್ಪಿಸಿ ಬಂದೆವು
ನೀವೂ ಮಾಡಿಸಿಕೊಳ್ಳಿ
ಬರೇ, ನಿಮ್ಮ ಗುರುತು ಪತ್ರ, ವಿಳಾಸದ ಪ್ರೂಫ್, ಮತ್ತು ಜನ್ಮ ದಿನದ ಪ್ರೂಫ್ ಮಾತ್ರವೇ ಬೇಕಾಗಿದ್ದುದು, ನಿಮ್ಮ ಮನೆಯವರ ಸಂಬಂಧ ಬೇಕಿದ್ದಲ್ಲಿ ಸೇರಿಸಬಹುದು ಬೇಡವಾದರೆ ಬೇಡ, ಕನ್ನಡದಲ್ಲಿ ಅಥ್ವಾ ಇಂಗ್ಲೀಶಿನಲ್ಲಿ ಅಪ್ಲಿಕೇಶನ್ ಸಿಗುತ್ತೆ( ಅವರೇ ನಿಮ್ಮಲ್ಲಿ ಕೇಳುತ್ತಾರೆ) ಮೂಲಪ್ರತಿಯಲ್ಲದೇ ಯಾವುದೇ ಪ್ರತಿಯ ಅವಶ್ಯಕಥೆಯಿಲ್ಲ, ಮೂಲ ಪ್ರತಿಯ ಸ್ಕಾನ್ ಪ್ರತಿ ಅವರೇ ತೆಗೆದುಕೊಳ್ಳುತ್ತಾರೆ. ಎರಡು ತಿಂಗಳಲ್ಲಿ ನಮಗೆ ನಮ್ಮ ಅಧಾರ್ ಕಾರ್ಡ್ ಸಿಗಬಹುದು.
ನಿಮ್ಮ ಗುರುತು ಪತ್ರಕ್ಕಾಗಿ ಪಾಸ್ ಪೋರ್ಟ್, ಪಾನ್ ಕಾರ್ಡ್, ಪಡಿತರ ಚೀಟಿ, ವೋಟರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ ಮುಂತಾದ ೧೭ ಪ್ರಾಮಾಣ ಪತ್ರಗಳ ಮೂಲಪ್ರತಿಯನ್ನು,( ಇಷ್ಟು ಪತ್ರಗಳಲ್ಲಿ ಯಾವುದೋ ಒಂದು ಮೂಲ ಪ್ರತಿ ತೋರಿಸಿದರೆ ಸಾಕು ) ವಿಳಾಸಕ್ಕಾಗಿ ಪಾಸ್ ಪೋರ್ಟ್, ಪಾನ್ ಕಾರ್ಡ್, ಪಡಿತರ ಚೀಟಿ, ವೋಟರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ ಮುಂತಾದ ೨೯ ಪ್ರಮಾಣ ಪತ್ರಗಳ ಮೂಲಪ್ರತಿಯನ್ನು ಕೊಡಬಹುದು ( ಇಷ್ಟು ಪತ್ರಗಳಲ್ಲಿ ಯಾವುದೋ ಒಂದು ಮೂಲ ಪ್ರತಿ ತೋರಿಸಿದರೆ ಸಾಕು )
ಜನ್ಮ ದಿನಕ್ಕಾಗಿ ಜನನ ಪ್ರಮಾಣ ಪತ್ರ , ಅಥವಾ ನಮ್ಮ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್, ಅಥವಾ ಪಾಸ್ ಪೋರ್ಟ್ ಇತ್ಯಾದಿ ನಾಲ್ಕು ಪ್ರಾಮಾಣ ಪತ್ರಗಳ ಮೂಲಪ್ರತಿಯನ್ನು ತೋರಿಸಬಹುದು.( ಇಷ್ಟು ಪತ್ರಗಳಲ್ಲಿ ಯಾವುದೋ ಒಂದು ಮೂಲ ಪ್ರತಿ ತೋರಿಸಿದರೆ ಸಾಕು )
ಇವೆಲ್ಲಾ ವಿಷಯಗಳೂ ಆಧಾರ ಪ್ರಮಾಣ ಪತ್ರದ ಅಪ್ಲಿಕೇಶನ್ ನ ಹಿಂದುಗಡೆ ಕೊಟ್ಟಿರುತ್ತಾರೆ.
ದಿನದಲ್ಲಿಯಾದರೆ ಅಂಚೆ ಇಲಾಖೆಯ ಆಯ್ಕೆಯಾದ ದಪ್ತರುಗಳ್ಲಿ ಮಾಡಿಸಿಕೊಳ್ಳಬಹುದು. ಅಲ್ಲವಾದರೆ ಬಿಬಿಎಮ್ಪಿ ಯ ಆಯ್ಕೆಯಾದ ಆಫೀಸುಗಳಲ್ಲಿ ಮತ್ತು ರಾತ್ರೆ ಯಾದರೆ ಬೆಂಗಳೂರು ವನ್ ಆಫೀಸುಗಳಲ್ಲಿ ಮಾಡಿಸಿಕೊಡುತ್ತಾರೆ
ಈಗೀಗ ಅದರ ಫಾರ್ಮ್ ಸಿಗುತ್ತಿಲ್ಲವಾದರೆ ನೆಟ್ ನಿಂದ ಸಹಾ ಅದನ್ನು ತರಿಸಿಕೊಳ್ಳಬಹುದು.
www.iaadhaar.com/enrollment-form
ಆಧಾರ್ ಬ್ರಾಂಡ್ ಹೆಸರಿನಲ್ಲಿ ಹೊಸದಾಗಿ ಹೊಸ ಲೋಗೋ ಹೊಂದಿರುವ ‘Unique Identification Number (UID)’, ಈಗಿನ ಬಿಸಿಬಿಸಿ ಸುದ್ದಿಯಾದ ಇದು ನಮ್ಮ ಭಾರತದ ಪ್ರತಿಯೊಬ್ಬರಿಗೂ ಕೊಡುವ ಪ್ರಮಾಣ ಪತ್ರವಾಗಿದೆ.
ಚಿತ್ರಗಳು ಆಧಾರ್ ನೆಟ್
Comments
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by makara
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by manju787
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by kavinagaraj
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by manju787
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by ಗಣೇಶ
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by gopinatha
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???
In reply to ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..??? by ಗಣೇಶ
ಉ: ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???