ಅಂಗಳಕೆ ಮತ್ತೊಮ್ಮೆ ಪತ್ರದೊಂದಿಗೆ

ಅಂಗಳಕೆ ಮತ್ತೊಮ್ಮೆ ಪತ್ರದೊಂದಿಗೆ

 ಅದೆಂಥ ಸೆಳೆತ ಆ ನಿನ್ನ ಕಣ್ಣುಗಳದು?

ಮಬ್ಬುಕವಿದ ಹೃದಯಕೆ ಹಿಡಿದಿವೆ ದೀವಿಗೆ. 
 
ಸಂಜೆಯ ಮಬ್ಬುಗತ್ತಲಲಿ ಗೂಡಿಗೆ ಮರಳಿ ಬರುವ ಹಕ್ಕಿ ಜೊತೆಗಾರನನ್ನು/ ಳನ್ನು ಕೂಡಿದಂತ ಬೆಚ್ಚನೆಯ ಭಾವ ನಿನ್ನ ಸೇರಿದಾಗಲೆಲ್ಲ.
 ಆಹಾರವನ್ನರಸಿ ಸುಸ್ತಾಗಿ ವಾಪಸು ಬಂದ ಹಕ್ಕಿಯಂತೆ ನಾನು ಬದುಕನ್ನರಸಿ ನಿನ್ನ ಮಡಿಲಿಗೆ ಬಂದಿರುವೆನು. ಸಿಕ್ಕ ಪ್ರೀತಿಯ ಕಾಳುಗಳನು ಒಂದೊಂದೇ ಗುಟುಕು ನೀಡಿ ನಿನ್ನ ಕಾಯುವೆ.
 ನೀನು ನನ್ನನ್ನು, ನನ್ನ ಕನಸಿನರಮನೆಯನ್ನು ನನಗಿಂತಲೂ ಚೆನ್ನಾಗಿ ಕಾಯುವೆ ಎಂದು ಗೊತ್ತು. ತಪ್ಪು ಒಪ್ಪುಗಳನು ಯೋಚಿಸಿದರೆ ಮನಸು ಮುದುರಿಕೊಳ್ಳುತ್ತದೆ . ಮಳೆಯಲ್ಲಿ ತೊಯ್ದ ಗುಬ್ಬಿಯಂತೆ.
 ಆದರೆ ನಿನ್ನ ಸಾಮೀಪ್ಯ, ಸಾಂತ್ವನ, ಪ್ರೀತಿ ಮತ್ತು ನಿನ್ನಲ್ಲಿ ಮಾತ್ರವೇ ಸಿಗುವಂಥ ಆ ಪುಟ್ಟ ಪುಟ್ಟ ಖುಶಿಗಳನ್ನೆಲ್ಲ ನೆನೆದಾಗ ಹೊಂಬಿಸಿಲು ಮೂಡಿದಂತಾಗುತ್ತದೆ.
 ಬದುಕಿನ ಕೊನೆಯವರೆಗೂ ಜೊತೆಗೂಡಿ ನಡೆಯುವೆವು ಎಂಬ ಅದಮ್ಯ ವಿಶ್ವಾಸದೊಂದಿಗೆ- ದಿನಗಳನು ದೂಡುತಿರುವೆ.
 ಜೊತೆ ಸಾಗುವ ಪ್ರತಿಜ್ಞೆ ಮಾಡಿಕೊಂಡಿರುವ ನಮಗೆ - ಇದು ಎಂದಿಗೂ ಮರೆಯದಿರಲಿ ಎಂದು ಹಾರೈಸುತ್ತ ...... ನಿನ್ನವ. 

Comments