ಶಿಕ್ಷಕ
ಕವನ
ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ
ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ
ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ
ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ.
ಅರಳುವ ಹೊಸಕಾಂತಿಯ ಮೊಗ್ಗಿನ
ಶಿಶುವಿಗೆ ನೀ ಬೇರು ಆಗು ಶಿಕ್ಷಕ
ನಿನ್ನ ಆಸರೆಯೊಳಗೆ ಘಮಗಮಿಸುವ ನಿನ್ನ
ಶ್ವೇತ ಪುಷ್ಪವ ಅರಳಿಸು ಬಾ ಶಿಕ್ಷಕ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
Comments
ಉ: ಶಿಕ್ಷಕ